ಶಿವಮೊಗ್ಗ ದಸರಾದಲ್ಲಿ ಇಡ್ಲಿ-ಬಾಳೆಹಣ್ಣು ತಿಂದು ಸಖತ್ ಎಂಜಾಯ್ ಮಾಡಿದ ಟ್ರಾಫಿಕ್ ಪೊಲೀಸರು! 

ಹಂಚಿಕೊಳ್ಳಿ
WhatsApp Facebook X Telegram
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ಟ್ರಾಫಿಕ್__ ಪೊಲಿಸರು
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ಟ್ರಾಫಿಕ್__ ಪೊಲಿಸರು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ದಸರಾ ಮಹೋತ್ಸವದ ಸಂಭ್ರಮದ ನಡುವೆ ಮಹಾನಗರ ಪಾಲಿಕೆಯು ನಗರದ ಶಿವಪ್ಪ ನಾಯಕನ ಪ್ರತಿಮೆಯ ಬಳಿ ಆಯೋಜಿಸಿದ್ದ ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ವಿನೂತನ ಸ್ಪರ್ಧೆಯು ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿತು. ಕರ್ತವ್ಯದ ಒತ್ತಡದಲ್ಲಿದ್ದ ಸಂಚಾರಿ ಪೊಲೀಸರಿಗಾಗಿ ವಿಶೇಷವಾಗಿ ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯು ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.

ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡ ಸ್ಪರ್ಧಾಳುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಬಹುಮಾನಗಳನ್ನು ಪಡೆದರು . ಸಂಚಾರಿ ಪೊಲೀಸರ ಪುರುಷರ ವಿಭಾಗದ ಇಡ್ಲಿ ಸ್ಪರ್ಧೆಯಲ್ಲಿ ಪ್ರವೀಣ್ ಪಾಟೀಲ್ 12 ಇಡ್ಲಿಗಳನ್ನು ತಿಂದು ಪ್ರಥಮ ಸ್ಥಾನ ಪಡೆದರೆ, ರಮೇಶ್ ದ್ವಿತೀಯ ಹಾಗೂ ಸಂತೋಷ್ ತೃತೀಯ ಸ್ಥಾನ ಗಳಿಸಿದರು. ಇನ್ನು ಮಹಿಳಾ ಸಂಚಾರಿ ಪೊಲೀಸರ ವಿಭಾಗದಲ್ಲಿ ದಿವ್ಯಾ ಟಿ.ಡಿ. ಪ್ರಥಮ, ರಾಧಾ ದ್ವಿತೀಯ ಮತ್ತು ಸರಳಾ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.

ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲೂ ಸಹ ತೀವ್ರ ಪೈಪೋಟಿ ಕಂಡುಬಂದಿತು . ಪುರುಷರ ಇಡ್ಲಿ ಸ್ಪರ್ಧೆಯಲ್ಲಿ ಮಿಥುನ್ ಪ್ರಥಮ ಸ್ಥಾನ ಪಡೆದರೆ, ಮಣಿಕಂಠ ಮತ್ತು ಪ್ರವೀಣ್ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. 

ಮತ್ತೊಂದೆಡೆ ಮಹಿಳೆಯರಿಗಾಗಿ ನಡೆದ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮಿ ಬರೋಬ್ಬರಿ 13 ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಗೀತಾ ಹಾಗೂ ನೀಲಾ ಕುಮಾರಿ ನಂತರದ ಸ್ಥಾನಗಳನ್ನು ಪಡೆದರು . ದಸರಾ ಮಹೋತ್ಸವದ ಸಾಂಸ್ಕೃತಿಕ ಹಾಗೂ ಇಲಾಖಾ ಕಾರ್ಯಕ್ರಮಗಳ ಜೊತೆಗೆ ಈ ರೀತಿಯ ಮನರಂಜನಾ ಕ್ರೀಡೆಗಳು ಎಲ್ಲರ ಮುಖದಲ್ಲೂ ನಗು ಮೂಡಿಸುವಲ್ಲಿ ಯಶಸ್ವಿಯಾದವು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor