ತೀರ್ಥಹಳ್ಳಿ : ಹಳ್ಳದ ಮೇಲೋಂದು ರಸ್ತೆ! ರಸ್ತೆಯೊಳಗೊಂದು ಸುರಂಗ! ಬಸವಾನಿ ರೋಡಲ್ಲಿ ನೋಡಲು ಸಿಗುತ್ತಿದೆ ಸಾವಿನ ಗ್ಯಾರಂಟಿ 

ಹಂಚಿಕೊಳ್ಳಿ
WhatsApp Facebook X Telegram
ಹೊಂಡ ಬಿದ್ದಿರುವ ಬಸವಾನಿ ರಸ್ತೆ
ಹೊಂಡ ಬಿದ್ದಿರುವ ಬಸವಾನಿ ರಸ್ತೆ

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಸರ್ಕಾರಿ ಕೆಲಸ ದೇವರ ಕೆಲಸವೇನೋ ಸರಿಯೇ! ಆದರೆ ಅದೇ ಸರ್ಕಾರಿ ಕೆಲಸವನ್ನ ದೇವರು ಸಹ ಮೆಚ್ಚೋದಿಲ್ಲ! ಇದಕ್ಕೆ ಈ ಸುದ್ದಿಯಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋನೇ ಸಾಕ್ಷಿ! ನಮ್ಮ ಮಲೆನಾಡು ಟುಡೆಗೆ ಓದುಗರೊಬ್ಬರು ಖುದ್ದಾಗಿ ವಿಡಿಯೋ ಮಾಡಿ, ಅವಸ್ಥೆ ಹೀಗಿದೆ ಸರ್​, ದಯವಿಟ್ಟು ಯಾರದ್ದಾದರೂ ಜೀವ ಹೋಗುವ ಮುನ್ನ ಸಂಬಂಧಪಟ್ಟವರ ಗಮನಕ್ಕೆ ತನ್ನಿ ಅಂತಾ ರಿಕ್ವೆಸ್ಟ್​ ಮಾಡಿ ವಾಟ್ಸಾಪ್ ಮಾಡಿದ್ದರು. 

ಅವರ ಹೆಸರು ಹೇಳಿದರೆ, ಮತ್ತೆ ಯಾರದರೂ ಅವರನ್ನ ಬೆರೆಸ್ಕೊಂಡು ಬರಹಬಹುದೇನೋ! ಆದರೆ ವಿಷಯ ಇಷ್ಟು!,  ಬಸವಾನಿ-ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ, ಹಳುಪಣಿ ಗ್ರಾಮದ ವನದುರ್ಗಾ ದೇವಸ್ಥಾನದ ಬಳಿ ಇರುವ ರಸ್ತೆಯ ಮೇಲೆ ಸುರಂಗವವೊಂದು ಸೃಷ್ಟಿಯಾಗಿದೆ. ಯಾವ ರಸ್ತೆ ಪೂರ್ಣ ಅಡಿಮೇಲಾಗುತ್ತೋ ಗೊತ್ತಿಲ್ಲ. ಅಪಾಯ ಉಂಟು ಅಂತಾ, ಪ್ಲಾಸ್ಟಿಕ್​  ಟೇಪ್ ಅಂಟಿಸಿ ಒಂದು ಕೋಲ್ ನೆಟ್ಟು ಹೋಗಿದ್ದಾರೆ ಯಾರೋ ಪುಣ್ಯಾತ್ಮರು ಅಷ್ಟು ಬಿಟ್ಟರೆ ಎಂತಹದ್ದು ಮಾಡಿಲ್ಲ. 

ಹಳುವಾಣಿ ಗ್ರಾಮದ ವನದುರ್ಗಾಂಬ ದೇವಸ್ಥಾನದ ಸಮೀಪದಲ್ಲಿ ಬರುವ ಈ ಜಾಗದಲ್ಲಿ ಒಂದು ಕಿರುಸೇತುವೆಯಿದೆ. ಅದಕ್ಕೆ ಬೇಕಾದ ತಡೆಗೋಡೆ ಇಲ್ಲ. ರಸ್ತೆಯು ಇಳಿಜಾರಾಗಿದೆ, ಟು ವೇನಲ್ಲಿ ವೆಹಿಕಲ್ ಸಲಿಸಾಗಿ ಹೋಗುವಷ್ಟು ಜಾಗವಿಲ್ಲ.  ಬಸವಾನಿ–ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಬಸ್‌ಗಳು, ಲಾರಿಗಳು ಸೇರಿದಂತೆ ನಾಲ್ಕು ಚಕ್ರದ ವಾಹನಗಳು ನಿರಂತರವಾಗಿ ಸಂಚರಿಸುತ್ತವೆ. ಇಂತಹ ವಾಹನಗಳು ಸಾಗುವ ಮಾರ್ಗದಲ್ಲಿರುವ ಕಿರುಸೇತುವೆ ಮೇಲೆಯೇ ಹೊಂಡ ಬಿದ್ದಿರುವುದು ಆತಂಕದ ಸಂಗತಿಯೇ ಸರಿ

ಹಾಗಾಗಿ, ಸ್ಥಳಿಯ ಶಾಸಕರ ಗಮನಕ್ಕೆ ಇದನ್ನ ತರಬೇಕಾಗಿದೆ, ಜ್ಞಾನೇಂದ್ರಣ್ಣ ಅವರಷ್ಟೆ ಅಲ್ಲದೆ ತೀರ್ಥಹಳ್ಳಿ ಅಧಿಕಾರಿಗಳು ಇದರ ಬಗ್ಗೆ ಚೂರು ಗಮನ ಕೊಡಬೇಕಾಗಿದೆ. ಹೊಂಡ ಬಿದ್ದಿರುವ ರಸ್ತೆ, ದಿಢೀರ್ ಆಗಿ ದಸೀಲ್ ಅಂತಾ ಕುಸಿದು, ಯಾವುದಾದರೂ ವೆಹಿಕಲ್​ ತಲೆಕೆಳಗಾಗಿ ಪಲ್ಟಿಯಾಗುವ ಮೊದಲು ರಿಪೇರಿ ಕೆಲಸ ಆರಂಭವಾಗಬೇಕಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor