ಶಿವಮೊಗ್ಗ : ಜ್ಞಾನೇಶ್​​ಕುಮಾರ್​ರನ್ನು ಬಿಜೆಪಿ ತನ್ನ ಏಜೆಂಟ್​​ನಂತೆ ಬಳಸಿಕೊಳ್ಳುತ್ತಿದೆ, ಹೆಚ್ ಎಸ್​ ಸುಂದರೇಶ್​​ ವಿಚಾರ ಜಿಲ್ಲಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಮಂಜುನಾಥ್​​ ಭಂಡಾರಿ

ಹಂಚಿಕೊಳ್ಳಿ
WhatsApp Facebook X Telegram
ಹೆಚ್__ ಎಸ್_ ಸುಂದರೇಶ್__ ಹೇಳಿಕೆ ಕುರಿತು ಮಂಜುನಾಥ್___ ಬಂಡಾರಿ ಹೇಳಿಕೆ
ಹೆಚ್__ ಎಸ್_ ಸುಂದರೇಶ್__ ಹೇಳಿಕೆ ಕುರಿತು ಮಂಜುನಾಥ್___ ಬಂಡಾರಿ ಹೇಳಿಕೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗ ಜಂಟಿಯಾಗಿ ಮತದಾರರ ಹಕ್ಕುಗಳನ್ನು ಕಸಿಯಲು ಸಂಚು ರೂಪಿಸಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ವಾಗ್ದಾಳಿ ನಡೆಸಿದ್ದಾರೆ. 

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ತೆರವುಗೊಳಿಸಲು ಅಕ್ರಮ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

 ಈ ಹಿಂದೆ ವಿಪಕ್ಷಗಳ ಶಾಸಕರು ಮತ್ತು ಸಚಿವರನ್ನು ಆಮಿಷವೊಡ್ಡಿ ಸೆಳೆಯುತ್ತಿದ್ದ ಬಿಜೆಪಿ, ನೇರವಾಗಿ ಮತದಾರರ ಹಕ್ಕುಗಳನ್ನು ಕದಿಯುವ ಕೆಲಸಕ್ಕೆ ಕೈಹಾಕಿತು. ಇದೀಗ ತಾಂತ್ರಿಕ ನೆಪ ಹಾಗೂ ಮುದ್ರಣ ದೋಷಗಳನ್ನು ಸೃಷ್ಟಿಸಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವ ಮೂಲಕ ಹೊಸ ಮಾದರಿಯ ಅಕ್ರಮಕ್ಕೆ ಮುಂದಾಗಿದೆ ಎಂದು ಅವರು ದೂರಿದ್ದಾರೆ. 

ಚುನಾವಣಾಧಿಕಾರಿಗಳು ತಟಸ್ಥವಾಗಿ ಕಾರ್ಯನಿರ್ವಹಿಸುವ ಬದಲು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿ ಸರ್ಕಾರ ತನ್ನ ಸ್ವಂತ ಏಜೆಂಟ್‌ನಂತೆ ಬಳಸಿಕೊಳ್ಳುತ್ತಿದೆ ಎಂಬ ಆಪಾದನೆ ಕೇಳಿಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ ಲೋಪ ಎಸಗಿರುವ ಅಧಿಕಾರಿಯನ್ನು ರಕ್ಷಿಸಲು ಬಿಜೆಪಿ ಸರ್ಕಾರವು ಅಧಿವೇಶನದಲ್ಲಿ ಕಾಯ್ದೆ ತಿದ್ದುಪಡಿ ಬಿಲ್ ಪಾಸ್ ಮಾಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್​​.ಎಸ್​. ಸುಂದರೇಶ್​​ ಬಗ್ಗೆ ನಾನೇನು ಹೇಳುವುದಿಲ್ಲ, ಅಧ್ಯಕ್ಷರು ನೋಡಿಕೊಳ್ಳುತ್ತಾರೆ

ಇದೇ ಸಂದರ್ಭದಲ್ಲಿ ಮಂಜುನಾಥ್​ ಭಂಡಾರಿಯವರ ಬಗ್ಗೆ ಸೂಡಾ ಅಧ್ಯಕ್ಷ ಎಚ್​​​​.ಎಸ್​. ಸುಂದರೇಶ್​ ಆಡಿದ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಕ್ಲಾಸ್​ಮೇಟ್​ಗಳಾಗಿದ್ದೆವು. ಅವರು ವಿದ್ಯಾರ್ಥಿ ದೆಸೆಯಿಂದಲೂ ಎನ್​ಎಸ್‌ಯುಐ ಮುಖ್ಯಸ್ಥರಾಗಿ, ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡು ಬಂದಿದ್ದಾರೆ. ಪ್ರಸನ್ನ ಕುಮಾರ್​ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಹೆಚ್​.ಎಸ್. ಸುಂದರೇಶ್​ರವರನ್ನು ಕಾಡಾ ಅಧ್ಯಕ್ಷರನ್ನಾಗಿ ಮಾಡಿದ್ದರು, ಈಗ ಸೂಡಾ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ವೈಯಕ್ತಿಕ ಹೇಳಿಕೆಗೆ ನಾನು ಕಾಮೆಂಟ್​ ಮಾಡುವುದಿಲ್ಲ, ಅದನ್ನೆಲ್ಲಾ ನಮ್ಮ ಜಿಲ್ಲಾಧ್ಯಕ್ಷರಾದ ಹೆಚ್​.ಸಿ. ಯೋಗೀಶ್​​ರವರು ನೋಡಿಕೊಳ್ಳುತ್ತಾರೆ. ಈಗಾಗಲೇ ಅವರಿಗೆ ಶೋಕಾಸ್​ ನೋಟಿಸ್​ ಸಹ ಬಂದಿದೆ ಎಂದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor