ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಕಟವಾಗುವ ಪ್ರತಿನಿತ್ಯದ ಅಡಿಕೆ ದರವನ್ನು ನಮ್ಮ ‘ಮಲೆನಾಡು ಟುಡೆ ಸುದ್ದಿ’ ವೀಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಅದರಂತೆ ಇಂದು ಅಂದರೆ ಸೆಪ್ಟೆಂಬರ್ 08 ರ ಅಡಿಕೆ ರೇಟ್ ಪಟ್ಟಿ ಈಗಷ್ಟೇ ಬಿಡುಗಡೆಯಾಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿನ್ನೆಗೆ ಹೋಲಿಸಿದರೆ ಇಂದು ಅಂದರೆ ಸೆಪ್ಟೆಂಬರ್ 08 ರ ರಾಶಿಇಡಿ ಅಡಿಕೆ ದರದಲ್ಲಿ ಸುಮಾರು 500 ರೂಪಾಯಿಗಳಷ್ಟು ದರ ಹೆಚ್ಚಳವಾಗಿದೆ. ಅದರಂತೆ ಸರಕಿನ ಗರಿಷ್ಠ ದರ ಬರೋಬ್ಬರಿ 85,099 ರೂಪಾಯಿವರೆಗೆ ತಲುಪಿದ್ದು, ಬೆಟ್ಟೆ, ರಾಶಿಇಡಿ ಹಾಗೂ ಗೊರಬಲು ದರಗಳ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ.
ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯ ಸೆಪ್ಟೆಂಬರ್ 08 ರ ಅಡಿಕೆ ದರದ ಕನಿಷ್ಠ, ಗರಿಷ್ಠ ಮತ್ತು ಮಾದರಿ ದರಗಳ ವಿವರ ಇಲ್ಲಿದೆ:
ಸರಕು/ಹಸ: ಕನಿಷ್ಠ ₹52,209, ಗರಿಷ್ಠ ₹85,099 ಹಾಗೂ ಮಾದರಿ ದರ ₹83,996.
ಬೆಟ್ಟೆ: ಕನಿಷ್ಠ ₹52,199, ಗರಿಷ್ಠ ₹61,199 ಹಾಗೂ ಮಾದರಿ ದರ ₹60,139.
ರಾಶಿಇಡಿ: ಕನಿಷ್ಠ ₹48,009, ಗರಿಷ್ಠ ₹52,589 ಹಾಗೂ ಮಾದರಿ ದರ ₹50,089.
ಗೊರಬಲು: ಕನಿಷ್ಠ ₹20,099, ಗರಿಷ್ಠ ₹40,869 ಹಾಗೂ ಮಾದರಿ ದರ ₹39,121.
ಹೊಸರಾಶಿಇಡಿ: ಕನಿಷ್ಠ ₹45,319, ಗರಿಷ್ಠ ₹47,569 ಹಾಗೂ ಮಾದರಿ ದರ ₹47,089.
