ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಡಿಕೆ ಧಾರಣೆ ಪಟ್ಟಿ ಈಗಷ್ಟೇ ಬಿಡುಗಡೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಹಸ ಅಡಿಕೆಯ ಗರಿಷ್ಠ ದರದಲ್ಲಿ ಬರೋಬ್ಬರಿ 5,000 ರೂಪಾಯಿವರೆಗೆ ಏರಿಕೆಯಾಗಿದೆ. ಆದರೆ ರಾಶಿ ಇಡಿ ಅಡಿಕೆ ದರದಲ್ಲಿ ಸುಮಾರು 1,000 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ. ಇನ್ನುಳಿದ ತಳಿಯ ಅಡಿಕೆ ಬೆಲೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿದ್ದು, ಇಂದಿನ ದರ ವಿವರ ಇಲ್ಲಿದೆ:
ಇಂದು ಮಾರುಕಟ್ಟೆಗೆ ಬಂದ ಸರಕು/ಹಸ ಅಡಿಕೆಗೆ ಕನಿಷ್ಠ 61,399 ರೂ., ಗರಿಷ್ಠ 92,299 ರೂ. ಹಾಗೂ ಮಾದರಿ ಧಾರಣೆಯಾಗಿ 89,000 ರೂ. ದಾಖಲಾಗಿದೆ.
ಬೆಟ್ಟೆ ತಳಿಯ ಅಡಿಕೆಗೆ ಕನಿಷ್ಠ 52,019 ರೂ., ಗರಿಷ್ಠ 63,772 ರೂ. ಹಾಗೂ ಮಾದರಿ ದರ 59,099 ರೂ. ಸಿಕ್ಕಿದೆ.
ಅದೇ ರೀತಿ ರಾಶಿ ಇಡಿ ಅಡಿಕೆಗೆ ಕನಿಷ್ಠ 48,509 ರೂ., ಗರಿಷ್ಠ 52,309 ರೂ. ಹಾಗೂ ಮಾದರಿ ದರ 50,089 ರೂ. ನಿಗದಿಯಾಗಿದೆ.
ಗೊರಬಲು ಅಡಿಕೆಗೆ ಕನಿಷ್ಠ 36,199 ರೂ., ಗರಿಷ್ಠ 41,709 ರೂ. ಮತ್ತು ಮಾದರಿ ದರ 39,899 ರೂ.ವರೆಗೆ ವ್ಯಾಪಾರ ನಡೆದಿದೆ.
