16 ವರ್ಷದ ಬಾಲಕನ ಕೈಗೆ ಬೊಲೆರೊ ಕೀ ಕೊಟ್ಟ ತಂದೆಗೆ ₹26,500 ದಂಡ; ವಿಡಿಯೋ ಮಾಡಿ, ಮೆಸೆಜ್ ಕೊಟ್ಟ ಶಿವಮೊಗ್ಗ ಟ್ರಾಫಿಕ್ ಪೊಲೀಸ್

ಹಂಚಿಕೊಳ್ಳಿ
WhatsApp Facebook X Telegram
Shivamogga Court Fines Vehicle Owner ₹26,500 for Allowing Minor to Drive
Shivamogga Court Fines Vehicle Owner ₹26,500 for Allowing Minor to Drive

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಅಪ್ರಾಪ್ತ ಬಾಲಕನಿಗೆ ಮಹೀಂದ್ರಾ ಬೊಲೆರೊ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕರಾದ ತಂದೆಗೆ ಶಿವಮೊಗ್ಗದ ನ್ಯಾಯಾಲಯ (Shivamogga Court Fines) ₹26,500 ದಂಡ ವಿಧಿಸಿದೆ. ಈ ಸಂಬಂಧ ಮಾಲೀಕರ ಬಳಿಯಲ್ಲಿ ಮಕ್ಕಳಿಗ ವೆಹಿಕಲ್ ಓಡಿಸಲು ಅವಕಾಶ ಕೊಡಬೇಡಿ ಎಂಬ ಮೆಸೇಜ್​ ಕೊಡುವ ವಿಡಿಯೋವನ್ನ ಶಿವಮೊಗ್ಗ ಟ್ರಾಫಿಕ್ ಪೊಲೀಸರು ತಮ್ಮ ಅಧಿಕೃತ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹೆಸರಿನ ಸೋಶಿಯಲ್ ಮಿಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ನಡೆದ ಘಟನೆಯ ವಿವರ

2026ರ ಆಗಸ್ಟ್ 16ರಂದು ಸಂಜೆ 5.47ರ ಸುಮಾರಿಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳ್ಳಿ ರಸ್ತೆಯಲ್ಲಿ ಪಿಎಸ್‌ಐ ಸ್ವಪ್ನಾ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ KA-1*-*-6*** ನೋಂದಣಿ ಸಂಖ್ಯೆಯ ಮಹೀಂದ್ರಾ ಬೊಲೆರೊ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.ಈ ವೇಳೆ ವಾಹನ ಚಾಲನೆ ಮಾಡುತ್ತಿದ್ದವನು 16 ವರ್ಷದ ಅಪ್ರಾಪ್ತ ಬಾಲಕ ಎಂಬುದು ತಿಳಿದುಬಂದಿದೆ. (ಅಪ್ರಾಪ್ತನ ಗುರುತು ಬಹಿರಂಗವಾಗದಂತೆ ಆತನ ಹೆಸರು ಪ್ರಕಟಿಸಲಾಗಿಲ್ಲ.) ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಾಹನದ ಮಾಲೀಕರೂ ಆಗಿರುವ ಆತನ ತಂದೆ ******** ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪಶ್ಚಿಮ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2026ರ ಆಗಸ್ಟ್ 27ರಂದು ವಾಹನದ ಮಾಲೀಕರಿಗೆ ₹26,500 ದಂಡ ವಿಧಿಸಿತ್ತು. ಈ ದಂಡವನ್ನ ಕಟ್ಟಿದ ಬಳಿಕ ಮಾಲೀಕರ ಬಳಿಯಲ್ಲಿ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂಬ ಸಂದೇಶ ರವಾನಿಸುವ ವಿಡಿಯೋ ಮೆಸೇಜ್​ ಒಂದನ್ನ ರೆಕಾರ್ಡ್​ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್​ ಮಾಡಿದ್ದಾರೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು

“ವಾಹನದ ಕೀ ನಿಮ್ಮ ಕೈಯಲ್ಲಿದೆ… ನಿಮ್ಮ ಮಗುವಿನ ಭವಿಷ್ಯವೂ ನಿಮ್ಮ ಕೈಯಲ್ಲಿದೆ” ಎಂಬ ಸಂದೇಶದೊಂದಿಗೆ ಅಪ್ರಾಪ್ತರಿಗೆ ವಾಹನ ನೀಡದಂತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor