ದುಡಿಮೆಯಲ್ಲಿ ಬದುಕು ಹುಡುಕುತ್ತಿದ್ದ ಯುವತಿ ಪಾಲಿಗೆ ಯಮನಾಗಿದ್ದು ದೇವರು!

ಹಂಚಿಕೊಳ್ಳಿ
WhatsApp Facebook X Telegram
24-Year-Old Woman Dies in Tipper-Bike Collision Near Nellibeedu

ಮಲೆನಾಡು ಟುಡೆ ಸುದ್ದಿ / ಬ್ಯಾಕೋಡು / ದುಡಿದು ತಿನ್ನೋರಿಗೆ ಸಂಕಷ್ಟ ಜಾಸ್ತಿ ಅಂತೇನೋ ಆಗಾಗ ಗೊಣಗುತ್ತಿರುತ್ತಿರುತ್ತೇವೆ. ಹಾಗಂದುಕೊಂಡೇ ನಾಳಿನ ದುಡಿಮೆಗೆ ಇವತ್ತಿನ ಜೀವನದ ಸ್ಥಿತಿಗೆ ತಮ್ಮನ್ನ ತಾವೇ ಅಣಕಿಸಿಕೊಂಡು ಸಮಾಧಾನವನ್ನೂ ಮಾಡಿಕೊಂಡು ಪಬ್ಲಿಕ್ ಟಿವಿ ರಂಗಣ್ಣರ ರೀತಿಯಲ್ಲಿ ಆಲ್​ ರೈಟ್​ ಮುಂದಕ್ಕೆ ಹೋಗೋಣ ಎಂದುಕೊಳ್ಳುತ್ತೇವೆ.. ಆದರೆ ಈ ಮಾತು ನಿಜ, ದುಡಿದು ಬದುಕುವವರಿಗೆ ಸಂಕಷ್ಟ ಜಾಸ್ತಿ.. ಅಷ್ಟೆಅಲ್ಲ ವಿಧಿಯಾಟವೂ ಜಾಸ್ತಿ.. ಇದಕ್ಕೆ ಸಾಕ್ಷಿ ನಿನ್ನೆ ದಿನ ನಡೆದ ಆ ಒಂದು ಘಟನೆ

ನಡೆದ ಘಟನೆ ಹೀಗಿದೆ, ಸಾಗರ ಬ್ಯಾಕೋಡು ಹತ್ರ ಎಸ್.ಎಸ್. ಬೋಗ್ ಗ್ರಾಮ ಪಂಚಾಯಿತಿ. ಈ ಊರು ಶಿವಮೊಗ್ಗ ಜಿಲ್ಲೆಗೆ ಸೇರಿದ್ದು ಅನ್ನುವುದು ಬಿಟ್ಟರೇ, ಮತ್ತೆಲ್ಲದಕ್ಕೂ ಸಮೀಪ ಸಂಪರ್ಕ ಕರಾವಳಿ ಕಡೆಗೆ. ನಿನ್ನೆ ಇಲ್ಲಿನ ನೆಲ್ಲಿಬೀಡು (Nellibeedu) ವೃತ್ತದ ಬಳಿ ಬೈಕ್​ ಆಕ್ಸಿಡೆಂಟ್​ ಆಗಿತ್ತು. ಈ ಬೈಕ್ ಆಕ್ಸಿಡೆಂಟ್​ನಲ್ಲಿ ಕರೂರು ಹೋಬಳಿ ಮಳೂರು ಗ್ರಾಮದ 24 ವರ್ಷದ ಅರ್ಚನಾ ಎಂಬಾಕೆ ಸಾವನ್ನಪ್ಪಿದ್ದಳು. ಇವರ ತಂದೆ 50 ವರ್ಷದ ನೀಲಕುಮಾರ್​ ಜೈನ್ ಗೆ ತುಂಬಾನೆ ಪೆಟ್ಟು ಬಿದ್ದಿದೆ. ಸದ್ಯ ಮಣಿಪಾಲದಲ್ಲಿದ್ದಾರೆ.

ಅರ್ಚನಾ ಕುಂದಾಪುರದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಹಾಸ್ಟೆಲ್​ ಒಂದರಲ್ಲಿ ವಾರ್ಡನ್​ ಆಗಿದ್ದವರು. ರಜೆ ಅಂತಾ ಊರಿಗೆ ಬಂದಿದ್ದರು. ವಾಪಸ್ ಊರಿಗೆ ಹೋಗುವ ಸಲುವಾಗಿ ಹೊರಟಿದ್ದ ಅವರನ್ನ ತಂದೆ ನೀಲಕುಮಾರ್ ಬೈಕ್​ನಲ್ಲಿ ಕೊಲ್ಲೂರಿನವರೆಗೂ ಬಿಟ್ಟು ಬರಲು ಹೊರಟಿದ್ದರು. ವಿಧಿಯೋ ದೇವರೇ ತಂದಿಟ್ಟ ದುರಾದೃಷ್ಟವೋ ಗೊತ್ತಿಲ್ಲ. ನೆಲ್ಲಿಬೀಡಿನ ಹತ್ತಿರ ಇವರ ಬೈಕ್​ಗೆ ಟಪ್ಪರ್​ ಲಾರಿಯೊಂದು ಎಕ್​ದಮ್ ಡಿಕ್ಕಿ ಹೊಡೆದುಬಿಟ್ಟಿತ್ತು. ಅಷ್ಟೆ, ಅರ್ಚನಾ ಸ್ಪಾಟ್​​ನಲ್ಲೆ ಜೀವ ಬಿಟ್ಟಿದ್ದಳು! ತಂದೆ ಸ್ಥಿತಿ ಇನ್ನೂ ಗಂಭೀರವಾಗಿದೆ.

ತಪ್ಪು ಅವರದ್ದ ಇವರದ್ದ ಎಂಬ ವಿಚಾರವಲ್ಲ. ಕೆಲವು ಕ್ಷಣಗಳವರೆಗೂ ಒಂದು ಸಂತೋಷದ ರಜೆಯ ಕ್ಷಣಗಳನ್ನ ಬ್ಯಾಗಿಗೆ ಹಾಕಿಕೊಂಡು ಅಪ್ಪನ ಹೆಗಲ ಮೇಲೆ ಕೈಯಿಟ್ಟುಕೊಂಡು ಹೊರಟಿದ್ದ ಅರ್ಚನಾರನ್ನ ದೇವರಾದರೂ ಕಾಪಾಡಬಹುದಿತ್ತು. ದುಡಿಯುವ ಮಗಳಿನ್ನೂ ಕೊಲ್ಲೂರಿನವರೆಗೂ ಬಿಟ್ಟು ಬರಲು ಹೊರಟ ಅಪ್ಪನಿಗೆ ಅವರ ಮಗಳಿಲ್ಲ ಎಂದು ಹೇಳುವ ಕೆಟ್ಟಕ್ಷಣವನ್ನು ದೇವರು ತಡೆಯಬಹುದಿತ್ತು.

ಕಾರ್ಗಲ್ ಪೊಲೀಸ್ ಕೇಸ್ ಮಾಡಿದ್ದಾರೆ, ತಪ್ಪು ಮಾಡಿದವರಿಗೆ ಕ್ರಮ ಆಗ್ತದೆ. ಇನ್ಸುರೆನ್ಸ್ ಕ್ಲೇಮ್ ಮಾಡಬಹುದು ಏನೇ ಇರಲಿ. ಆದರೆ ಹೋದ ಜೀವ, ಬದುಕು ಬಾಳಬೇಕಿದ್ದ ಜೀವ ಹೋಗಿದ್ದಕ್ಕೆ ಕಾರಣ ಯಾರು! ವಿಧಿಯಾಟವೋ! ದೇವರ ಲೀಲೆಯೋ!

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor