Shivamogga Humanity / ನಮ್ಮ ಮೂರ್ಖತನವನ್ನು ಮೀರಿದ ವಿದ್ಯೆಯನ್ನ ಪ್ರದರ್ಶಿಸುವುದೇ ಈಗೊಂಥರ ಸ್ಟೇಟಸ್ ಆಗಿದೆ. ಅಂತಹ ಪ್ರಸಂಗಳನ್ನ ತೋರುವುದಕ್ಕೆಂದೆ ಲಕ್ಷ ಲಕ್ಷ ವೇದಿಕೆಗಳು ಸೃಷ್ಟಿಯಾಗಿವೆ. ಆದರೆ ಕೆಲವೊಂದು ಘಟನೆಗಳನ್ನು ನಿಜಕ್ಕೂ ನಾಗರಿಕ ಸಮಾಜ ನೋಡಬೇಕಿದೆ. ಅಂತಹ ಘಟನೆಗಳನ್ನು ತೋರುವುದಕ್ಕೆ ಕೆಲವರಿಗೆ ಇಷ್ಟವಿರುವುದಿಲ್ಲ. ಇದಕ್ಕೆ ಹೊರತಾಗಿ ಅಂತಹದ್ದೊಂದು ಸನ್ನಿವೇಶವನ್ನು ತೋರಿಸುವ ಮತ್ತದರ ಹಿನ್ನೆಲೆಯಲ್ಲಿ ಹೇಳುವ ಉದ್ದೇಶಕ್ಕಾಗಿ ಈ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ನಿಮಗೆಲ್ಲರಿಗೂ ಗೊತ್ತೆ ಇದೆ, ನಿನ್ನೆ ದಿನ ದುರ್ಗದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳ ಜೊತೆಗೆ ತುಂಗಾನದಿಗೆ ಹಾರಿದ ವಿಚಾರ. ಎಲ್ಲಾ ಕಡೆಯಲ್ಲಿ ಈ ಸುದ್ದಿ ತಲುಪಿಯೇ ಇರುತ್ತದೆ. ತುಂಗಾನದಿಯು ಇಂತಹ ಎಷ್ಟೋ ದುರ್ಬಲ ಮನಸ್ಸುಗಳನ್ನ ತನ್ನೊಳಗೆ ಮುಳುಗಿಸಿದ್ದು ಇದೆ, ತೇಲಿಸಿ ಜೀವಕೊಟ್ಟಿದ್ದು ಇದೆ. ಹಾಗೆ ನಿನ್ನೆ 11 ತಿಂಗಳ ಹಸುಗೂಸಿಗೆ ಜೀವ ಕೊಡಿಸಿದ ತುಂಗಾನದಿ, ಅದರ ಭವಿಷ್ಯಕ್ಕಾಗಿ ಮಗುವಿನ ತಾಯಿಯನ್ನ ಸಹ ಉಳಿಸಿತ್ತು. ದುರಾದೃಷ್ಟವಶಾತ್, ಆ ತಾಯಿಯ ಇನ್ನೆರಡು ಲಕ್ಷ್ಮೀಯಂದಿರನ್ನ ತನ್ನೊಳಗೆ ತೇಲಿಸಿಕೊಂಡು ಹೋಗಿದೆ.
ಆದರೆ, ಈ ತಾಯಿ ಮಗುವಿನ ಜೀವ ಉಳಿದಿದ್ದು ಸಹ ಅದೃಷ್ಟವೇನಲ್ಲ! ತುಂಗಾನದಿಯ ಬಳಿಯಿದ್ದು ಮನುಷ್ಯತ್ವ ಹೊಂದಿದ್ದ ಮಂದಿಯ ದುಸ್ಸಾಹಸದಿಂದಾಗಿ.. ತುಂಗೆಯೇ ಅವರಿಗಷ್ಟು ಶಕ್ತಿ ಕೊಟ್ಟಳೋ ಏನೋ ಗೊತ್ತಿಲ್ಲ. ಆದರೆ ತಾಯಿ ಮಕ್ಕಳು ನದಿಗೆ ಬೀಳುವುದ ಕಂಡವರೆ ನೇರವಾಗಿ ಒಂದಿಷ್ಟು ಮಂದಿಗೆ ನೀರಿಗೆ ನೆಗೆದರು. ಇನ್ನೊಂದಿಷ್ಟು ಮಂದಿ ತಮ್ಮ ಕಣ್ಣಳತೆಗೆ ಕಾಣುತ್ತಿದ್ದಂತೆ ಮಗು ಅಲ್ಲಿದೆ ತಾಯಿ ಅಲ್ಲಿದ್ದಾರೆ ಎಂದು ಗುರುತು ಹೇಳುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಮಗುವನ್ನ ರಕ್ಷಿಸಿದ ಈಜುಗಾರರು, ಆ ಮಗುವನ್ನ ಸೇಮ್ ಬಾಹುಬಲಿಯಂತೆ ನೀರಿನಿಂದ ಎತ್ತಿಕೊಂಡು ಬಂದರು, ಮಗುವಿನ ತಲೆಒರೆಸಿ ನೀರು ಕುಡಿದಿದೆಯಾ ಎಂದು ಪರೀಕ್ಷಿಸಿ ಮಗು ಅಳುವುದು ಕಂಡು ಬಚ್ಗಯಾರೇ,, ಬದುಕಿಬಿಟ್ಟಲ್ಲೋ ರಾಜಕುಮಾರ ಅನ್ನುತ್ತಾ ಅಳುವ ಕಣ್ಣನ್ನು ನಗಿಸೋಕೆ ಯತ್ನಿಸಿದ್ದರು.
ಇಷ್ಟರಲ್ಲೆ ತಾಯಿಯು ಸಿಕ್ಕಿದ್ದಳು ಆದರೆ ಆಕೆಯನ್ನು ದಡಕ್ಕೆ ತರಲು ಆಗುತ್ತಿರಲಿಲ್ಲ. ಏಕೆಂದರೆ ಅಲ್ಲಿ ಆಳವಿತ್ತು. ಅದಕ್ಕಾಗಿ ಸಿಕ್ಕ ಪೊದೆಯಂದರ ಮೇಲೆ ಆಕೆಯನ್ನ ಹಿಡಿದಿಟ್ಟುಕೊಂಢಿದ್ದರು. ಜೀವದಾಸೆ ಬಿಟ್ಟೇ ಹಾರಿದ್ದ ಆಕೆಯ ಕೈ ಬಿಟ್ಟರೂ ಮತ್ತೆ ಅವಳು ನೀರಿಗೆ ಹಾರುವ ಸಾದ್ಯತೆ ಇತ್ತು. ಆಕೆಯ ಕೈ ಹಿಡಿದುಕೊಂಡೆ ಇನ್ನೊಬ್ಬ ಈಜುಗಾರ, ಆಳ ನೋಡುತ್ತ ಮುಂದೆ ಸಾಗಿದ ಮತ್ತೊಬ್ಬ ಈಜುಗಾರನ ಸಹಾಯದಿಂದ ದಡಕ್ಕೆ ಕರೆತಂದ. ಅವಳೋ ನನ್ನಿಬ್ಬರ ಮಕ್ಕಳನ್ನ ತಂದುಕೊಡಿ ಸಾರ್ ಕಾಲಿಗೆ ಬೀಳುತ್ತೇನೆ ಎನ್ನುತ್ತಿದ್ದಾಳಾದರೋ ಅಲ್ಲಿದ್ದವರು , ಅವರಿಬ್ಬರು ಹೋದರಮ್ಮ!ಮಕ್ಕಳನ್ನು ನೀರಿಗೆ ಹಾಕುವಾಗ ಯೋಚಿಸಬೇಕಿತ್ತಮ್ಮ! ನಿನ್ನ ಪಾಲಿಗೆ ಈ ಮಗು ರಕ್ಷಿಸಿದ್ದಾರೆ.. ಅದನ್ನು ನೋಡು ಎಂದು ಸಾವರಿಸುತ್ತಿದ್ದರು.
ಇಲ್ಲೆ ಹೇಳೋಕೆ ಒಂದು ಮಾತಿದೆ. ಸೋಶೀಯಲ್ ಮೀಡಿಯಾದಲ್ಲಿ ತೋರಿಸುವ ಪ್ರದರ್ಶಿಸುವ ಆಭಾವಗಳಿಗೆ ಇಲ್ಲೆಲ್ಲೂ ಅಭಾವಗಳಿಲ್ಲ. ಆದರೆ, ನಿನ್ನೆ ಸಂಜೆ ಆರುವರೆಯಿಂದ ರಾತ್ರಿ 8 ಗಂಟೆಯ ವರೆಗೂ ನಡೆದ ಜೀವ ಉಳಿಸುವ ಪ್ರಹಸನದಲ್ಲಿ ಹಿಂದೂ ಮುಸ್ಲಿಮ್ ಎನ್ನದೇ ಜೀವ ಉಳಿಸಲು ನೀರಿಗೆ ಹಾರಿದವರು, ಅವರಿಗೆ ನೆರವಾದವರು, ಸಿಗೋದು ಕಡಿಮೆ, ಸೆರೆ ಸಿಕ್ಕ ಮೊಬೈಲ್ ದೃಶ್ಯವೊಂದರಲ್ಲಿ ನೀವು ಕೇಳಬಹುದು. ಅಲ್ಲಿ ನೀರಿಗೆ ಹಾರಿದವರು ಧರ್ಮ ನೋಡಲಿಲ್ಲ. ಉದ್ದೇಶ ಹುಡುಕಲಿಲ್ಲ. ಅವರಿಗೆ ಆಸೆಯು ಇರಲಿಲ್ಲ. ತಮ್ಮಮ್ಮ ದೇವರನ್ನೆ ನೆನಿಸಿಕೊಂಡು ತುಂಬಿದ ಹೊಳೆಗೆ ಹಾರಿ ತಾಯಿ ಮಗುವಿನ ಜೀವ ಉಳಿಸಿದರು. ತಾವು ಕಲಿತ ವಿದ್ಯೆಯಲ್ಲಿ ಒಬ್ಬರ ಜೀವ ಉಳಿಯುತ್ತೆ ಅಂತನಿಸಿ ಅದಕ್ಕಾಗಿ ಅವರವರ ಜೀವವನ್ನ ಪಣಕ್ಕಿಟ್ಟರು. ಇಡೀ ಸನ್ನಿವೇಶದ ಮುಗಿಯವರೆಗೂ ಯಾರಿಗೂ ಏನೊಂದು ಅನಿಸಲಿಲ್ಲ. ತಾಯಿಯ ತಪ್ಪಿಗೆ ಜರಿದಾದರೂ, ಆ ಪುಟ್ಟ ಮಗುವನ್ನ ಕಾಪಾಡುವ ಸನ್ನಿವೇಶದಲ್ಲಿ ಯಾರೊಬ್ಬರು ಮನುಷ್ಯತ್ವವನ್ನ ಬಿಟ್ಟು ಮತ್ತೇನನನ್ನೂ ಕಾಣಲಿಲ್ಲ. ಇದೇ ನಮ್ಮ ಶಿವಮೊಗ್ಗ..
