ಅರ್ಧ ಕೆಜಿ ಮಾಲಿನ ಜೊತೆ ಜೊತೆಗೆ ಅಭಿ ಸೇರಿ ಇಬ್ಬರ ಬಂಧನ: ಏನಿದು ಪ್ರಕರಣ?

ಹಂಚಿಕೊಳ್ಳಿ
WhatsApp Facebook X Telegram
Bhadravathi Two Arrested with 627g Ganja
Bhadravathi Two Arrested with 627g Ganja

ಮಲೆನಾಡು ಟುಡೆ ಸುದ್ದಿ / ಭದ್ರಾವತಿ/ ಭದ್ರಾವತಿಯ ಗುಡ್ಡದನೇರಳೆಕೆರೆ ಸಿದ್ದರಮಟ್ಟಿ ಹತ್ತಿರ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಭಿ ಮತ್ತು ಆರೀಫ್ ಉಲ್ಲಾ ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಗುಡ್ಡದನೇರಳೆಕೆರೆ ಸಿದ್ದರಮಟ್ಟಿ ಹತ್ತಿರ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಸುಮಾರು 31,350 ರೂಪಾಯಿ ಮೌಲ್ಯದ 627 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor