ಶ್ರಾವಣ ಶಿವರಾತ್ರಿ, ಹಸ್ತ ನಕ್ಷತ್ರಕ್ಕೆ ಶುಕ್ರನ ಪ್ರವೇಶ: ಹಲವರಿಗೆ ಧನಲಾಭ!

ಹಂಚಿಕೊಳ್ಳಿ
WhatsApp Facebook X Telegram
Venus Transit to Hasta Nakshatra Daily Horoscope and Zodiac Effects
Venus Transit to Hasta Nakshatra Daily Horoscope and Zodiac Effects

Hasta Nakshatra / ಮಲೆನಾಡು ಟುಡೆ ಸುದ್ದಿ / ಜ್ಯೋತಿಷ್ಯ / ಇಂದು ಶ್ರಾವಣ ಶಿವರಾತ್ರಿ, ಶುಕ್ರ ಚಂದ್ರನ ಒಡೆತನದ ಹಸ್ತ ನಕ್ಷತ್ರ ಪ್ರವೇಶಿಸುತ್ತಿದ್ದಾನೆ. ಭಗವಂತ ಶಿವನ ಕೃಪೆ ಮತ್ತು ಶುಕ್ರ , ಚಂದ್ರರ ಶುಭ ಪ್ರಭಾವದಿಂದಾಗಿ ಹಲವರಿಗೆ ಧನಲಾಭವಾಗಲಿದೆ. ದೃಕ್ ಪಂಚಾಂಗದ ಪ್ರಕಾರ, ಇಂದು ಅಂದರೆ ಆಗಸ್ಟ್ 11 ಶ್ರಾವಣ ಶಿವರಾತ್ರಿ. ಇಂದೇ ಶುಕ್ರ ಗ್ರಹವು ಚಂದ್ರನ ಮನೆಯಾದ ಹಸ್ತ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇಡೀ ತಿಂಗಳು ಶುಕ್ರ ದೇವನು ಕನ್ಯಾ ರಾಶಿಯಲ್ಲಿಯೇ ಇರಲಿದ್ದಾನೆ. ಪರಿಣಾಮ, ಕೆಲವು ರಾಶಿಗಳಿಗೆ ವಿಶೇಷ ಆರ್ಥಿಕ ಲಾಭ, ಭೌತಿಕ ಸುಖ-ಸೌಲಭ್ಯ, ವೃತ್ತಿಜೀವನದಲ್ಲಿ ಯಶಸ್ಸು ಒಲಿಯಲಿದೆ.

ಯಾವೆಲ್ಲಾ ರಾಶಿಗಳಿಗೆ ಅನುಕೂಲ

ವೃಷಭ : ಐದನೇ ಮನೆಯಲ್ಲಿ ಶುಕ್ರನ ಸಂಚಾರ ಧನಲಾಭ ತಂದುಕೊಡಲಲಿದೆ.ಷೇರು ಮಾರುಕಟ್ಟೆ ಅಥವಾ ಹಳೆಯ ಹೂಡಿಕೆಗಳಿಂದ ಲಾಭವಾಗಬಹುದು. ಪ್ರೀತಿ ಪ್ರೇಮ ವಿಚಾರದಲ್ಲಿ ಹೊಸ ಪ್ರಯಾಣ ಆರಂಭವಾಗಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶ ದೊರೆಯಲಿವೆ.

ಕರ್ಕಾಟಕ : ಮೂರನೇ ಮನೆಯಲ್ಲಿ ಶುಕ್ರನ ಈ ನಕ್ಷತ್ರ ಬದಲಾವಣೆಯು ಧೈರ್ಯ ಮತ್ತು ನೆಟ್‌ವರ್ಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಮಾಧ್ಯಮ, ಕಲೆ, ಬರವಣಿಗೆ ಅಥವಾ ಮಾರ್ಕೆಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದವರಿಗೆ ಸಮಯ ಅತ್ಯಂತ ಶುಭವಾಗಿರಲಿದೆ. ಒಡಹುಟ್ಟಿದವರ ಸಂಪೂರ್ಣ ಬೆಂಬಲ ಸಿಗಲಿದೆ.

ವೃಶ್ಚಿಕ : ಹನ್ನೊಂದನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯಿಂದ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಆಸೆಗಳು ಈಡೇರಲಿವೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಧನಲಾಭ ಸಾಧ್ಯವಿದೆ. ಸಾಮಾಜಿಕ ವಲಯದಲ್ಲಿ ಪ್ರತಿಷ್ಠೆ ಹೆಚ್ಚಲಿದ್ದು, ಉನ್ನತಾಧಿಕಾರಿಗಳ ಸಹಕಾರ ದೊರೆಯಲಿದೆ.

ಮಕರ : ಅದೃಷ್ಟದ (ಒಂಬತ್ತನೇ) ಮನೆಯಲ್ಲಿ ಹಸ್ತ ನಕ್ಷತ್ರದ ಶುಕ್ರ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ. ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor