ಕೆಟಿಎಂ ಡ್ಯೂಕ್​ ಓಡಿಸಿದ ಅಪ್ರಾಪ್ತ ಬಾಲಕ, ಮಾಲೀಕನಿಗೆ ಬಿತ್ತು ಬೃತಹ್​​ ಮೊತ್ತದ ದಂಡ

Published: 28 ಜುಲೈ 2026, 12:02 ಅಪರಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Minor Rides KTM Duke ಶಿವಮೊಗ್ಗ : ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಕೊಟ್ಟಿದ್ದ ವಾಹನದ ಯಜಮಾನನಿಗೆ ನ್ಯಾಯಾಲಯವು ದಂಡ ವಿಧಿಸಿ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿ ಬೈಕ್ ರೈಡ್ ಮಾಡಲು ಅವಕಾಶ ನೀಡಿದ ಮಾಲೀಕನಿಗೆ ಒಟ್ಟು 25,000 ರೂಪಾಯಿಗಳ  ದಂಡ ವಿಧಿಸಲಾಗಿದೆ. ಶಿವಮೊಗ್ಗ : ಖಾಸಗಿ ಹೋಟೆಲ್​ನಲ್ಲಿ ಉದ್ಯಮಿ ನೇಣು ಬಿಗಿದುಕೊಂಡು…

Minor Rides KTM Duke ಶಿವಮೊಗ್ಗ : ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಕೊಟ್ಟಿದ್ದ ವಾಹನದ ಯಜಮಾನನಿಗೆ ನ್ಯಾಯಾಲಯವು ದಂಡ ವಿಧಿಸಿ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿ ಬೈಕ್ ರೈಡ್ ಮಾಡಲು ಅವಕಾಶ ನೀಡಿದ ಮಾಲೀಕನಿಗೆ ಒಟ್ಟು 25,000 ರೂಪಾಯಿಗಳ  ದಂಡ ವಿಧಿಸಲಾಗಿದೆ.

ಶಿವಮೊಗ್ಗ : ಖಾಸಗಿ ಹೋಟೆಲ್​ನಲ್ಲಿ ಉದ್ಯಮಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ?

ವಿನೋಬನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿ ಸೋಮಿನಕೊಪ್ಪ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆಟಿಎಮ್ ಡ್ಯೂಕ್ ಬೈಕ್ ಸವಾರನೊಬ್ಬ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆಯ ರಾಂಗ್​​ ಸೈಡ್​ನಲ್ಲಿ ಬೈಕ್​ ಚಲಾಯಿಸಿಕೊಂಡು ಬಂದಿದ್ದನು.  ಇದನ್ನು ನೋಡಿದ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ, ಬೈಕ್ ಸವಾರಿ ಮಾಡುತ್ತಿದ್ದವನು ಕೇವಲ 17 ವರ್ಷದ ಅಪ್ರಾಪ್ತ ಎಂಬ ವಿಚಾರ ಬೆಳಕಿಗೆ ಬಂದಿದೆ

ಅಪ್ರಾಪ್ತನ ಕೈಗೆ ವಾಹನ ನೀಡಿದ್ದು ಕಾನೂನುಬಾಹಿರ ಆಗಿರುವುದರಿಂದ, ಪೊಲೀಸರು ಬೈಕ್ ಮಾಲೀಕನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ನೋಟೀಸ್ ಜಾರಿಗೊಳಿಸಿ, ನ್ಯಾಯಾಲಯಕ್ಕೆ  ಚಾರ್ಜ್​ ಶೀಟ್​ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ಅನುಮತಿ ನೀಡಿದ ಮಾಲೀಕನಿಗೆ 25,000 ರೂ. ದಂಡ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. 

END OF STORY

Prathapa thirthahalli

Senior Journalist | Malenadu Today
✓ Verified Journalist