ಶಿವಮೊಗ್ಗ: ಆನ್‌ಲೈನ್‌ನಲ್ಲಿ ಘರ್ ಸೋಪ್ ಬುಕ್ ಮಾಡಿದ ವ್ಯಕ್ತಿ: ಶಾಲೆಗೆ ಮಗನ ಫೀಸ್ ಕಟ್ಟಲು ಹೋದಾಗ ಕಾದಿತ್ತು ಶಾಕ್!

Published: 24 ಜುಲೈ 2026, 12:54 ಅಪರಾಹ್ನ • 1 min read

Shivamogga Cyber Fraud ಶಿವಮೊಗ್ಗ : ರಾಜ್ಯದಲ್ಲಿ ನಾನಾ ರೀತಿಯಲ್ಲಿ ಸೈಬರ್ ಕ್ರೈಮ್‌ಗಳು ನಡೀತಾ ಇರ್ತವೆ. ಇಷ್ಟು ದಿನ ಟ್ರೇಡಿಂಗ್ ಹೆಸರಿನಲ್ಲಿ, ಕೆಲಸ ಕೊಡಿಸುವ ನೆಪದಲ್ಲಿ ನಡೆಯುತ್ತಿದ್ದ ಸೈಬರ್ ಕ್ರೈಂ ಇದೀಗ ಹೊಸದಾದ ರೂಪವೊಂದನ್ನು ಪಡೆದುಕೊಂಡಿದೆ. ಅದೇನೆಂದರೆ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಘರ್ ಸೋಪ್ ಎಂಬ ಹೆಸರಿನ ಸೋಪ್ ಕಳುಹಿಸುವ ನೆಪದಲ್ಲಿ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

Shivamogga Cyber Fraud ಘಟನೆಯ ವಿವರ 

ಶಿವಮೊಗ್ಗದ ಪ್ರದೇಶವೊಂದರ ವ್ಯಕ್ತಿಯೊಬ್ಬರು ಹೀಗೆ ಇನ್‌ಸ್ಟಾಗ್ರಾಮ್ ರೀಲ್ ನೋಡುತ್ತಾ ಕುಳಿತಿದ್ದರು. ಈ ವೇಳೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕತ್ ಟ್ರೆಂಡಿಂಗ್‌ನಲ್ಲಿ ಇರುವ ಘರ್ ಸೋಪ್‌ನ ಜಾಹೀರಾತೊಂದು ಅವರ ಕಣ್ಣಿಗೆ ಬಿದ್ದಿದೆ. ಹೇಗೂ ಒಳ್ಳೆ ರಿವ್ಯೂ ಇರುವಂತಹ ಸೋಪು, ಬುಕ್ ಮಾಡೇ ಬಿಡೋಣ ಅಂತ ದೂರುದಾರ ಆ ಸೋಪನ್ನು ಬುಕ್ ಮಾಡಿದ್ದಾರೆ. ಆದರೆ ಎಷ್ಟೇ ಕಾದರೂ ಸಹ ಆ ಸೋಪ್ ಮನೆಗೆ ಬರಲೇ ಇಲ್ಲ. ಹೀಗೆ ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಕೂತಾಗ ಅವರಿಗೆ ಬುಕ್ ಮಾಡಿದಂತಹ ಕೊರಿಯರ್ ನಂಬರ್ ಕಾಣಿಸುತ್ತಿದೆ. ಅದನ್ನು ಗೂಗಲ್‌ಗೆ ಹಾಕ್ತಾರೆ, ನಂತರ ಶಿವಮೊಗ್ಗ ಡೆಲಿವರಿ ಕೊರಿಯರ್ ಎಂಬಂತಹ ನಂಬರ್‌ಗೆ ಆ ಕಾಲ್ ಕನೆಕ್ಟ್ ಆಗುತ್ತದೆ.

ಆ ಕಡೆಯಿಂದ ಹಿಂದಿಯಲ್ಲಿ ವ್ಯಕ್ತಿಯೊಬ್ಬ ಮಾತನಾಡುತ್ತಾನೆ. ಈ ಸೋಪ್ ನಿಮಗೆ ಬೇಕು ಅಂದರೆ ನಾನು ನಿಮ್ಮ ನಂಬರ್‌ಗೆ ಲಿಂಕ್ ಹಾಕ್ತೀನಿ, ಆ ಲಿಂಕ್‌ಗೆ ಕೊರಿಯರ್ ನಂಬರ್ ಹಾಕಿ ಎಂದು ಹೇಳುತ್ತಾನೆ. ಇದನ್ನು ಸತ್ಯ ಅಂತ ನಂಬಿದ ವ್ಯಕ್ತಿ ಲಿಂಕ್ ಓಪನ್ ಮಾಡಿ ನಂಬರ್ ಹಾಕುತ್ತಾರೆ. ಕೊನೆಗೆ ಅವರಿಗೆ ಅದರಲ್ಲಿ ಏನು ಅರ್ಥವಾಗದೆ ಇದ್ದಾಗ ಆ ಲಿಂಕ್ ಅನ್ನು ಡಿಲೀಟ್ ಮಾಡ್ತಾರೆ.

Shivamogga Cyber Fraud ಫೀಸ್ ಕಟ್ಟಲು ಹೋದಾಗ ಬಯಲಾಯ್ತು ಸತ್ಯ! 

ಹೀಗೆ ಒಂದು ದಿನ ಶಾಲೆಗೆ ಮಕ್ಕಳ ಫೀಸ್ ಕಟ್ಟೋಕೆ ಹೋದಾಗ, ಸೋಪ್ ಹೆಸರಲ್ಲಿ ವಂಚನೆ ಮಾಡಿದ ವಂಚಕರ ನಿಜ ಬಣ್ಣ ಬಯಲಾಗಿದೆ. ಅದೇನೆಂದರೆ ಅಂದು ದೂರುದಾರ ತಮ್ಮ ಅಕೌಂಟ್ ಪರಿಶೀಲನೆ ನಡೆಸಿದ್ದಾರೆ. ಆಗ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 2,97,000ರೂಪಾಯಿ. ಹಣ ಆನ್‌ಲೈನ್ ಮೂಲಕ ಮೋಸದಿಂದ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ ಪೊಲೀಸರು ಸೈಬರ್ ಕ್ರೈಂ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಂಚನೆಗೆ ಒಳಗಾದವರನ್ನು ಬಳಸಿಕೊಂಡು, ಹೇಗೆ ವಂಚನೆಗೆ ಒಳಗಾದೆವು ಎಂಬುವುದರ ಕುರಿತಾದ ವಿಡಿಯೋವನ್ನು ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಬಿಡುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ವಂಚಕರು ಹೊಸ ಮಾರ್ಗವನ್ನು ಹುಡುಕಿ ವಂಚನೆಯನ್ನು ಮಾಡುತ್ತಿದ್ದು, ವಂಚಕರ ಈ ವಂಚನೆ ಪೊಲೀಸರಿಗೆ ಹಾಗೆಯೇ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy