ನಾಡಮಂಚಾಲೆ: ಹೊಸ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ , ಸಾರ್ವಜನಿಕರಿಗೆ KPTCL ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
Karnataka Pension Scheme
Karnataka Pension Scheme

KPTCL Warning ಸಾಗರ :  ತಾಲ್ಲೂಕಿನ ನಾಡಮಂಚಾಲೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬೃಹತ್ ವಿದ್ಯುತ್ ಪ್ರಸರಣ ಮಾರ್ಗಗಳು ಜುಲೈ 25 ಅಥವಾ ಅದರ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಚಾಲನೆಗೊಳ್ಳಲಿವೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ 

ನಾಡಮಂಚಾಲೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 2×100 MVA, 220/110 KV ಹಾಗೂ 1×10 MVA, 110/11 KV ಶಕ್ತಿ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಮತ್ತು ಉದ್ದೇಶಿತ 220 KV (1.35 ಕಿ.ಮೀ) ಹಾಗೂ 110 KV ಲಿಲೋ (1.08 ಕಿ.ಮೀ) ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ.ಈ ಹಿನ್ನೆಲೆಯಲ್ಲಿ ಜುಲೈ 25 ರಿಂದ ಈ ಮಾರ್ಗಗಳನ್ನು ಚಾಲನೆಗೊಳಿಸಲಾಗುತ್ತಿದೆ. 

ಅಪಾಯಕಾರಿ ಉನ್ನತ ಮಟ್ಟದ ವಿದ್ಯುತ್ ಮಾರ್ಗಗಳು ಚಾಲನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ. ವಿದ್ಯುತ್ ಕಂಬಗಳು ಅಥವಾ ಬೃಹತ್ ಗೋಪುರಗಳನ್ನು (ಟವರ್) ಯಾರೂ ಹತ್ತಬಾರದು. ವಿದ್ಯುತ್ ಗೋಪುರಗಳ ಆವರಣದಲ್ಲಿ ಅಥವಾ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು ಆಪತ್ತು ತರಬಹುದು ಹಾಗೂ ವಿದ್ಯುತ್ ವಾಹಕ ತಂತಿಗಳಿಗೆ ತಗುಲುವಂತೆ ಯಾವುದೇ ವಸ್ತುಗಳು ಅಥವಾ ತಂತಿಗಳನ್ನು ಎಸೆಯಬಾರದು.ಈ ನಿಯಮಗಳನ್ನು ಮೀರಿ ನಡೆಯುವ ಕೃತ್ಯಗಳಿಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಾರ್ವಜನಿಕರೇ ನೇರ ಹೊಣೆಗಾರರಾಗಿರುತ್ತಾರೆ. 

ಉಂಟಾಗುವ ಆಸ್ತಿ-ಪಾಸ್ತಿ ಅಥವಾ ಜೀವ ಹಾನಿಗೆ KPTCL ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಹಾಗೂ ಪರಿಹಾರ ನೀಡುವುದಿಲ್ಲ ಎಂದು ಶಿವಮೊಗ್ಗ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor