Shivamogga Police Action / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರ ಟ್ರಾಫಿಕ್ ಪೊಲೀಸರು ಒಟ್ಟೊಟ್ಟಿರಗೆ ಎರಡು ಡ್ರೈವ್ಗಳನ್ನು ಮೂವ್ ಮಾಡಿದ್ದಾರೆ. ಒಂದು ಕಡೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಹಳೆಯ ವೆಹಿಕಲ್ಗಳ ವಿಲೇವಾರಿಗೆ ಮುಂದಾಗಿದ್ದಾರೆ. ಇನ್ನೊಂದು ಕಡೆ ನಗರ ಸಾರಿಗೆ ಬಸ್ಗಳಲ್ಲಿ ನಿಯಮ ಉಲ್ಲಂಘಟನೆಯನ್ನು ಪತ್ತೆ ಮಾಡುವ ಅಭಿಯಾನ ಆರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ವಾಹನಗಳ ಮೇಲೆ ಎಸ್ಪಿ ಖುದ್ದಾಗಿ ನೋಟಿಸ್ ಅಂಟಿಸಿ, ವಾರ್ನಿಂಗ್ ಸಹ ನೀಡಿದ್ದಾರೆ.
ಇನ್ನು ನಿನ್ನೆ ದಿನ ಜುಲೈ 15, 2026ರಂದು ನಗರದಾದ್ಯಂತ ಸಂಚರಿಸುವ ಸಿಟಿ ಬಸ್ಗಳಲ್ಲಿ ಟ್ರಾಫಿಕ್ ಪೊಲೀಸರು ಹಠಾತ್ ಪರಿಶೀಲನೆ ನಡೆಸಿದ್ರು. ಸುಮಾರು 40 ಸಿಟಿ ಬಸ್ಗಳನ್ನು ತಡೆದು ಪರಿಶೀಲನೆಗೆ ಒಳಪಡಿಸಿದರು.
ಈ ವೇಳೆ 03 ಬಸ್ ಚಾಲಕರು ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಆಕ್ಷನ್ನ ಭಾಗವಾಗಿ ಆ ಬಸ್ಗಳನ್ನ ವಶಕ್ಕೆ ಪಡೆದ ಪೊಲೀಸರು, ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಅನ್ವಯ ಕೇಸ್ ಮಾಡಿದ್ದಾರೆ. ಅಲ್ಲದೆ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತು ಮಾಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಈ ಕಾರ್ಯಾಚರಣೆಗೆ ಪೂರಕವಾಗಿ ಜನರು ಸಹ ಪೊಲೀಸರಿಗೆ ಕೈಜೋಡಿಸಬಹುದಾಗಿದೆ. ರಸ್ತೆಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಪಬ್ಲಿಕ್ ಐ ವಾಟ್ಸಾಪ್ ಸಂಖ್ಯೆ 8277982900 ಹಾಗೂ ಶಿವಮೊಗ್ಗ ಸಂಚಾರ ಪೊಲೀಸ್ ಸಹಾಯವಾಣಿ ವಾಟ್ಸಾಪ್ ಸಂಖ್ಯೆ 8277983404 ಅನ್ನು ಬಳಸಬಹುದಾಗಿದೆ. ಅಲ್ಲದೆ ಕಣ್ಣೆದುರೇ ಕಾಣುವ ಅಪರಾಧ ಕೃತ್ಯ, ಗಾಂಜಾ ವ್ಯಸನಿಗಳ ಮಾಹಿತಿ, ಸಿಟಿ ಬಸ್ಗಳಲ್ಲಿ ನಿಯಮ ಉಲ್ಲಂಘನೆ, ಟ್ರಾಫಿನ್ನಲ್ಲಿ ವಾಹನ ಸವಾರರ ಅನುಚಿತ ವರ್ತನೆ ಸೇರಿದಂತೆ ಯಾವುದೇ ಕಾನೂನು ಬಾಹಿರ ಕೃತ್ಯಗಳನ್ನು ಜನರು ಪಬ್ಲಿಕ್ ಐ ಮೂಲಕ ಪೊಲೀಸರಿಗೆ ಪೋಟೋ ಸಮೇತ ನೀಡಬಹುದು. ಇಲ್ಲಿ ಮಾಹಿತಿ ಗೌಪ್ಯವಾಗಿರಲಿದೆ ಅಂತಾ ಎಸ್ಪಿ ನಿಖಿಲ್ ಬಿ ತಿಳಿಸಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
