Shivamogga ಶಿವಮೊಗ್ಗ : ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವವರಿಗೆ ಸುವರ್ಣಾವಕಾಶವೊಂದು ಒದಗಿಬಂದಿದ್ದು, ನಗರದ ನವುಲೆಯಲ್ಲಿರುವ ಕೃಷಿ ಮಹಾವಿದ್ಯಾಲಯದ ಆವರಣದ ಬೇಕರಿ ಘಟಕದಲ್ಲಿ ವಿವಿಧ ರೀತಿಯ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಒಂದು ತಿಂಗಳ ಅವಧಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ: ತಾಯಿ ಹಾಗೂ ಮಕ್ಕಳ ವಿರುದ್ಧ ಪೊಲೀಸರಿಗೆ ತಂದೆಯ ದೂರು, ಕಾರಣವೇನು?
Shivamogga ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ
ದಿನಾಂಕ 20-07-2026 ರಿಂದ 18-08-2026 ರವರೆಗೆ ಈ ತರಬೇತಿ ಶಿಬಿರ ನಡೆಯಲಿದ್ದು, ಇದರಲ್ಲಿ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕೀಸ್, ಕೋಕೋನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್ತು, ಪೀನಟ್ ಕುಕೀಸ್ ಹಾಗೂ ವೆನಿಲ್ಲಾ ಬಟನ್ ಸೇರಿದಂತೆ ವೈವಿಧ್ಯಮಯ ಬಿಸ್ಕತ್ತುಗಳ ತಯಾರಿಕೆಯನ್ನು ಕಲಿಸಲಾಗುತ್ತದೆ. ಇದರೊಂದಿಗೆ ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಕಪ್ ಕೇಕ್, ಚಾಕಲೇಟ್ ಕೇಕ್, ಜಾಮ್ ರೋಲ್, ಜೆಲ್ ಕೇಕ್, ಪೇಸ್ಟ್ರಿ ಕೇಕ್, ಬಟರ್ ಐಸಿಂಗ್, ಡೋನಟ್, ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ, ಪಫ್ ಪೇಸ್ಟ್ರಿ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
ಈ ವಿಶೇಷ ತರಬೇತಿ ಶಿಬಿರಕ್ಕೆ ಒಟ್ಟು 4,500 ಶುಲ್ಕವನ್ನು ನಿಗದಿಪಡಿಸಲಾಗಿದೆ. ತರಬೇತಿ ಪಡೆಯುವ ಶಿಬಿರಾರ್ಥಿಗಳಿಗೆ ತರಬೇತಿಯ ಸಮಯದಲ್ಲಿ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ. ಆಸಕ್ತರು ತಮ್ಮ ಸ್ವಂತ ಜವಾಬ್ದಾರಿಯಲ್ಲೇ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿರುತ್ತದೆ.
ತರಬೇತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ, ದಿನಾಂಕ 18-07-2026 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಕೃಷಿ ಮಹಾವಿದ್ಯಾಲಯದ ತರಬೇತಿ ಸಂಯೋಜಕರಾದ ಡಾ. ಜಯಶ್ರೀ ಎಸ್. (ಮೊ: 9449187763) ಅಥವಾ ಶ್ರೀ ಜಯಶಂಕರ್ (ಮೊ: 9686555897) ಇವರನ್ನು ಸಂಪರ್ಕಿಸುವಂತೆ ನವುಲೆ ಕೃಷಿ ಮಹಾವಿದ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
