ಕಿಡಿಗೇಡಿಗಳ ಮೇಲೆ ಪಬ್ಲಿಕ್ ಐ! ದಾಖಲಾಯ್ತು 21 ದೂರು! ಎಸ್​ಪಿ ನಿಖಿಲ್ ಬಿ ಕ್ರಮ!

Public Eye / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾದಕ ದ್ರವ್ಯ ಜಾಲದ ಹಿಂದೆ ಎಸ್​ಪಿಯಾಗಿದ್ದ ಲಕ್ಷ್ಮೀಪ್ರಸಾದ್ ತಮ್ಮದೇ ಆದ ಸ್ಟೈಲ್​ನಲ್ಲಿ ರಿವರ್ಸ್​ ಇನ್ವೆಸ್ಟಿಗೇಷನ್​ ನಡೆಸಿದ್ದರು. ಆಮೂಲಕ ಅಮರಾವತಿಯಿಂದ ಬರುತ್ತಿದ್ದ ಶೀಲಾವತಿ ಗಾಂಜಾದವರೆಗೂ ಜಿಲ್ಲೆಗೆ ಗಾಂಜಾ ಎಂಟ್ರಿ ಕೊಡದಂತೆ ತಡೆದಿದ್ದರು. ಆನಂತರ ಶಿವಮೊಗ್ಗಕ್ಕೆ ಬಂದ ಎಸ್​ಪಿ ಮಿಥುನ್ ಕುಮಾರ್, ಗಾಂಜಾ ಮಾರಾಟಗಾರರನ್ನೇ ಟಾರ್ಗೆಟ್ ಮಾಡಿ ಹಿಡಿದು ಅಂದರ್ ಮಾಡುತ್ತಿದ್ದರು.

ಇವರ ನಂತರ ಇದೀಗ ಶಿವಮೊಗ್ಗದಲ್ಲಿರುವ ಎಸ್​ಪಿ ನಿಖಿಲ್​ ಬೇರೆಯದ್ದೇ ಸ್ಟೈಲ್​ನಲ್ಲಿ ಗಾಂಜಾ ಮಾಫಿಯಾದ ಬೆನ್ನುಬಿದ್ದಿದ್ದಾರೆ. ಗಾಂಜಾ ಮಾರುವವರನ್ನ ಖರೀದಿಸುವವರನ್ನ ಹಿಡಿಯುವುದು ನಿಜಕ್ಕೂ ಕಷ್ಟದ ಕೆಲಸ! ಅಂತಹ ಕೆಲಸದಲ್ಲಿ ಸಾರ್ವಜನಿಕರ ಸಹಾಯವನ್ನು ಪಡೆಯಲು ಪಬ್ಲಿಕ್ ಐಯನ್ನು ಎಸ್​ಪಿ ನಿಖಿಲ್ ಜಾರಿಗೆ ತಂದಿದ್ದರು. ಈ ವಾಟ್ಸಾಪ್​ ಗ್ರೂಪ್​ ಮೂಲಕ ಜನರು ತಮ್ಮ ಸುತ್ತಮುತ್ತಲಿನ ಅಕ್ರಮ ಚಟುವಟಿಕೆ ಬಗ್ಗೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಮಾಹಿತಿ ಹಾಗು ವೈಯಕ್ತಿಕ ವಿವರ ಗೌಪ್ಯವಾಗಿಡುವುದರಿಂದ ಜನರು ಮುಕ್ತವಾಗಿ ಗಾಂಜಾ ಆಸಾಮಿಗಳ ಬಗ್ಗೆಯು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.

ಕಿಡಿಗೇಡಿಗಳ ಮೇಲೆ ಪಬ್ಲಿಕ್ ಐ

​ಸಾರ್ವಜನಿಕರ ಸಹಭಾಗಿತ್ವದೊಂದಿಗೆ 8277982900 ನಂಬರ್ ನ ಪಬ್ಲಿಕ್ ಐ ಶಿವಮೊಗ್ಗ ಎಂಬ ವಾಟ್ಸ್ ಅಪ್ ಸೇವೆ ಜಾರಿಯಲ್ಲಿದೆ. ಈ ವಾಟ್ಸ್ ಅಪ್ ಸಂಖ್ಯೆಯ ಮೂಲಕ ಜನರು ಪೊಲೀಸರಿಗೆ ಯಾವುದೇ ಅಕ್ರಮ ಅಥವಾ ಅಪರಾಧ ಚಟುವಟಿಕೆಯ ಮಾಹಿತಿ ನೀಡಬಹುದು. ಈ ಸಂಬಂಧ ಈವರೆಗೆ 21 ದೂರುಗಳು ಬಂದಿದೆ ಎಂದು ಎಸ್​ಪಿ ನಿಖಿಲ್ ಬಿ ನೀಡಿರುವ ಅಂಕಿ ಅಂಶಗಳಿಂದ ಗೊತ್ತಾಗಿದ್ದು, ದೂರಿನನ್ವಯ ಕ್ರಮ ಕೂಡ ಕೈಗೊಳ್ಳಲಾಗಿದೆ.

ಗಾಂಜಾಕೃಷಿ ಮೇಲೆ ಡ್ರೋಣ್ ಕಣ್ಣು

ಇನ್ನೊಂದೆಡೆ ಡ್ರೋನ್ ಕ್ಯಾಮೆರಾ ಮೂಲಕ ಗಾಂಜಾ ಕೃಷಿಗಳನ್ನ ಪತ್ತೆಮಾಡಲಾಗುತ್ತಿದೆ ಎಂದಿರುವ ಎಸ್​ಪಿ ನಿಖಿಲ್ ಬಿ ಅರಣ್ಯ ಪ್ರದೇಶಗಳಲ್ಲಿ, ಶಾಲಾ ಕಾಲೇಜುಗಳ ಸುತ್ತಮುತ್ತ, ನಗರದ ಖಾಲಿ ಲೇಔಟ್‌ಗಳು ಹಾಗೂ ಚಾನೆಲ್ ಏರಿಯಾಗಳ ಮೇಲೆ ಡ್ರೋನ್ ಹಾರಿಸಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ.

21 ಕಾಲೇಜುಗಳಲ್ಲಿ ಟೆಸ್ಟ್

ವಿಶೇಷ ಅಂದರೆ, 21 ಪದವಿ ಕಾಲೇಜುಗಳಲ್ಲಿ ಗಾಂಜಾ ಟೆಸ್ಟಿಂಗ್ ಕಿಟ್ ಮುಖೇನ ಒಟ್ಟು 484 ಜನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 3 ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಗಾಂಜಾ ಸೇವನೆಯ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ಮಾಹಿತಿ ಲಭ್ಯವಾಗಿದೆ.

ಇವೆಲ್ಲದರ ನಡುವೆ ಶಾಲಾ ಕಾಲೇಜುಗಳಲ್ಲಿ ಆಂಟಿ ಡ್ರಗ್ ಕಮಿಟಿ ರಚಿಸಲಾಗಿದ್ದು, ತಾಂತ್ರಿಕ ಕ್ರಮಗಳ ಭಾಗವಾಗಿ ಕೆಎಸ್‌ಪಿ ಆಪ್ಲಿಕೇಷನ್‌ನಲ್ಲಿನ ಡ್ರಗ್ ಫ್ರೀ ಕರ್ನಾಟಕ, 1908 ರಾಷ್ಟ್ರೀಯ ಮಾದಕ ವಸ್ತು ಸಹಾಯವಾಣಿ ಹಾಗೂ 1933 ರಾಷ್ಟ್ರೀಯ ಮಾನಸ್ ಸಹಾಯವಾಣಿ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz