ಅಪ್ಪನ ಫೋಟೋ ಹಿಡಿದು ದೇಶ ಮೆಚ್ಚುವ ಸಾಧನೆ ಮೆರೆದ ಶಿವಮೊಗ್ಗ ಸಿಂಧುಶ್ರೀ

ಹಂಚಿಕೊಳ್ಳಿ
WhatsApp Facebook X Telegram
Shivamogga Sindhu Breaks National Pole Vault Record
Shivamogga Sindhu Breaks National Pole Vault Record

shimoga ಭುವನೇಶ್ವರ : ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಹುಡುಗಿ ಜಿ. ಸಿಂಧುಶ್ರೀ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ . ಈ ದಾಖಲೆ ಬರೆದ ಸಾಧನೆಯ ಜೊತೆಗೆ, ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾದ ಎಲೆಕ್ಟ್ರಿಷಿಯನ್ ಆಗಿದ್ದ ತಮ್ಮ ತಂದೆಯನ್ನು ನೆನೆದು ಅವರು ಕಣ್ಣೀರು ಹಾಕಿದರು. 

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ನಮಗೇ ನೀರಿಲ್ಲ, ಅವರಿಗೇಗೆ ಕೊಡೋದು? ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಕಿಡಿ!

ತಮ್ಮ ಮಗಳು ದೇಶವನ್ನು ಪ್ರತಿನಿಧಿಸುವುದನ್ನು ನೋಡಬೇಕು ಎಂಬುದು ಅವರ ತಂದೆ ಗಣೇಶ್ ಆರ್. ಅವರ ಕನಸಾಗಿತ್ತು. ಆದರೆ, ಆ ಕನಸು ನನಸಾಗುವುದನ್ನು ನೋಡಲು ಅವರು ಬದುಕಿಲ್ಲ.25 ವರ್ಷದ ಸಿಂಧುಶ್ರೀ ಅವರು 4.25 ಮೀಟರ್ ಎತ್ತರ ಜಿಗಿಯುವ ಮೂಲಕ, ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬರಣಿಕಾ ಇಳಂಗೋವನ್ ಅವರು ನಿರ್ಮಿಸಿದ್ದ 4.23 ಮೀಟರ್‌ಗಳ ದಾಖಲೆಯನ್ನು ಮುರಿದರು. ಈ ಮೂಲಕ ಅವರು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಸ್ಥಾನ ಭದ್ರಮಾಡಿಕೊಂಡಿದ್ದಾರೆ. 

ಇನ್ನೂ ಗೆಲುವಿನ ಸಂಭ್ರಮದ ಬಳಿಕ, ಈ ಗೆಲುವು ನನಗೆ ಈಗಲೂ ಅಚ್ಚರಿಯಾಗಿದೆ ಎಂದ ಸಿಂಧುಶ್ರೀಯನ್ನ ಛಾಯಾಗ್ರಾಹಕರಿಗೆ ಪೋಸ್ ನೀಡಲು ಕೇಳಿಕೊಂಡಾಗ ಆ ಕ್ಷಣ ಅಲ್ಲಿದ್ದವರನ್ನು ಭಾವುಕವಾಗಿಸಿತು. ಮಾಧ್ಯಮಗಳ ಜೊತೆಗೆ ಮಾತನಾಡಲು ಆರಂಭಿಸುವಾಗಲೇ  ಸಿಂಧುಶ್ರೀ ತಮ್ಮ ಬ್ಯಾಗ್‌ನಿಂದ ತಮ್ಮ ತಂದೆಯ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ತೆಗೆದು ಪ್ರದರ್ಶಿಸಿದರು. ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದನ್ನು ನೋಡಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಇಂದು ನಾನು ಅದನ್ನು ಸಾಧಿಸಿದಾಗ, ಅದನ್ನು ನೋಡಲು ಅವರು ನನ್ನೊಂದಿಗಿಲ್ಲ ಎಂದಳು.

ಸಿಂಧುಶ್ರೀ ಮೂಲತಃ ಶಿವಮೊಗ್ಗದವರು, ತಂದೆಯ ಮರಣದ ನಂತರ ಈಕೆಯ ಕ್ರೀಡಾ ಪಯಣ ಸುಗಮವಾಗಿರಲಿಲ್ಲ. ಟೈಲರ್ ಕೆಲಸ ನಿರ್ವಹಿಸುವ ತಾಯಿ ಮನೆ ನೋಡಿಕೊಳ್ಳುತ್ತಿದ್ದಾರೆ. ಕುಟುಂಬದ ನಿರ್ವಹಣೆಯೇ ಕಷ್ಟವಾಗಿದ್ದ ಸನ್ನಿವೇಶದಲ್ಲಿ ದುಬಾರಿ ಕ್ರೀಡೆ ಎಂದೆ ಕರೆಸಿಕೊಳ್ಳುವ ಪೋಲ್ ವಾಲ್ಟ್ ನಲ್ಲಿ ಸಿಂಧುಶ್ರಿಯ ಒಂದೊಂದು ಹೆಜ್ಜೆಯು ಕಷ್ಟಕರವಾಗಿತ್ತು. ಆದಾಗ್ಯು ಅಜ್ಜಿ ಅಜ್ಜನ ಬೆಂಬಲದೊಂದಿಗೆ ಕಠಿಣ ಹಾದಿಯನ್ನು ಶ್ರಮಿಸಿದ ಸಿಂಧುಶ್ರೀ ಫೈನಲ್ ಪಂದ್ಯದಲ್ಲಿ, ಮತ್ತೊಬ್ಬ ಕ್ರೀಡಾಪಟುವಿಂದ  ಪೋಲ್ ರಾಷ್ಟ್ರೀಯ ರೆಕಾರ್ಡ್​ನ್ನೆ ಮುರಿದಿದ್ದಾಳೆ. ನನ್ನ ತಂತ್ರಗಾರಿಕೆಗೆ ಸೂಕ್ತವಾದ ಪೋಲ್ ನನ್ನ ಬಳಿ ಇರಲಿಲ್ಲ. ಹಾಗಾಗಿ ನಾನು ಸಣ್ಣ ಪೋಲ್‌ಗಳೊಂದಿಗೆ ತರಬೇತಿ ಪಡೆಯುತ್ತಿದ್ದೇನೆ. ಅಂತಾರಾಜ್ಯ ಚಾಂಪಿಯನ್‌ಶಿಪ್‌ಗೆ ಬರುವ ಮುನ್ನ, ನನ್ನ ತರಬೇತುದಾರರ ಬಳಿಯೇ ತರಬೇತಿ ಪಡೆಯುವ ನನ್ನ ಸ್ನೇಹಿತ ರಾಹುಲ್ ಅವರಿಂದ ಪೋಲ್ ಪಡೆದುಕೊಂಡೆ ಎಂದು ತನ್ನ ಗೆಲುವಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಸದ್ಯ ಸಿಂಧುಶ್ರೀ ಅವರು ಬೆಂಗಳೂರಿನ ಸಾಯ್ (SAI) ಕೇಂದ್ರದಲ್ಲಿ ತರಬೇತುದಾರ ವಿಜೀಶ್ ಎಂ.ಎಂ. ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.   2021 ರಲ್ಲಿ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ಧಾಳೆ. ಈ  ರಾಷ್ಟ್ರೀಯ ದಾಖಲೆ ಮತ್ತು ಪಡೆದಿರುವ ಏಷ್ಯನ್ ಗೇಮ್ಸ್ ಅರ್ಹತೆಯೊಂದಿಗೆ, ಸಿಂಧುಶ್ರೀ ತಮಗೆ ಉತ್ತಮ ತರಬೇತಿ ಸೌಲಭ್ಯ ಮತ್ತು ಅಗತ್ಯ ಉಪಕರಣ ದೊರೆಯಲಿವೆ ಎಂದೇ ನಂಬಿದ್ದಾರೆ. ಇನ್ನೂ  ಏಷ್ಯನ್ ಗೇಮ್ಸ್‌ಗೆ ಸಂಪೂರ್ಣವಾಗಿ ಸಿದ್ಧರಾಗುವ ಮೊದಲು ಆಕೆ ಇನ್ನಷ್ಟು ಸುಧಾರಣೆ ಕಾಣಬೇಕೆಂದು ಎಂಬುದು ಕೋಚ್​ ವಿಜೀಶ್ ಅಭಿಪ್ರಾಯ. 

shimoga ಒಟ್ಟಾರೆ, ಶಿವಮೊಗ್ಗದಿಂದ ತಂದೆಯ ಕನಸಿನ ಜೊತೆಗೆ ಹೊರಟ ಹುಡುಗಿಯೊಬ್ಬಳು, ಸದ್ಯದಲ್ಲಿಯೇ ಭಾರತದ ಭಾವುಟವನ್ನು ಹಿಡಿದು ಏಷ್ಯಾದಲ್ಲಿ ಸಾಧನೆ ಮೆರೆಯಲು ಸಿದ್ಧಳಾಗಿದ್ದಾಳೆ. ಅದರ ಮುನ್ಸೂಚನೆಯಾಗಿ ಕಳೆದುಕೊಂಡ ತಂದೆಯ ಪೋಟೋವನ್ನು ಹಿಡಿದು ಅಪ್ಪನ ಹೆಸರಿಗೆ ಮೊದಲೇ ಕೀರ್ತಿಯ ಗರಿಮೆಯನ್ನು ನೀಡಿದ್ದಾಳೆ. ಹಾರುವ ಕನಸಿನ ಪುಟ್ಟ ಹುಡುಗಿಯ ಕೀರ್ತಿಯು, ಸಾಧನೆಯ ಆಗಸದಲ್ಲಿ ಮುಗಿಲೆತ್ತರವನ್ನು ಮೀರಲಿ.

shimoga Sindhu Breaks National Pole Vault Record

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor