Dowry Harassment Case / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಳ್ಳಾರಿ ಜಿಲ್ಲೆಯ ಕೊಟ್ಟೂರು ವಾಸಿ ಮಂಜುನಾಥ್ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಸಾಬೀತಾಗಿದ್ದು, ಅವರಿಗೆ ಶಿವಮೊಗ್ಗ ಕೋರ್ಟ್ 5 ವರ್ಷ ಶಿಕ್ಷೆ ವಿಧಿಸಿದೆ.
ಮಂಜುನಾಥ್ ತಮ್ಮ ಪತ್ನಿ ಸುಮರವರಿಗೆ ಹೆಚ್ಚಿನ ವರದಕ್ಷಿಣೆ, ಸೈಟ್ ಹಾಗೂ ಬಂಗಾರ ತರಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಷ್ಟೆ ಅಲ್ಲದೆ ಜೀವ ಬೆದರಿಕೆ ಹಾಕಿದ್ದಾಗಿ 2017ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಅಂದಿನ ತನಿಖಾಧಿಕಾರಿ ಪ್ರಭಾವತಿ ಸಿ. ಇವರು ಪ್ರಕರಣದ ತನಿಖೆ ನಡೆಸಿ 2018ರಲ್ಲಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ರು.
ಸಾಕ್ಷಿ ವಿಚಾರಣೆ ನಡೆಸಿ ಪರಸ್ಪರ ವಾದವನ್ನು ಆಲಿಸಿದ ನ್ಯಾಯಾಧೀಶ ಸಿದ್ಧರಾಜು ಎನ್.ಕೆ. ದಿನಾಂಕ 24/06/2026 ರಂದು ಆರೋಪಿ ಮಂಜುನಾಥನಿಗೆ 498(ಎ) ಐಪಿಸಿ ಅಪರಾಧಕ್ಕೆ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ಗಳ ದಂಡ ಹಾಗೂ 506 ಐಪಿಸಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ರೂ. 5000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ. ಕಿರಣ್‌ಕುಮಾರ್ ಪ್ರಕರಣದ ಪರ ವಾದ ಮಂಡಿಸಿದ್ದರು.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
