ಹೀಗಾಗಬಾರದಿತ್ತು! ಪ್ರಯಾಣಿಕರಿಗೆ 10 ನಿಮಿಷ ಟೈಂ ಇದೆ ನೋಡಿ ಎಂದು ರಸ್ತೆ ದಾಟಿದ ಡ್ರೈವರ್​ಗೆ ಎದುರಾಗಿದ್ದು ಸಾವು!

Bhadravathi KSRTC Bus Driver / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಭದ್ರಾವತಿ/ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗುವ ಬಸ್​ನ ಕಂಡಕ್ಟರ್​ರೊಬ್ಬರು ಅಚಾನಕ್ ಆಗಿ ಸಂಭವಿಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ರೂಟ್​ ಬಸ್​ನ ಕಂಡಕ್ಟರ್ ಕಂ ಡ್ರೈವರ್ ಜ್ಯೋತಿಬಾ ಬೂಸಾರೆ (38), (Bhadravathi KSRTC Bus Driver) ತಿಪಟೂರಿನ ಡಾಬಾ ಬಳಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. ನಿನ್ನೆ ದಿನ ಅವರ ಪಾರ್ಥಿವ ಶರೀರವನ್ನು ಭದ್ರಾವತಿಗೆ ತರಲಾಗಿದ್ದು, ಅಂತಿಮ ದರ್ಶನದ ಬಳಿಕ ಮೃತ ದೇಹವನ್ನು ಅವರ ಸ್ವಂತ ಊರಾದ ಬಾಗಲಕೋಟೆಗೆ ಕೊಂಡೊ ಯ್ಯಲಾಯಿತು.

ಕಳೆದ ಬುಧವಾರ ರಾತ್ರಿ, ಪ್ರಯಾಣಿಕರ ಅನುಕೂಲಕ್ಕಾಗಿ, ಊಟಕ್ಕೆಂದು ಬಸ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಜ್ಯೋತಿಬಾ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಪ್ರಯೋಜನವಾಗಲಿಲ್ಲ. ಜ್ಯೋತಿಬಾ ಅಲ್ಲಿಯೇ ಮೃತಪಟ್ಟಿದ್ದಾರೆ.

ನಗರದ ಲೋಯ‌ರ್ ಹುತ್ತಾ ವಾಸಿ ಜ್ಯೋತಿಬಾ ಬೂಸಾರೆ ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಜ್ಯೋತಿಬಾ ಬೂಸಾರೆ ಗೌರವಾರ್ಥ ಸಾರಿಗೆ ನೌಕರರು, ಚಾಲಕರು,
ನಿರ್ವಾಹಕರು ಗುರುವಾರ ಶಿವಮೊಗ್ಗ, ಭದ್ರಾವತಿ ಸೇರಿದಂತೆ ದೂರದೂರುಗಳಿಗೆ ಸಾಗುವ ಎಲ್ಲ ಬಸ್‌ ಗಳ ಸಂಚಾರ ಸ್ಥಗಿತಗೊಳಿಸಿ ಮೌನಾಚರಣೆ ಮಾಡಿದರು.

ತಿಪಟೂರಿನಿಂದ ಆಗಮಿಸಿದ ಮೃತರ ಪಾರ್ಥಿವ ಶರೀರಕ್ಕೆ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್ ಹಾಗೂ ಡಿಪೋ ಮ್ಯಾನೇಜರ್ ಮೂರ್ತಿ, ನಿಲ್ದಾಣ ನಿರೀಕ್ಷಕ ವಿಠಲ್, ಅಧಿಕಾರಿಗಳಾದ ವೆಂಕಟೇಶ್, ಓಡಿಯಾರ್ ಕರಿಯಪ್ಪ, ಶೇಖರ್ ಸೇರಿದಂತೆ ನೂರಾರು ಮಂದಿ ನೌಕರರು ಮುಖ್ಯ ಬಸ್ ನಿಲ್ದಾಣದಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು

Whatsapp / https://chat.whatsapp.com/JrsZ8He4nN600n0r3tJItz