ತವರು ಮನೆಗೆಂದು ತೆರಳಿದ ಪತ್ನಿ ಇಬ್ಬರು ಮಕ್ಕಳು ನಾಪತ್ತೆ, ಪತ್ತೆಗಾಗಿ ಮನವಿ

Thirthahalli  ಶಿವಮೊಗ್ಗ:  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕಣಗಲಕೊಪ್ಪ (17ನೇ ಮೈಲಿಕಲ್ಲು) ಗ್ರಾಮದ ನಿವಾಸಿಯಾದ ಅನಿಲ್ ಕುಮಾರ್ ಎಂಬುವವರ ಪತ್ನಿ ಹಾಗೂ ಮಕ್ಕಳು ಕಳೆದ ಮೇ 13ರಂದು ತವರುಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅವರು ಇದುವರೆಗೆ ತವರುಮನೆಗೂ ತಲುಪದೆ, ವಾಪಸ್ ಸ್ವಗೃಹಕ್ಕೂ ಬಾರದೆ ಕಾಣೆಯಾಗಿದ್ದಾರೆ.

ಶಿವಮೊಗ್ಗ: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ; ಇನ್ಮುಂದೆ ಈ ಹೊಸ ನಿಯಮ ಕಡ್ಡಾಯ 

ಮನೆಯಿಂದ ಹೋದವರು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಯಾವುದೇ ಮಾಹಿತಿ ಸಿಗದ ಕಾರಣ ಸದ್ಯ ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ನಾಪತ್ತೆಯಾದ ತಾಯಿ ಹಾಗೂ ಇಬ್ಬರು ಮಕ್ಕಳ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.

ಈ ಮೂರು ಜನಗಳ ಬಗ್ಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಮಾಳೂರು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08181-235142, 08181-228310, 08182-261413 ಅಥವಾ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಾದ 9480803353, 9480803333, 9480803300 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಪೊಲೀಸ್ ಪ್ರಕಟಣೆ ಕೋರಿದೆ.

Thirthahalli  Mother & Two Children Go Missing