ಶಿವಮೊಗ್ಗ : ಪ್ರೈವೇಟ್​ ಬಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಪಾರ್ಸಲ್​​ ಹಾಕಲು ಹೊಗ್ಗಿದ್ದಷ್ಟೇ, ಹತ್ತೇ ನಿಮಿಷದಲ್ಲಿ ನಡೀತು ಈ ಘಟನೆ

ಹಂಚಿಕೊಳ್ಳಿ
WhatsApp Facebook X Telegram
shivamogga doddapet police staiton
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

Honda Activa ಶಿವಮೊಗ್ಗ : ಶಿವಮೊಗ್ಗದ  ಖಾಸಗಿ ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಪಾರ್ಸಲ್​ ಹಾಕಲು ತೆರಳಿದ್ದ ಯುವಕನ ಬೈಕ್​ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ  ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಘಟನೆ ವಿವರ

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವನೊಬ್ಬ ತನ್ನ ಹೊಂಡಾ ಆ್ಯಕ್ಟಿವಾ ಎಂಬ ಹೆಸರಿನ ಸ್ಕೂಟಿಯಲ್ಲಿ ಪಾರ್ಸಲ್​​​ ಹಾಕಲು ಬಸ್ಟ್ಯಾಂಡ್​ಗೆ ತೆರಳಿದ್ದ. ತನ್ನ ಸ್ಕೂಟಿಯನ್ನು ಶಿವಮೊಗ್ಗದ  ಖಾಸಗಿ ಬಸ್ಟ್ಯಾಂಡ್​​ನಲ್ಲಿ ನಿಲ್ಲಿಸಿ  5:30 ಕ್ಕೆ ಪಾರ್ಸಲ್​​ ಹಾಕಲು ತೆರಳಿದ್ದ. ಪಾರ್ಸಲ್​ ಹಾಕಿ ಸಂಜೆ 5:40 ರ ವೇಳೆಗೆ ವಾಪಾಸ್​​ ಬಂದಾಗ ಯುವಕನಿಗೆ ಶಾಕ್​ ಕಾದಿತ್ತು. 

ಅದೇನೆಂದರೆ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್​ನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿದ್ದರು. ಯುವಕ ಸುತ್ತಾ ಮುತ್ತಾ ಎಲ್ಲಾ ಕಡೆ ಹುಡುಕಿದರೂ ಬೈಕ್​ ಕಾಣದ ಕಾರಣ ಬೈಕ್​​ನ್ನು ಹುಡುಕಿಕೊಡುವಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Honda Activa Stolen from Private Bus Stand 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor