ಆಸ್ತಿಗಾಗಿ ಅಕ್ಕ ತಂಗಿ ಜಗಳ, ಮಗನ ಮೇಲೆ ತಂದೆಯ ಕಂಪ್ಲೆಂಟ್​​ ಸೇರಿದಂತೆ ಟಾಪ್​ 03 ಚಟ್ ಪಟ್ ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

1. ಮದ್ಯದ ಅಮಲಿನಲ್ಲಿ ಗಲಾಟೆ, ಮಗನಿಗೆ ಬುದ್ಧಿ ಕಲಿಸಿದ ಪೊಲೀಸ್!

ತುಂಗಾನಗರ: ಕೆಲಸಕ್ಕೂ ಹೋಗದೆ, ಪ್ರತಿದಿನ ಮದ್ಯ ಸೇವಿಸಿ ಮನೆಯಲ್ಲಿ ಹಣಕ್ಕಾಗಿ ಗಲಾಟೆ ಮಾಡುತ್ತಿದ್ದ ಮಗನ ವರ್ತನೆಯಿಂದ ಬೇಸತ್ತ ಪೋಷಕರು 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಘಟನೆ ಮೇ 17 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೂರು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ERV ಸಿಬ್ಬಂದಿಗಳು, ಗಲಾಟೆ ಮಾಡುತ್ತಿದ್ದ ಮಗನಿಗೆ ಮದ್ಯಪಾನ ಬಿಡುವಂತೆ ಸೂಕ್ತ ತಿಳುವಳಿಕೆ ಮತ್ತು ಕಡಕ್ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು 

Crime 2. ಆಸ್ತಿಗಾಗಿ ಅಕ್ಕ-ತಂಗಿ ಜಗಳ

ತುಂಗಾನಗರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕ-ತಂಗಿಯರ ನಡುವೆ ತೀವ್ರ ಗಲಾಟೆ ನಡೆಯುತ್ತಿರುವ ಬಗ್ಗೆ ಮೇ 18 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಹಾಯವಾಣಿಗೆ ಕರೆ ಬಂದಿದೆ. ಮಾಹಿತಿ ಆಧರಿಸಿ ERV ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕರೆ ಮಾಡಿದ್ದ ದೂರುದಾರರು ಸ್ಥಳದಲ್ಲಿ ಇರಲಿಲ್ಲ. ಬಳಿಕ ಅಲ್ಲಿದ್ದ ಎದುರುದಾರರನ್ನು ವಿಚಾರಿಸಿದ ಪೊಲೀಸರು, ಆಸ್ತಿ ಸಮಸ್ಯೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಕಾನೂನುಬದ್ಧವಾಗಿ ಬಗೆಹರಿಸಿಕೊಳ್ಳುವಂತೆ ತಿಳಿಸಿ ಮರಳಿದ್ದಾರೆ.

3. ಅಕ್ರಮ ಮರಳು ಸಾಗಾಟ: ಟಿಪ್ಪರ್ ಲಾರಿ ತಡೆದ ಗ್ರಾಮಸ್ಥರು, ಪೊಲೀಸ್ ವಶಕ್ಕೆ ವಾಹನ

ಭದ್ರಾವತಿ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಗ್ರಾಮಸ್ಥರು ತಡೆಹಿಡಿದಿರುವ ಘಟನೆ ಮೇ 18 ರಂದು ನಡೆದಿದೆ. ಈ ಬಗ್ಗೆ ಗ್ರಾಮಸ್ಥರು 112ಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ERV ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತದನಂತರ ಈ ಅಕ್ರಮ ಸಾಗಾಟದ ಮಾಹಿತಿಯನ್ನು ಗ್ರಾಮಾಂತರ ಠಾಣೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು, ಮುಂದಿನ ಕಾನೂನು ಕ್ರಮಕ್ಕಾಗಿ ಮರಳು ತುಂಬಿದ ಲಾರಿಯನ್ನು ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

Crime Property Feud & Illegal Sand Mining

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor