ಸಾಗರ: 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ದರೋಡೆ

ಹಂಚಿಕೊಳ್ಳಿ
WhatsApp Facebook X Telegram
Sagara 50 Lakh Worth Gold & Cash Stolen 
Sagara 50 Lakh Worth Gold & Cash Stolen 

Sagara ಸಾಗರ : ಸಾಗರ ಪಟ್ಟಣದ ಗಾಂಧಿನಗರದಲ್ಲಿರುವ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಕಳ್ಳರು , ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣವನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ: ಮಹಿಳೆಯರು ಸಭೆಗೆ ಹೋಗ್ತಿದ್ದಾಗ ನಡೀತು ಈ ಘಟನೆ, 24 ಗಂಟೆಯಲ್ಲಿ ಇಬ್ಬರ ಬಂಧನ

ಗಾಂಧಿನಗರದ ನಿವಾಸಿ ನಂದನಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ನಂದನಕುಮಾರ್ ಅವರ ಕುಟುಂಬವು ಏಪ್ರಿಲ್ 25 ರಿಂದ ಮನೆಯಲ್ಲಿರಲಿಲ್ಲ. ಈ ಹಿನ್ನೆಲೆ ಕಳ್ಳರು ಮನೆಯ ಮುಂಭಾಗದ ಬೀಗವನ್ನು ಮುರಿದು ಒಳಪ್ರವೇಶಿಸಿದ್ದಾರೆ. ಮನೆಯೊಳಗಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಸುಮಾರು ಐದೂವರೆ ಕೆ.ಜಿ. ತೂಕದ ಬೆಳ್ಳಿ ವಸ್ತುಗಳು, 2 ಲಕ್ಷ ರೂಪಾಯಿ ನಗದು ಹಣ, 340 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಉಂಗುರಗಳು, ತಾಳಿಸರ ಮತ್ತು ಬಳೆಗಳನ್ನು ಅಪಹರಿಸಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ 50 ಲಕ್ಷ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.

ನಂದನಕುಮಾರ್ ಅವರ ಕುಟುಂಬದವರು ಮನೆಗೆ ಹಿಂದಿರುಗಿದಾಗ, ಮನೆಯ ಬೀಗ ಮುರಿದಿರುವುದು ಹಾಗೂ ಬೀರುವಿನಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಸಾಗರ ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Sagara 50 Lakh Worth Gold & Cash Stolen 

Sagara 50 Lakh Worth Gold & Cash Stolen 
Sagara 50 Lakh Worth Gold & Cash Stolen 
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor