ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: 45 ನಾಡಬಾಂಬ್ ವಶ, ಓರ್ವ ಬೇಟೆಗಾರ ಸೆರೆ

Published: 20 ಏಪ್ರಿಲ್ 2026, 2:05 ಅಪರಾಹ್ನ • 1 min read

ಹೊಸಮಗರ : ಹೊಸನಗರ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಗಾಗಿ ಸಂಗ್ರಹಿಸಿಡಲಾಗಿದ್ದ 45 ಅಪಾಯಕಾರಿ ನಾಡಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಅರಣ್ಯ ಇಲಾಖೆಗೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ.

ಶಿವಮೊಗ್ಗ: JNNCE ಹಾಸ್ಟೆಲ್ ರೂಮ್‌ಗೆ ನುಗ್ಗಿದ ಕಳ್ಳರು, ಕದ್ದಿದ್ದೇನು ಗೊತ್ತಾ? 

ಏಪ್ರಿಲ್ 19ರಂದು ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಸಮೀಪವಿರುವ ಮೀಸಲು ಅರಣ್ಯದಲ್ಲಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ಡಾಕಪ್ಪ, ಭಾಸ್ಕರ ಮತ್ತು ನಾಗರಾಜ್ ಎಂಬುವವರನ್ನು ಅಧಿಕಾರಿಗಳು ಪತ್ತೆಹಚ್ಚಿದರು. ಅಧಿಕಾರಿಗಳ ತಂಡ ದಾಳಿ ಮಾಡುತ್ತಿದ್ದಂತೆ ಭಾಸ್ಕರ್ ಮತ್ತು ನಾಗರಾಜ್ಕಾಡಿನೊಳಗೆ ಓಡಿ ತಪ್ಪಿಸಿಕೊಂಡರೆ, 55 ವರ್ಷದ ಡಾಕಪ್ಪನನ್ನು ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು. 

ಬಂಧಿತನಿಂದ 45 ನಾಡಬಾಂಬ್‌ಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರಿಗಾಗಿಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.

Shimoga Forest Dept Seizes 45 Crude Bombs 

Shimoga Forest Dept Seizes 45 Crude Bombs
Shimoga Forest Dept Seizes 45 Crude Bombs
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Prathapa thirthahalli

Senior Journalist | Malenadu Today
✓ Verified Journalist