ಶಿವಮೊಗ್ಗ: ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗ್ತಿದ್ಯಾ, ಹಾಗಾದ್ರೆ ಈ ನಂಬರ್​ ಕರೆ ಮಾಡಿ

Shimoga City Water ಶಿವಮೊಗ್ಗ: ನಗರದ ಜನತೆಗೆ ಕುಡಿಯುವನೀರಿನ ಸರಬರಾಜಿನಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಹತ್ವದ ಕ್ರಮ ಕೈಗೊಂಡಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ದೈನಂದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಅಥವಾ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ವಾರ್ಡ್‌ವಾರು ಅಭಿಯಂತರರ ದೂರವಾಣಿ ಸಂಖ್ಯೆಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಶಿವಮೊಗ್ಗ : ವಿಮಾನಗಳ ಸಲುವಾಗಿ ಸಂಸದರಿಗೆ ಬಿಗ್ ಮನವಿ!

ನಗರದ ನಿರಂತರ ನೀರು ಸರಬರಾಜು (24/7 ಯೋಜನೆ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಮಂಡಳಿಯ ಹಿರಿಯ ಅಧಿಕಾರಿಗಳ ಸಂಪರ್ಕ ವಿವರಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. ಪ್ರಮುಖವಾಗಿ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಡಿ. (9480689673) ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜೀವನ್ ಯು. (9686731931) ಅವರಿಗೆ ತುರ್ತು ಸಂದರ್ಭಗಳಲ್ಲಿ ಮಾಹಿತಿ ನೀಡಬಹುದಾಗಿದೆ.

ಪ್ರಮುಖ ಬಡಾವಣೆಗಳು ಮತ್ತು ಸಂಪರ್ಕಿಸಬೇಕಾದ ಅಭಿಯಂತರರ:

ಜೀವನ್ ಯು. (9686731931): ಸಹ್ಯಾದ್ರಿನಗರ, ಅಶ್ವಥನಗರ, ಮಲ್ಲೇಶ್ವರನಗರ, ಗುಡ್ಡೆಕಲ್ಲು, ಗಾಂಧಿನಗರ, ರವೀಂದ್ರನಗರ, ಬಸವನಗುಡಿ, ಟ್ಯಾಂಕ್‌ಮೊಹಲ್ಲಾ, ಅರಮನೆ, ವಿದ್ಯಾನಗರ, ಹರಿಗೆ, ಮಲವಗೊಪ್ಪ, ಶರಾವತಿನಗರ, ಹೊಸಮನೆ, ದುರ್ಗಿಗುಡಿ ಮತ್ತು ಗಾಂಧೀಬಜಾರ್ ಪ್ರದೇಶಗಳು 

ಯಾಸಿನ್ ಉಲ್ಲಾಖಾನ್ (9538122088): ಗಾಡಿಕೊಪ್ಪ, ಕಲ್ಲಹಳ್ಳಿ, ವಿನೋಬನಗರ (ಉತ್ತರ/ದಕ್ಷಿಣ), ಗೋಪಾಲಗೌಡ ಬಡಾವಣೆ, ಕೆಹೆಚ್‌ಬಿ ಕಾಲೋನಿ, ಜೆ.ಪಿ.ನಗರ, ಅಶೋಕನಗರ, ಮಿಳಘಟ್ಟ, ಆರ್.ಎಂ.ಎಲ್.ನಗರ, ಗೋಪಿಶೆಟ್ಟಿಕೊಪ್ಪ ಹಾಗೂ ಟಿಪ್ಪುನಗರ.

ರಶ್ಮಿ ಜಿ. (9663020480): ಶಾಂತಿನಗರ, ಅಜಾದ್‌ನಗರ, ಸೀಗೆಹಟ್ಟಿ, ಸವಾಯಿಪಾಳ್ಯ, ವಿದ್ಯಾನಗರ (ಪ) ಮತ್ತು ಸೂಳೆಬೈಲು ಭಾಗದ ನಿವಾಸಿಗಳು ಇವರನ್ನು ಸಂಪರ್ಕಿಸಬಹುದು .

24/7 ಯೋಜನೆಯಡಿ ಕರ್ತವ್ಯದಲ್ಲಿರುವ ತಾಂತ್ರಿಕ ಸಿಬ್ಬಂದಿ:

ನಗರದ ನಿರಂತರ ನೀರಿನ ಯೋಜನೆಯ ಉಸ್ತುವಾರಿಗಾಗಿ ಪ್ರಾಜೆಕ್ಟ್ ಮ್ಯಾನೇಜರ್ ವೀರಣ್ಣ (9880540768) ಅವರ ನೇತೃತ್ವದಲ್ಲಿ ತಂಡ ಸನ್ನದ್ಧವಾಗಿದೆ. ವಿವಿಧ ವಾರ್ಡ್‌ಗಳಿಗೆ ನಿಯೋಜಿತರಾದ ಅಭಿಯಂತರರ ವಿವರ ಹೀಗಿದೆ:

ಮುದಾಸಿರ್ (8867973919): ಗೋಪಾಳ, ವಿನೋಬನಗರ, ಗಾಡಿಕೊಪ್ಪ ಭಾಗ.

ಆಕಾಶ್ (8660408919): ಮೆಹಂದಿನಗರ, ಗಾರ್ಡನ್ ಏರಿಯಾ, ಹರಿಗೆ ಭಾಗ.

ಪವನ್ ಕುಮಾರ್ (9535814150): ಸೀಗೆಹಟ್ಟಿ, ಕೆ.ಆರ್.ಪುರಂ, ಗಾಂಧಿಬಜಾರ್.

ಸತ್ಯಬಾನು (7676511193): ಬೊಮ್ಮನಕಟ್ಟೆ, ನವುಲೆ, ಸೂರ್ಯ ಲೇಔಟ್ ಭಾಗ.

ನಗರದ ನಾಗರಿಕರು ನೀರಿನ ಸಮಸ್ಯೆ ಎದುರಾದಾಗ ಅನಗತ್ಯ ಆತಂಕಕ್ಕೊಳಗಾಗದೆ, ಮಂಡಳಿಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಮತ್ತು ನಿಗದಿಪಡಿಸಿದ ಸಂಖ್ಯೆಗಳಿಗೆ ಕರೆ ಮಾಡಿ ದೂರು ದಾಖಲಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.

Shimoga City Water Supply Complaint Numbers

Shimoga City Water Water Supply Interruption Water Supply Interruption Drinking water
Shimoga City Water
shivamogga car decor sun control house
shivamogga car decor sun control house