ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ V/s ಪೊಲೀಸ್​

ಹಂಚಿಕೊಳ್ಳಿ
WhatsApp Facebook X Telegram
Protest In Front Of Sagara town Police Station Over Delay In Registering Accident Case ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ Vs ಪೊಲೀಸ್​
Protest In Front Of Sagara town Police Station Over Delay In Registering Accident Case ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ Vs ಪೊಲೀಸ್​

ಸಾಗರ / ನಿನ್ನೆ ದಿನ ಸಾಗರ ಟೌನ್​ನಲ್ಲಿ ನಡೆದ ಘಟನೆಯೊಂದರ ಸಂಬಂದ ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಗಳು ದೂರು ದಾಖಲಿಸಲು ಬಂದ ಸಂದರ್ಭದಲ್ಲಿ, ಆ ದೂರನ್ನ ಸ್ವೀಕರಿಸದೇ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನಿನ್ನೆ ಸಾಗರ ಟೌನ್​ ಪೊಲೀಸ್ ಸ್ಟೇಷನ್​ ಮೆಟ್ಟಿಲುಗಳ ಮೇಲೆ ಕುಳಿತು ದಿಕ್ಕಾರ ಕೂಗಿದ್ರು.

ಇದೇ ಸಂದರ್ಭದಲ್ಲಿ ಅವರ ಘೋಷಣೆ ಸ್ಟೇಷನ್ ಅಧಿಕಾರಿಗೆ ಆಕ್ರೋಶ ಭರಿಸಿತ್ತು. ಹೀಗಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಅಷ್ಟರಲ್ಲಿ ಅಲ್ಲಿದ್ದ ಇತರೆ ಸಿಬ್ಬಂದಿ ಸ್ಟೇಷನ್​ ಅಧಿಕಾರಿಯನ್ನು ಸ್ಥಳದಿಂದ ಕರೆದೊಯ್ದರು. ವಾಗ್ವಾದ ಶಮನ ಮಾಡಿದ್ರು.

ಸಾಗರ ಟೌನ್​ ಪೊಲೀಸ್ ಸ್ಟೇಷನ್

ನಗರದ ಸಿಗಂದೂರು ರಸ್ತೆಯಲ್ಲಿ ಹುಲಿಮನೆ ಗ್ರಾಮದ 65 ವರ್ಷದ ಲಕ್ಷಣ ಅವರು ಕ್ರೇನ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.ನಡೆದುಕೊಂಡು ಹೋಗುತ್ತಿದ್ದ ಇವರಿಗೆ ಕ್ರೇನ್ ಡಿಕ್ಕಿಯಾಗುತ್ತಲೇ ಕುಸಿದು ಬಿದ್ದಿದ್ದರು. ಆಸ್ಪತ್ರೆ ಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಘಟನೆ ಸಂಬಂಧ ಮೃತರ ಸಂಬಂಧಿಕರು ಸಾಗರ ಟೌನ್​ ಪೊಲೀಸ್ ಸ್ಟೇಷನ್ ಗೆ ದೂರು ನೀಡಲು ಬಂದಾಗ ಕಾನೂನು ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಉದಾಸೀನತೆ ತೋರಿದ್ದಾರೆ ಎಂಬುದು ಆರೋಪ.

ದೂರು ನೀಡಲು ವಿಳಂಬವಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಸಾಗರ ಟೌನ್​ ಪೊಲೀಸ್ ಸ್ಟೇಷನ್ ಇನ್‌ಸ್ಪೆಕ್ಟರ್ ಪುಲ್ಲಯ್ಯ ನನಗೆ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಮಲ್ಲಿಕಾರ್ಜುನ್​ ಹಕ್​ರೆಯವರ ಆರೋಪ. ಒಟ್ಟಾರೆ ಇಡಿ ಘಟನೆ ನಿನ್ನೆ ನಗರ ಠಾಣೆ ಎದುರು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.

 Protest In Front Of Sagara town Police Station Over Delay In Registering Accident Case ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ Vs ಪೊಲೀಸ್​
Protest In Front Of Sagara town Police Station Over Delay In Registering Accident Case ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ Vs ಪೊಲೀಸ್​

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor