ಜಿಯೋ ಟವರ್​ ವಿಚಾರ, 60 ಲಕ್ಷ ಅಡ್ವಾನ್ಸ್​, 50 ಸಾವಿರ ಬಾಡಿಗೆ, ನಂಬಿದ ವ್ಯಕ್ತಿ ಕಳೆದುಕೊಂಡಿದ್ದೆಷ್ಟು ಗೊತ್ತಾ? 

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ | ವ್ಯಕ್ತಿಯೊಬ್ಬರಿಗೆ ವಂಚಕರು ನಿಮ್ಮ  ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಚಿರುವ ಘಟನೆ  ಶಿವಮೊಗ್ಗದ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. 

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

 ಘಟನೆಯ ವಿವರ

ಕಳೆದ ಫೆಬ್ರವರಿ 5 ರಂದು ದುರುದಾರರ ತಂದೆಗೆ ಅಪರಿಚಿತ ಸಂಖ್ಯೆಯಿಂದ ಫೋನ್​ ಬಂದಿದೆ. ಅದನನ್ನು ಸ್ವೀಕರಿಸಿದಾಗ ನಿಮ್ಮ ಖಾಲಿ ಜಾಗದಲ್ಲಿ ಜಿಯೋ ಟವರ್ ಅಳವಡಿಸುತ್ತೇವೆ. ಇದಕ್ಕೆ ಪ್ರತಿಯಾಗಿ 60 ಲಕ್ಷ ರೂ. ಅಡ್ವಾನ್ಸ್​ ಹಾಗೆಯೇ ತಿಂಗಳಿಗೆ 50,000 ರೂ. ಬಾಡಿಗೆ ಹಾಗೂ ನಿಮ್ಮ ಮಗನಿಗೆ ಕೆಲಸ ನೀಡುತ್ತೇವೆ ಎಂದು ನಂಬಿಸಿದ್ದಾನೆ. ಈ ಆಫರ್ ಕೇಳಿ ಸಂತ್ರಸ್ತರು ಹಾಗೂ ಅವರ ತಂದೆ ವಂಚಕನ ಮಾತುಗಳನ್ನು ಸತ್ಯವೆಂದು ನಂಬಿದ್ದಾರೆ. 

ನಂತರ ವಂಚಕರು ಟವರ್ ಅಳವಡಿಕೆಯ ಪ್ರಕ್ರಿಯೆ ಆರಂಭಿಸಲು ಪ್ರೊಸೆಸಿಂಗ್ ಫೀಸ್, ಟೆಲಿಕಾಂ ಇಲಾಖೆ ಲೈಸೆನ್ಸ್ ಶುಲ್ಕ ಮತ್ತು ಜಿಎಸ್ಟಿ ಹೆಸರಿನಲ್ಲಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು ವಿವಿಧ ಬ್ಯಾಂಕ್ ಖಾತೆ ಹಾಗೂ ಕ್ಯೂಆರ್ ಕೋಡ್‌ಗಳ ಮೂಲಕ ಹಂತಹಂತವಾಗಿ ಒಟ್ಟು 5,15,900 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.

ಇಷ್ಟೆಲ್ಲಾ ಹಣ ಪಡೆದ ನಂತರವೂ ವಂಚಕರು ತೃಪ್ತರಾಗದೆ, ಅಗ್ನಿಶಾಮಕ ಇಲಾಖೆಯ  ಪಪರ್ಮಿಷನ್​​ಗಾಗಿ ಮತ್ತೆ 1 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಸಂತ್ರಸ್ತರು ತಮ್ಮ ಸ್ನೇಹಿತರ ಬಳಿ ಚರ್ಚಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ,

ಈ ಹಿನ್ನೆಲೆ ವಂಚಕರ ವಿರುದ್ದ ಸೈಬರ್​ ಕ್ರೈಂ  ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Jio Tower Scam Shikaripura Man Cheated 

Jio Tower Scam Shivamogga KFD Alert Collapse Canara Bank ತೀರ್ಥಹಳ್ಳಿ : ಬೈಕ್​ ತಗೊಂಡೋರು, ಕ್ಲಿಯರೆನ್ಸ್ ಲೆಟರ್​ ಕೇಳಿದ್ದಕ್ಕೆ ಏನೆಲ್ಲಾ ಆಯ್ತು ಓದಿ
Jio Tower Scam
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor