ಹುಲಿಕಲ್ ಘಾಟಿಯಲ್ಲಿ ಭೀಕರ ದುರಂತ !ಧರೆ ಕುಸಿದು ಮೂವರು ಸಾವು! ಇಬ್ಬರು ಗಂಭೀರ! ಪೂರ್ತಿ ವಿವರ ಹೀಗಿದೆ

ಕೊನೆಯ ನವೀಕರಣ: 09 ಏಪ್ರಿಲ್ 2026, 10:26 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
3 Workers Dead in Landslide During Hulikal Ghat Road Construction ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಮಣ್ಣು ಕುಸಿತದಲ್ಲಿ ಸೂಪರ್​ವೈಸರ್ ಸೇರಿದಂತೆ 3 ಕಾರ್ಮಿಕರು ಮೃತಪಟ್ಟಿದ್ದಾರೆ. 

ಪ್ರಸಿದ್ಧ ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದಿಢೀರ್ ಮಣ್ಣು ಕುಸಿದು ಬಿದ್ದು 3 ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಂಭವಿಸಿದೆ. ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ ಸಮೀಪದ ಹೇರ್​ಪಿನ್ ತಿರುವಿನಲ್ಲಿ ದುರಂತ ನಡೆದಿದ್ದು, ಘಟನೆಯಲ್ಲಿ ಮತ್ತಷ್ಟು ಕಾರ್ಮಿಕರು ಗಾಯಗೊಂಡಿರುವ ಹಾಗೂ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

3 Workers Dead in Landslide During Hulikal Ghat Road Construction ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಮಣ್ಣು ಕುಸಿತದಲ್ಲಿ ಸೂಪರ್​ವೈಸರ್ ಸೇರಿದಂತೆ 3 ಕಾರ್ಮಿಕರು ಮೃತಪಟ್ಟಿದ್ದಾರೆ. 
3 Workers Dead in Landslide During Hulikal Ghat Road Construction ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಮಣ್ಣು ಕುಸಿತದಲ್ಲಿ ಸೂಪರ್​ವೈಸರ್ ಸೇರಿದಂತೆ 3 ಕಾರ್ಮಿಕರು ಮೃತಪಟ್ಟಿದ್ದಾರೆ. 

ಮೃತರನ್ನು ರಾಘವೇಂದ್ರ ತಂದೆ ಕೃಷ್ಣಮೂರ್ತಿ 37 ಚಕ್ಕಾರು ನಗರ, ರಾಜು 30ವರ್ಷ ವಾಸ ನೀಲವಗಲ್ಲು ಹಾವೇರಿ ತಾಲ್ಲೂಕು, ಶಬ್ಬೀರ್ 40ವರ್ಷ ವಾಸ ನೆಲವಗಲ್ಲು ಎಂದು ತಿಳಿದುಬಂದಿದೆ. ಇನ್ನೂ ಸುಮಂತ ಹಾಗು ಪರಮೇಶ್ ಎಂಬಿಬ್ಬರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಲಿಕಲ್ ಘಾಟಿಯಲ್ಲಿ ಭೀಕರ ದುರಂತ !

ಹುಲಿಕಲ್ ಘಾಟಿಯ ಈ ಹೇರ್​ಪಿನ್ ತಿರುವಿನಲ್ಲಿ ಇತ್ತೀಚೆಗೆ ನಿರಂತರವಾಗಿ ಮಣ್ಣು ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿ ನಡೆಯುತ್ತಿರುವಾಗಲೇ ಏಕಾಏಕಿ ಮೇಲ್ಭಾಗದಿಂದ ಬೃಹತ್ ಪ್ರಮಾಣದ ಮಣ್ಣು ಕಾರ್ಮಿಕರ ಮೇಲೆಯೇ ಜರಿದು ಬಿದ್ದಿದೆ. ಪರಿಣಾಮವಾಗಿ, ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೂಪರ್​ವೈಸರ್ ಸೇರಿದಂತೆ ಒಟ್ಟು 3 ಮಂದಿ ಮಣ್ಣಿನಡಿ ಸಿಲುಕಿದ್ಧಾರೆ.

ಮಣ್ಣು ಮತ್ತಷ್ಟು ಜರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೂ ಸಮಸ್ಯಯಾಗುತ್ತಿದೆ. ಘಟನೆಯಲ್ಲಿ ಓರ್ವನನ್ನ ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಣ್ಣಿನಡಿ ಸಿಲುಕಿರಬಹುದಾದ ಇತರ ಕಾರ್ಮಿಕರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹುಲಿಕಲ್ ಘಾಟಿಯಲ್ಲಿ ಭೀಕರ ದುರಂತ !ಧರೆ ಕುಸಿದು ಮೂವರು ಸಾವು! ಇಬ್ಬರು ಗಂಭೀರ! ಪೂರ್ತಿ ವಿವರ ಹೀಗಿದೆ
3 Workers Dead in Landslide During Hulikal Ghat Road Construction ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಮಣ್ಣು ಕುಸಿತದಲ್ಲಿ ಸೂಪರ್​ವೈಸರ್ ಸೇರಿದಂತೆ 3 ಕಾರ್ಮಿಕರು ಮೃತಪಟ್ಟಿದ್ದಾರೆ. 
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor