SHIVAMOGGA NEWS TODAY

800 ಹಾಕಿದಾಗ 1 ಸಾವಿರ ಬಂತು, ನಂತರ ಹೋಗಿದ್ದು 2 ಲಕ್ಷ? ಏನಿದು ಪ್ರಕರಣ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಶಿವಮೊಗ್ಗದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 2,12,340 ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಸಾಗರ ತೀರ್ಥಹಳ್ಳಿ ಶಿಕಾರಿಪುರ ಶಿರಸಿ ದಾವಣಗೆರೆ ಅಡಿಕೆ ಮಾರುಕಟ್ಟೆ ದರ! ಪೂರ್ಣ ಮಾಹಿತಿ

Work From Home Scam ವಂಚನೆ ನಡೆದಿದ್ದು ಹೇಗೆ?

ದೂರುದಾರರು ಏಪ್ರಿಲ್ 4ರಂದು ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ ವರ್ಕ್ ಫ್ರಮ್ ಹೋಮ್ ಕೆಲಸದ ಬಗ್ಗೆ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ, ಟೆಲಿಗ್ರಾಮ್ ಮೂಲಕ ವಂಚಕನೋರ್ವ ಸಂಪರ್ಕಕ್ಕೆ ಬಂದಿದ್ದಾನೆ. ಹೋಟೆಲ್‌ಗಳಿಗೆ ಆನ್‌ಲೈನ್ ರಿವ್ಯೂ ನೀಡುವ ಮೂಲಕ ಹಣ ಗಳಿಸಬಹುದು ಎಂದು ನಂಬಿಸಿ, ಆರಂಭದಲ್ಲಿ ಸಣ್ಣಪುಟ್ಟ ಟಾಸ್ಕ್ ನೀಡಲಾಗಿತ್ತು. ಮೊದಲ ಟಾಸ್ಕ್ ಮುಗಿಸಿದಾಗ 180 ರೂ. ಹಾಗೂ ಎರಡನೇ ಹಂತದ ಟಾಸ್ಕ್ ಮುಗಿಸಿದಾಗ 200 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಿ ವಂಚಕರು ನಂಬಿಕೆ ಹುಟ್ಟಿಸಿದ್ದಾರೆ. 

ಏಪ್ರಿಲ್ 5ರಂದು ವಂಚಕರು ದೊಡ್ಡ ಮೊತ್ತದ ಹೂಡಿಕೆಗೆ ಪ್ರಚೋದಿಸಿದ್ದಾರೆ. ಮೊದಲು 800 ರೂ. ಡೆಪಾಸಿಟ್ ಮಾಡಿಸಿಕೊಂಡು 1040 ರೂ. ವಾಪಸ್ ನೀಡಿದ್ದಾರೆ. ಇದರಿಂದ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಂಬಿದ ಸಂತ್ರಸ್ತರು, ವಂಚಕರು ನೀಡಿದ ವಿವಿಧ ಟಾಸ್ಕ್‌ಗಳನ್ನು ಪೂರೈಸಲು ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಕಂಪನಿಯೊಂದರ ಹೆಸರಿನಲ್ಲಿ ನಟಿಸಿದ ವಂಚಕರು, ದೂರುದಾರರಿಂದ ಒಟ್ಟು 2,12,340 ರೂಪಾಯಿಗಳನ್ನು ಕಿತ್ತುಕೊಂಡು ವಂಚಿಸಿದ್ದಾರೆ.

ತಮಗೆ ವಂಚನೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಕೂಡಲೇ ಅವರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Work From Home Scam in Shivamogga Man Loses 2.12 Lakh

Work From Home Scam Digital Arrest Cyber job scam Cyber Fraud, Shimoga Scam, NEWSTA TRADING, Neo Wealth Partners, Online Cheating, ₹9.9 Lakh Loss, #OnlineScam, #CENPoliceShivamogga cyber crime Shivamogga Cyber Blackmail Cyber crime shivamogga Stock trading scam Cyber crime Shivamogga cyber fraud cyber crime Job Fraud Traffic Challan Scam Part Time Job Scam Shivamogga Police Urge Beware of Online Scams Cyber crime today
Work From Home Scam

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.