ಶಿವಮೊಗ್ಗ / ಮೆಸ್ಕಾಂ ಮಾಹಿತಿ ಪ್ರಕಾರ, ಇವತ್ತು ಸುಮಾರು ಕಡೆಗಳಲ್ಲಿ ಕರೆಂಟ್ ಇರಲ್ಲ. ಕೆಲವೆಡೆ ಮೆಸ್ಕಾಂ ರಿಪೇರಿ ಕೆಲಸ ಹಿಡಿದಿರುವುದರಿಂದ ಕರೆಂಟ್ ಇರಲ್ಲ ಎಂದು ಮೂರು ದಿನಗಳ ಹಿಂದೆಯೇ ಪ್ರಕಟಣೆ ನೀಡಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಈ ಪ್ರಕಟನೆಯನ್ನು ಮತ್ತೊಮ್ಮೆ ಇಲ್ಲಿ ನೀಡಲಾಗಿದೆ.

ವಿದ್ಯುತ್ ವತ್ಯಯದ ಸುದ್ದಿಗಳನ್ನ ಇಲ್ಲಿಯು ಓದಬಹುದು : ಸಾರ್ವಜನಿಕರಲ್ಲಿ ವಿನಂತಿ | ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ POWER CUT
ಇವತ್ತು ಹಲವೆಡೆ ಕರೆಂಟ್ ಇರಲ್ಲ
ಮೆಸ್ಕಾಂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಏಪ್ರಿಲ್ 4 ರಂದು ಅಂದರೆ ಇವತ್ತೆ ಹಮ್ಮಿಕೊಂಡಿದೆ. 110\11 ಕೆವಿ ವಿದ್ಯುತ್ ಉಪಕೇಂದ್ರದಿಂದ ಎಂ.ಆರ್.ಎಸ್ 220\11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಬರುವ 110 ಕೆವಿ ಎಸ್.ಎಸ್-1 ಮಾರ್ಗದಲ್ಲಿ ಈ ನಿರ್ವಹಣಾ ಕಾರ್ಯ ನಡೆಯಲಿದೆ.
ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಹೀಗಾಗಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಮಾರ್ಗದ ವ್ಯಾಪ್ತಿಗೆ ಒಳಪಡುವ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಟ್ ಆಗಲಿದೆ. ಈ ಕಾರಣದಿಂದಾಗಿ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಆಗಸವಳ್ಳಿ, ಹೊಸೂರು ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಇದರ ಜೊತೆಗೆ ಹೊನ್ನಾಪುರ, ಈಚಲವಾಡಿ, ಹಾಯ್ ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ ಮತ್ತು ಭಾರತಿನಗರ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಹಾಗೆಯೇ ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿ ಕಾಲೊನಿ ಹಾಗೂ ಇವುಗಳ ಸುತ್ತಮುತ್ತಲಿನ ಗ್ರಾಮಗಳಲ್ಲೂ ಸಹ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮೆಸ್ಕಾಂ ಇಲಾಖೆ ಪ್ರಕಟಣೆ
ವಿದ್ಯುತ್ ಕಡಿತದ ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆಯ ಮೂಲಕ ಮನವಿ ಮಾಡಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw