ಮೈಸೂರಿನ ಕಥೆ ಹೇಳಿ, ಹುಬ್ಬಳ್ಳಿ ವ್ಯಕ್ತಿಗೆ ಶಿವಮೊಗ್ಗದಲ್ಲಿ ಮೂವರಿಂದ 4 ಲಕ್ಷ ವಂಚನೆ! ಪೂರ್ತಿ ಓದಿ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

Hubballi / ಶಿವಮೊಗ್ಗ / ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಹುಬ್ಬಳ್ಳಿಯ ಸಮಾಜ ಸೇವಕರೊಬ್ಬರಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. 

Three unknown miscreants cheated a Hubballi-based worker of Rs 4 lakh by selling him fake gold coins in Shivamogga. An FIR has been registered at the Tunga Nagar police station under the BNS Act.
Three unknown miscreants cheated a Hubballi-based worker of Rs 4 lakh by selling him fake gold coins in Shivamogga. An FIR has been registered at the Tunga Nagar police station under the BNS Act.

ಘಟನೆಯ ವಿವರ

ವಂಚನೆಗೊಳಗಾದವರುಹಳೆ ಹುಬ್ಬಳ್ಳಿಯ (Hubballi)ಆನಂದ ನಗರ ರಸ್ತೆಯ ನಿವಾಸಿ ಮುಕುಂದ ಗೌಡ. ಇವರಿಗೆ 6 ತಿಂಗಳ ಹಿಂದೆ ಅಶೋಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತಮಗೆ ಸಮಸ್ಯೆಯಿದ್ದು ಸಹಾಯ ಮಾಡುವಂತೆ ಕೋರಿದ್ದನಂತೆ ಬಳಿಕ  ತಾನು ಮೈಸೂರು ಕಡೆಯವನು, ಮನೆಯ ಪಾಯ ತೆಗೆಯುವಾಗ ಹಳೆಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ. ಕಡಿಮೆ ಬೆಲೆಗೆ ಅವುಗಳನ್ನು ನೀಡುತ್ತೇನೆ ಎಂಬಿತ್ಯಾದಿಯಾಗಿ ಆಮೀಷ ಒಡ್ಡಿದ್ದಾನೆ. 

ಶಿವಮೊಗ್ಗಕ್ಕೆ ಕರೆದು ಯಾಮಾರಿಸಿದ್ರು

ಮೊದಲು ಇದನ್ನ ನಂಬದ ಸಂತ್ರಸ್ತರು ಬಳಿಕ ನಾಣ್ಯ ಖರೀದಿಸಲು ಒಪ್ಪಿದ್ದಾರೆ. ಈ ವಹಿವಾಟಿಗೆ ಶಿವಮೊಗ್ಗ ಪಿಕ್ಸ್​ ಆಗಿತ್ತು. ಕಳೆದ  ಮಾರ್ಚ್ 10, 2026 ರಂದು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದ ಸಾಗರ ರಸ್ತೆಯ ಶ್ರೀರಾಂಪುರ ಬಳಿಯ ಹೈವೇ ಪಕ್ಕದ ಖಾಲಿ ಜಾಗದಲ್ಲಿ ಆರೋಪಿಗಳು ಸಂತ್ರಸ್ತರನ್ನ ಭೇಠಿಯಾಗಿದ್ದಾರೆ. 101 ರೂಪಾಯಿ ಪಡೆದು ಒಂದು ನಾಣ್ಯವನ್ನು ಸಂತ್ರಸ್ತರಿಗೆ ನೀಡಿ ಅಲ್ಲಿಂದ ಆರೋಪಿಗಳು ತೆರಳಿದ್ದರು. ಬಳಿಕ ಮುಕುಂದ ಗೌಡರು ಹುಬ್ಬಳ್ಳಿಯ ಬಂಗಾರದ ಅಂಗಡಿಯಲ್ಲಿ ಆ ನಾಣ್ಯವನ್ನು ಪರೀಕ್ಷಿಸಿದ್ದರು. ಅದು ಅಸಲಿ ಆಗಿತ್ತು. 

ನಂಬಿಕೆ ಮೂಡಿದ ಮೇಲೆ

ಕೊಟ್ಟ ಸ್ಯಾಂಪಲ್ ಅಸಲಿ ಆಗಿದ್ದರಿಂದ ಸಂತ್ರಸ್ತರಲ್ಲಿ ನಂಬಿಕೆ ಹುಟ್ಟಿದೆ. ಹೀಗಾಗಿ 200 ಗ್ರಾಂ ಚಿನ್ನಕ್ಕೆ  5 ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದರು. ಕೊನೆಗೆ 4 ಲಕ್ಷ ರೂಪಾಯಿ ನೀಡಲು ಚೌಕಾಸಿ ಆಗಿದೆ. ಅದರಂತೆ ಮಾರ್ಚ್ 13, 2026 ರಂದು ಬೆಳಗ್ಗೆ 11:30 ಕ್ಕೆ ಅದೇ ಸ್ಥಳಕ್ಕೆ ಮುಕುಂದ ಗೌಡರು ಮತ್ತೆ ಶಿವಮೊಗ್ಗಕ್ಕೆ ಬಂದು ಆರೋಪಿಗಳಿಗೆ ನಾಲ್ಕು ಲಕ್ಷ ಕೊಟ್ಟು, 200 ಗ್ರಾಂ ತೂಕದ ನಾಣ್ಯಗಳನ್ನು ಪಡೆದು ಹುಬ್ಬಳ್ಳಿಗೆ ವಾಪಸಾಗಿದ್ದರು.  ಆದರೆ ಈ ಸಲ ಚಿನ್ನದ ನಾಣ್ಯಗಳು ಅಸಲಿಯಾಗಿರಲಿಲ್ಲ. ಅಂತಿಮವಾಗಿ ಆರೋಪಿಗಳಿಗೆ ಕರೆ ಮಾಡಿದರೆ, ಅವರ ಫೋನ್ ಸ್ವಿಚ್ ಆಫ್​ ಆಗಿತ್ತು. ಹೀಗಾಗಿ ಮೋಸ ಹೋಗಿರುವುದು ಖಾತರಿಯಾಗಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಈ ಸಂಬಂಧ ಪೊಲೀಸರು ಅಪರಿಚಿತ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Three unknown miscreants cheated a Hubballi-based worker of Rs 4 lakh by selling him fake gold coins in Shivamogga. An FIR has been registered at the Tunga Nagar police station under the BNS Act.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor