ಶಿವಮೊಗ್ಗ: ರೈಲ್ವೇ ಟಿಕೆಟ್​​ ಬುಕ್ಕಿಂಗ್​ ಕೌಂಟರ್ ಸೇರಿದಂತೆ ಹಲವೆಡೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ತಪಾಸಣೆ

ಹಂಚಿಕೊಳ್ಳಿ
WhatsApp Facebook X Telegram
High Alert at Shivamogga Railway Station
High Alert at Shivamogga Railway Station

ಶಿವಮೊಗ್ಗ :  ರೈಲು ನಿಲ್ದಾಣದಲ್ಲಿ ಇಂದು ರೈಲ್ವೆ ಭದ್ರತಾ ಪಡೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ತಪಾಸಣೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.

ಶಿವಮೊಗ್ಗ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ, ಮಹಿಳೆಯರ ಬೃಹತ್ ಪ್ರತಿಭಟನೆ

ಶಿವಮೊಗ್ಗ ರೈಲು ನಿಲ್ದಾಣದಾದ್ಯಂತ ಎಎಸ್‌ಸಿ (ASC) ಹಾಗೂ ಶ್ವಾನ ದಳದತಂಡಗಳು ತಪಾಸಣೆ ನಡೆಸಿದವು. ನಿಲ್ದಾಣದ ರೈಲ್ವೆ ಪ್ಲಾಟ್‌ಫಾರ್ಮ್‌ಗಳು, ಟಿಕೆಟ್ ಬುಕಿಂಗ್ ಕೌಂಟರ್‌ಗಳು, ಪಾರ್ಸೆಲ್ ಆಫೀಸ್, ವಾಹನ ನಿಲ್ದಾಣ ಹಾಗೂ ವೇಟಿಂಗ್ ಹಾಲ್‌ಗಳಲ್ಲಿ ಪ್ರತಿಯೊಂದು ಮೂಲೆಯನ್ನೂ ತಪಾಸಣೆಗೊಳಪಡಿಸಲಾಯಿತು. 

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. 

High Alert at Shivamogga Railway Station

High Alert at Shivamogga Railway Station
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor