ತೀರ್ಥಹಳ್ಳಿ: ತಾಲ್ಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದ್ದ ಮನೆ ನಿರ್ಮಾಣ ಸಾಮಗ್ರಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ . ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ಮೂಲದ ಗುಜರಿ ವ್ಯಾಪಾರಿಯನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಸೇರಿ 8 ಜಿಲ್ಲೆಗಳ ಕೇಳುಗರಿಗೆ ಸಿಹಿಸುದ್ದಿ! ಎಫ್‌ಎಂ 101.4 ಶೀಘ್ರದಲ್ಲಿ!
ಕೂಡಿಗೆ ಗ್ರಾಮದ ಗಬಡಿಯ ಮೇಘರಾಜ್ ಎಂಬುವವರು ತಮ್ಮ ನೂತನ ಮನೆಯ ಎರಡನೇ ಮಹಡಿಯ ಸ್ಲಾಬ್ ಕೆಲಸಕ್ಕಾಗಿ ಅಂದಾಜು 45,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಮನೆಯ ಪಕ್ಕದಲ್ಲೇ ಇರಿಸಿದ್ದರು . ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಯಾರೋ ಕಿಡಿಗೇಡಿಗಳು ಈ ಶೀಟ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ್ದರು. ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎನ್ ಕಲಗುಚ್ಚಿ ಮತ್ತು ಮಾಳೂರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪಿಎಸ್‌ಐ ಸುನೀಲ್ ಬಿ.ಸಿ ಹಾಗೂ ತಂಡವು ಕಾರ್ಯಾಚರಣೆ ನಡೆಸಿ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ನಿವಾಸಿ ರಶೀದ್ ಅಲಿಯಾಸ್ ಮೊಹಿದ್ದೀನ್ (42) ಎಂಬಾತನನ್ನು ಬಂಧಿಸಿದ್ದಾರೆ
ಬಂಧಿತ ಆರೋಪಿಯಿಂದ ಅಂದಾಜು 1,00,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1,00,000 ರೂ. ಮೌಲ್ಯದ ಮಹಿಂದ್ರಾ ಸುಪ್ರಾ ಮ್ಯಾಕ್ಸಿ ಟ್ರಕ್ ವಾಹನವನ್ನು ಜಪ್ತಿ ಮಾಡಲಾಗಿದೆ . ತನಿಖೆಯ ವೇಳೆ ವಶಪಡಿಸಿಕೊಂಡ ಶೀಟ್‌ಗಳಲ್ಲಿ 50 ಶೀಟ್‌ಗಳು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದ್ದವು ಎಂಬುದು ಬಯಲಾಗಿದೆ.
Shimoga Police Crack Centering Sheet Theft Case


