ಶಿವಮೊಗ್ಗ: ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಿದ ಮಹಾನಗರ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರು.

ಹಂಚಿಕೊಳ್ಳಿ
WhatsApp Facebook X Telegram
Footpath Encroachment Cleared on 100 Feet Road
Footpath Encroachment Cleared on 100 Feet Road

ಶಿವಮೊಗ್ಗ: ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳು ಹಾಗೂ ಫಾಸ್ಟ್ ಫುಡ್ ಗಾಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ.

ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..? 

ನಗರದ ಆಯಕಟ್ಟಿನ ಪ್ರದೇಶಗಳಾದ 100 ಅಡಿ ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತದವರೆಗೆ, ಮೇದಾರ ಕೇರಿ ರಸ್ತೆ ಹಾಗೂ ಫ್ರೀಡಂ ಪಾರ್ಕ್ ಎದುರು ಭಾಗದಲ್ಲಿಕಾರ್ಯಾಚರಣೆ ನಡೆಯಿತು. ಈ ಭಾಗಗಳಲ್ಲಿ ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. 

ಈ ವೇಳೆ ಫುಟ್‌ಪಾತ್‌ಗಳ ಮೇಲೆ ಅನಧಿಕೃತವಾಗಿ ಇರಿಸಲಾಗಿದ್ದ ದೊಡ್ಡ ದೊಡ್ಡ ನಾಮಫಲಕಗಳು, ತಳ್ಳುಗಾಡಿಗಳು, ಫಾಸ್ಟ್ ಫುಡ್ ತಯಾರಿಕಾ ಉಪಕರಣಗಳು ಹಾಗೂ ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದ ಇತರೆ ವಸ್ತುಗಳನ್ನು ಸ್ಥಳದಲ್ಲೇ ತೆರವುಗೊಳಿಸಲಾಯಿತು.

ನಂತರ ಟ್ರಾಫಿಕ್​ ಇನ್ಸ್​ಪೆಕ್ಟರ್​ ದೇವರಾಜ್​ರವರು ಮೈಕ್​ನಲ್ಲಿ ಅನೌನ್ಸ್​ ಮಾಡುತ್ತಾ, ವಸ್ತುಗಳನ್ನು ನಿಮ್ಮ ಮಳಿಗೆ ಒಳಗಡೆಯೇ ಇಟ್ಟುಕೊಳ್ಳಿ, ಅದನ್ನು ಹೊರಗಡೆ ಇಡುವುದರಿಂದ ಜನರಿಗೆ ಓಡಾಡಲೂ ಹಾಗೆಯೇ ಕಾರುಗಳನ್ನು ಪಾರ್ಕಿಂಗ್​ ಮಾಡಲು ಸಾಧ್ಯವಾಗುವುದಿಲ್ಲ ಎಂದು ವ್ಯಾಪಾರಿಗಳಿಗೆ ಮನವಿ ಮಾಡಿದರು.

Footpath Encroachment Cleared on 100 Feet Road

Footpath Encroachment Cleared on 100 Feet Road
Footpath Encroachment Cleared on 100 Feet Road
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor