ಬಿ ರಿಪೋರ್ಟ್ ಆಗುತ್ತಿರುವುದೇಕೆ ಅಟ್ರಾಸಿಟಿ ಪ್ರಕರಣಗಳು? ಜೆಪಿ ಬರೆಯುತ್ತಾರೆ.

Misuse of Atrocity Law ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಜಾರಿಗೆ ಬಂದಿದೆ. ಇದರ ವ್ಯಾಪ್ತಿಯಲ್ಲಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಆರಂಭಿಸಿ, ಶೋಷಿತ ಜನರಿಗೆ ವಿಶೇಷ ಭದ್ರತೆ ಒದಗಿಸುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರ ಬಲವಾದ ಕಾನೂನಿನ ಶಕ್ತಿಯನ್ನು ನೀಡುವ ಮೂಲಕ ಶೋಷಿತ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದೆ. 

Misuse of Atrocity Law ಡಿ.ಸಿ.ಆರ್.ಇ.ಗೆ ವಹಿಸಲಾದ 14 ಪ್ರಮುಖ ಕರ್ತವ್ಯಗಳು ಹೀಗಿವೆ

ಶೇ. 18ರಷ್ಟು ಹುದ್ದೆಗಳ ಮೀಸಲಾತಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಉಲ್ಲಂಘನೆ ತಡೆ.

ನಿಧಿಯ ಮೀಸಲಿಡುವಿಕೆ ಮತ್ತು ಬಳಕೆಗೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಉಲ್ಲಂಘನೆ ತನಿಖೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಬಂಧನೆಗಳ ಉಲ್ಲಂಘನೆ ವಿಚಾರಣೆ.

ಗೋಮಾಳ ಭೂಮಿಯಿಂದ ಒಕ್ಕಲೆಬ್ಬಿಸುವುದಕ್ಕೆ ಸಂಬಂಧಿಸಿದ ಸರ್ಕಾರಿ ನಿರ್ದೇಶನಗಳ ಉಲ್ಲಂಘನೆ.

ನಿವೇಶನಗಳ ಮಂಜೂರಾತಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ತಡೆ.

ಇನಾಂ ಭೂಮಿ ಮತ್ತು ಮನೆ ನಿವೇಶನಗಳ ಅಕ್ರಮ ಪರಭಾರೆ ತಡೆಯುವುದು.

ಭೂಮಾಲೀಕರಿಂದ ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಅಕ್ರಮವಾಗಿ ಹೊರಹಾಕುವಿಕೆ.

ಇತರ ಸಮುದಾಯಗಳು ಮತ್ತು ಸರ್ಕಾರಿ ಏಜೆನ್ಸಿಗಳಿಂದ ಎಸ್‌ಸಿ/ಎಸ್‌ಟಿಗಳನ್ನು ಅಕ್ರಮವಾಗಿ ಒಕ್ಕಲೆಬ್ಬಿಸುವುದು.

ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಸೃಷ್ಟಿಸುವ ಪ್ರಕರಣಗಳ ತನಿಖೆ.

ಜೀತ ಪದ್ಧತಿ ವಿಮೋಚನಾ ಕಾಯ್ದೆ 1975ರ ಅಡಿಯಲ್ಲಿನ ಅಪರಾಧಗಳು.

ಕರ್ನಾಟಕ ಸಾಲ ಪರಿಹಾರ ಆದೇಶದ ಅಡಿಯಲ್ಲಿನ ಅಪರಾಧಗಳು.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನದ ದುರುಪಯೋಗದ ಎಲ್ಲಾ ನಿದರ್ಶನಗಳು.

ಸಾಂವಿಧಾನಿಕ ಸುರಕ್ಷತೆ ಮತ್ತು ಎಸ್‌ಸಿ/ಎಸ್‌ಟಿಗಳ ರಕ್ಷಣೆಯ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳು.

ಎಸ್‌ಸಿ/ಎಸ್‌ಟಿಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಯಾವುದೇ ಕಾನೂನು ಮತ್ತು ನಿಯಮದ ಉಲ್ಲಂಘನೆ. 

ಈ ಮೇಲಿನ ಅಂಶಗಳನ್ನು ಗಮನಿಸಿದರೆ ಡಿ.ಸಿ.ಆರ್.ಇ ಪವರ್ ಎಂತದ್ದು ಎಂಬುದು ಅರಿವಾಗುತ್ತದೆ.

ಬಿ ರಿಪೋರ್ಟ್ ಆಗುತ್ತಿವೆ ಅಟ್ರಾಸಿಟಿ ಪ್ರಕರಣಗಳು

ಶಿವಮೊಗ್ಗದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿ ಪ್ರಾರಂಭವಾದ ನಂತರ ಜಿಲ್ಲೆಯಾದ್ಯಂತ 28 ಅಟ್ರಾಸಿಟಿ ಪ್ರಕರಣಗಳು ಎಫ್.ಐ.ಆರ್ ಆಗಿವೆ. ಎಫ್.ಐ.ಆರ್ ದಾಖಲಾದ ನಂತರ ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಈ 28 ಪ್ರಕರಣಗಳಲ್ಲಿ 11 ಪ್ರಕರಣಗಳು ಬಿ-ರಿಪೋರ್ಟ್ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಂದೋ ಪ್ರಕರಣ ದಾಖಲಿಸಿದ ದೂರುದಾರರು ಸುಳ್ಳು ಕೇಸ್ ಹಾಕಿರಬೇಕು, ಇಲ್ಲವೇ ತನಿಖೆ ನಡೆಸಿದ ಡಿ.ಸಿ.ಆರ್.ಇ ಪೊಲೀಸರು ದಾರಿ ತಪ್ಪಿಸಿರಬೇಕು ಎಂಬ ಸಂಶಯವನ್ನುಂಟು ಮಾಡುತ್ತದೆ. 

ಶಿವಮೊಗ್ಗದ ಕೋಟೆ ಮಾರಿಕಾಂಬಾ ಜಾತ್ರೆಗೆ ಸಿದ್ಧವಾಯ್ತು ಹೊಸ ಸಾಂಗ್: ಹರಕೆ ರೂಪದ ಮಾರಿ ಜಾತ್ರೆ ಆಲ್ಬಂ ಬಿಡುಗಡೆ ಯಾವಾಗ

ಆದರೆ ಪೊಲೀಸರನ್ನು ಇಲ್ಲಿ ಅನುಮಾನದ ದೃಷ್ಟಿಯಿಂದ ನೋಡುವುದು ತಪ್ಪಾಗುತ್ತದೆ. ಅಟ್ರಾಸಿಟಿ ಕೇಸ್‌ಗಳಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆಯ ಆಳಕ್ಕೆ ಇಳಿಯುತ್ತಿರುವ ಪೊಲೀಸರಿಗೆ ನಿಜವಾಗಿಯೂ ನೊಂದವರು ಯಾರು ಎಂಬುದು ಅರಿವಾಗುತ್ತಿದೆ. ಪೊಲೀಸರು ಒಂದೆರಡು ಪ್ರಕರಣಗಳಲ್ಲಿ ಬಿ-ರಿಪೋರ್ಟ್ ಹಾಕಿದರೆ ಪರವಾಗಿಲ್ಲ. ಆದರೆ 11 ಪ್ರಕರಣಗಳು ಬಿ-ರಿಪೋರ್ಟ್ ಆಗುತ್ತವೆ ಎಂದರೆ ಇಲ್ಲಿ ನೊಂದವರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜಾತಿ ನಿಂದನೆ ಕೇಸ್‌ನಲ್ಲಿ ಪೊಲೀಸರು ಪ್ರಬಲ ಸಾಕ್ಷ್ಯಾಧಾರಗಳನ್ನು ಕೇಳುತ್ತಾರೆ. ಆದರೆ ಸಾಕ್ಷಿ ಒದಗಿಸುವಲ್ಲಿ ದೂರುದಾರರು ವಿಫಲರಾಗುತ್ತಿದ್ದಾರೆ. ಹೆದರಿಸುವ-ಬೆದರಿಸುವ ತಂತ್ರವಾಗಿ ಹಾಗೂ ಕೇಸ್ ದಾಖಲಾದರೆ ಸರ್ಕಾರದಿಂದ ಬರುವ ಪರಿಹಾರದ ಹಣಕ್ಕಾಗಿ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಇದರಿಂದ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಪೋಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

Misuse of Atrocity Law ಬಿ-ರಿಪೋರ್ಟ್ ಆದ ಪ್ರಕರಣಗಳಲ್ಲಿ ಹಣ ವಸೂಲಿಗೆ ಅವಕಾಶವಿಲ್ಲವೇ?

ಜಾತಿ ನಿಂದನೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ನೊಂದವರಿಗೆ ಸರ್ಕಾರವು ಪರಿಹಾರದ ರೂಪದಲ್ಲಿ ಹಣ ನೀಡುತ್ತದೆ. ಜಾತಿ ನಿಂದನೆ ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಾದರೆ, ನೊಂದವರಿಗೆ 50 ಸಾವಿರ ರೂಪಾಯಿ ಹಣವನ್ನು ಒಂದು ವಾರದೊಳಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತದೆ. ಇದೇ ಪ್ರಕರಣ ಚಾರ್ಜ್‌ಶೀಟ್ ಆದರೆ ನೊಂದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅಲ್ಲದೆ ನ್ಯಾಯ ಸಿಕ್ಕರೆ ಎರಡು ಲಕ್ಷ ರೂಪಾಯಿ ಹಣ ಸಿಗುತ್ತದೆ. ದೂರಿನಲ್ಲಿ ಎಷ್ಟು ಮಂದಿ ನೊಂದವರು ಎಂದು ನಮೂದಾಗುತ್ತಾರೋ ಅವರೆಲ್ಲರಿಗೂ ತಲಾ ಐವತ್ತು ಸಾವಿರದಂತೆ ಪರಿಹಾರ ಬರುತ್ತದೆ. ಉದಾಹರಣೆಗೆ, ಹೊಳೆಹೊನ್ನೂರಿನ ಒಂದು ಪ್ರಕರಣದಲ್ಲಿ ಕೇವಲ ಒಬ್ಬ ವ್ಯಕ್ತಿ ಮೂವತ್ತಮೂರು ಜನರಿಗೆ ಹೊಡೆದಿದ್ದಾನೆ ಎಂದು ನೀಡಲಾದ ದೂರಿನಲ್ಲಿ, ಆ 33 ಮಂದಿಯ ಪರವಾಗಿ ಜಾತಿ ನಿಂದನೆ ಕೇಸ್ ದಾಖಲಾಗಿದೆ.

ಈ ಪ್ರಕರಣದಲ್ಲಿ 33 ಮಂದಿಗೂ ತಲಾ 50 ಸಾವಿರದಂತೆ ಪರಿಹಾರದ ಹಣ ಬರುತ್ತದೆ. ಈಗಾಗಲೇ ಎಫ್.ಐ.ಆರ್ ದಾಖಲಾಗಿ ಪರಿಹಾರ ಪಡೆದುಕೊಂಡ 11 ಪ್ರಕರಣಗಳು ಈಗ ಬಿ-ರಿಪೋರ್ಟ್ ಆಗಿವೆ. ಅಂದರೆ ಅವು ಸುಳ್ಳು ಪ್ರಕರಣಗಳೆಂದು ಪೊಲೀಸರು ನ್ಯಾಯಾಲಯಕ್ಕೆ ಸಾಬೀತುಪಡಿಸಿದ್ದಾರೆ. ಹೀಗೆ ಬಿ-ರಿಪೋರ್ಟ್ ಆದ ಪ್ರಕರಣಗಳಲ್ಲಿ ಪರಿಹಾರದ ಹಣ ಪಡೆದವರಿಂದ ಅದನ್ನು ಹಿಂಪಡೆಯಬೇಕಲ್ಲವೇ? ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲವೇ? ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ನೊಂದವರಿಗೆ ನ್ಯಾಯ ನೀಡುವ ಹೆಸರಿನಲ್ಲಿ ಭ್ರಷ್ಟಾಚಾರ ನಡೆದರೆ ಅದಕ್ಕೆ ಹೊಣೆ ಯಾರು? ಈ ಬಗ್ಗೆ ದಲಿತ ಸಂಘಟನೆಗಳು ಧ್ವನಿ ಎತ್ತಬೇಕಿದೆ.

Misuse of Atrocity Law
Misuse of Atrocity Law

Misuse of Atrocity Law Analysis on Rising B-Reports

shivamogga car decor sun control house
shivamogga car decor sun control house