ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಕಂಬಳಿಯ ಜುಲ ಅನಾವರಣ

ಶಿವಮೊಗ್ಗ : ಶಿವಮೊಗ್ಗದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆ 15 ರಂದು ಫ್ರೀಡಂ ಪಾರ್ಕ್​ನಲ್ಲಿ   ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ಬೃಹತ್ ಟಗರು ಕಾಳಗಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾದ ಕಂಬಳಿಯ ಜುಲವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಅನಾವರಣಗೊಳಿಸಿದರು. 

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ, ಶಿವಮೊಗ್ಗಕ್ಕೆ ಬರ್ತಿದ್ದಾರೆ ವರ್ತೂರು ಸಂತೋಷ್​

ಸಂಗೊಳ್ಳಿ ರಾಯಣ್ಣ, ವೀರ ಶಿವಪ್ಪ ನಾಯಕ, ಭಗೀರಥ ಹಾಗೂ ವೀರ ಸಿಂಧೂರ ಲಕ್ಷ್ಮಣ ಬಿರುದಾಂಕಿತ ಈ ಜುಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ನಲಪಾಡ್ ಅವರು, ಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ನಮ್ಮೂರ ಬಳಗ ಹಮ್ಮಿಕೊಂಡಿರುವ ಈ ಟಗರು ಕಾಳಗವು ಜನರ ಉತ್ಸಾಹವನ್ನು ಹೆಚ್ಚಿಸಿದೆ. ಶಿವಮೊಗ್ಗದ ಮಾರಿಕಾಂಬಾ ಜಾತ್ರೆಯ ಅಂಗವಾಗಿ ನಡೆಯುವ ಈ ಕ್ರೀಡಾಕೂಟವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

Mohammed Harris Nalapad Unveils Tagaru Kalaga Kambali Jula
Mohammed Harris Nalapad Unveils Tagaru Kalaga Kambali Jula

Harris Nalapad Unveils Tagaru Kalaga Kambali Jula

shivamogga car decor sun control house
shivamogga car decor sun control house
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು