ಶಿವಮೊಗ್ಗ: ಮುಂಬೈಗೆ ಹೋಗಿದ್ದ ಫ್ಯಾನ್ಸಿ ಸ್ಟೋರ್ ಮಾಲೀಕರ ಮನೆಗೆ ಕಳ್ಳರ ಕನ್ನ, ದೋಚಿದ ಬಂಗಾರವೆಷ್ಟು ಗೊತ್ತಾ..?

ಹಂಚಿಕೊಳ್ಳಿ
WhatsApp Facebook X Telegram
Shimoga Honda ActivaRowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

ಶಿವಮೊಗ್ಗ: ನಗರದ ಖಾಜಿ ಮೊಹಲ್ಲಾದಲ್ಲಿ ಫ್ಯಾನ್ಸಿ ಸ್ಟೋರ್ ಮಾಲೀಕರ ಮನೆಯ ಬೀಗ ಮುರಿದು ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ 

ಖಾಜಿ ಮೊಹಲ್ಲಾದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿರುವ ಕುಟುಂಬವೊಂದು, ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮುಂಬೈಗೆ ತೆರಳಿತ್ತು. ಇದೇ ಸಮಯವನ್ನು ಬಳಸಿಕೊಂಡ ಕಳ್ಳರು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ  25 ಗ್ರಾಂ ತೂಕದ ಚಿನ್ನದ ನೆಕ್ಲೇಸ್,20 ಗ್ರಾಂ ತೂಕದ ಚಿನ್ನದ ಕೈ ಕಡಗ,5 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್, ಚಿನ್ನದ ಉಂಗುರ ಹಾಗೂ ಒಂದು ವಜ್ರದ ಉಂಗುರ,10,000 ರೂಪಾಯಿ ನಗದು ಹಣ ಸೇರಿದಂತೆ ಮನೆಯಲ್ಲಿದ್ದ ಸುಮಾರು 4,75,700 ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.

ಕುಟುಂಬವು ಮುಂಬೈನಿಂದ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Shimoga 4.75 Lakh Jewelry Stolen in Khazi Mohalla

Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Shimoga
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor