ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ವಿವಿಧ ಘಟನೆಗಳ ಕುರಿತಾದ ಇವತ್ತಿ ಮಲೆನಾಡು ಟುಡೆ ಚಟ್ ಪಟ್ ನ್ಯೂಸ್.. 

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!

malnad crime news Annanagar Wife Conspires to Murder Husband in Shivamogga
Wife Conspires to Murder Husband in Shivamogga

ಭದ್ರಾವತಿ ಆರ್‌ಎಂಸಿ ಬಳಿ ಜೂಜಾಟ,  ಪರಿಶೀಲಿಸಿದ ಪೊಲೀಸರು

ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕು ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರ್‌ಎಂಸಿ (RMC) ಮಾರುಕಟ್ಟೆಯ ಬಳಿ ಕಾನೂನು ಬಾಹಿರವಾಗಿ ಗ್ಯಾಂಬ್ಲಿಂಗ್  ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.  ಈ ಬಗ್ಗೆ ನಾಗರಿಕರೊಬ್ಬರು ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ದೂರನ್ನು ದಾಖಲಿಸಿದ್ದರು. ದೂರುದಾರರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಸ್ತಳಕ್ಕೆ ತೆರಳಿ  ಕಾರ್ಯಾಚರಣೆ ನಡೆಸಿದರು. ಆದರೆ ಪೊಲೀಸರ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳದಲ್ಲಿ ಯಾವುದೇ ರೀತಿಯ ಗ್ಯಾಂಬ್ಲಿಂಗ್ ಅಥವಾ ಜೂಜಾಟದ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. 

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!

ಆನಂದಪುರ-ಹೊಸನಗರ ರಸ್ತೆಯಲ್ಲಿ  ಕಾರು ಅಪಘಾತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದೆ.  21.12.2025 ರಂದು ಆನಂದಪುರದಿಂದ ಹೊಸನಗರಕ್ಕೆ ಹೋಗುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಮಾಹಿತಿ ಸಿಕ್ಕ ಕೂಡಲೇ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದ್ದು, ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ ಚಟ್ ಪಟ್ ನ್ಯೂಸ್: ಜೂಜಾಟ, ಅಪಘಾತ ಮತ್ತು ಮಹಿಳೆ ಮೇಲೆ ದೌರ್ಜನ್ಯ ತಡೆ , Shivamogga District Chat Pat News: Gambling Check, Road Accident and Arrest in Misbehavior Case
ಶಿವಮೊಗ್ಗ ಜಿಲ್ಲೆಯ ಚಟ್ ಪಟ್ ನ್ಯೂಸ್: ಜೂಜಾಟ, ಅಪಘಾತ ಮತ್ತು ಮಹಿಳೆ ಮೇಲೆ ದೌರ್ಜನ್ಯ ತಡೆ , Shivamogga District Chat Pat News: Gambling Check, Road Accident and Arrest in Misbehavior Case

ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ, ಆರೋಪಿ ವಶಕ್ಕೆ

Shivamogga District Chat Pat News

ಕೆಎಸ್ಆರ್ಟಿಸಿ (KSRTC) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಸಂಬಂಧ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.  ದಿನಾಂಕ 18.12.2025 ರಂದು ಈ ಘಟನೆ ನಡೆದಿದೆ.  ಬಸ್ಸಿನಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಸಂತ್ರಸ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಸ್​ನ್ನು ತಡೆದು ಸಂತ್ರಸ್ತರು ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಯ ಎಸ್​ಎಹ್​ಒ ಮುಂದೆ ಹಾಜರು ಪಡಿಸಿದರು.

malenadutoday add

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಶಿವಮೊಗ್ಗ ಜಿಲ್ಲೆಯ ಚಟ್ ಪಟ್ ನ್ಯೂಸ್: ಜೂಜಾಟ, ಅಪಘಾತ ಮತ್ತು ಮಹಿಳೆ ಮೇಲೆ ದೌರ್ಜನ್ಯ ತಡೆ , Shivamogga District Chat Pat News: Gambling Check, Road Accident and Arrest in Misbehavior Case

Shivamogga news live, Shimoga news kannada live, Malenadu news, Ripponpet accident, 112 Helpline Shivamogga, KSRTC bus incident , ಶಿವಮೊಗ್ಗ ನ್ಯೂಸ್ ಲೈವ್, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ರಿಪ್ಪನ್‌ಪೇಟೆ ಅಪಘಾತ, 112 ಸಹಾಯವಾಣಿ ಶಿವಮೊಗ್ಗ, ಕೆಎಸ್ಆರ್ಟಿಸಿ ಬಸ್ ಘಟನೆ