ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ (Balasubrahmanya Swamy Temple) ನಾಳೆ ಅಂದರೆ, ಡಿಸೆಂಬರ್ 3 ರಂದು ಕಾರ್ತಿಕ ದೀಪೋತ್ಸವ ನಡೆಯಲಿದೆ. ಈ ಬಗ್ಗೆ ವಿವರ ಇಲ್ಲಿದೆ.
ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್ನಲ್ಲಿ ಶಿವಮೊಗ್ಗ ಕೋರ್ಟ್ನ ತೀರ್ಪು!
ಶಿವಮೊಗ್ಗ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಿಪೋತ್ಸವ
ನಗರದ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್‌ನಲ್ಲಿರುವ ದೇವಾಲಯದ ಆವರಣದಲ್ಲಿ ನಾಳೆ ಡಿಸೆಂಬರ್ 3 ರಂದು ಸಂಜೆ 6 ಗಂಟೆಗೆ ವಿಜೃಂಭಣೆಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯಿಂದಲೇ ದೀಪೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ.

ದೀಪೋತ್ಸವದ ಕಾರ್ಯಕ್ರಮಗಳು
ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಗೋಪಿ ಸರ್ಕಲ್‌ನಿಂದ ಬಾಲಸುಬ್ರಹ್ಮಣ್ಯ ಸ್ವಾಮಿ ಭಕ್ತರ ಮೆರವಣಿಗೆ ಹೊರಡಲಿದೆ. ಈ ಉತ್ಸವದಲ್ಲಿ ಕಾವಡಿಗಳು, ಸಾಂಪ್ರದಾಯಿಕ ಪಂಬೈ ವಾದ್ಯಗಳು ಮತ್ತು ಮಂಗಳವಾದ್ಯಗಳು ಇರಲಿದೆ ಎಂದು ತಿಳಿಸಲಾಗಿದೆ.. ಈ ಮೆರವಣಿಗೆಯು ಮೊದಲು ಮೈಲಾರೇಶ್ವರ ದೇವಾಲಯವನ್ನು ತಲುಪಲಿದೆ. ಸಂಜೆ 4 ಗಂಟೆಗೆ ಮೈಲಾರೇಶ್ವರ ದೇವಾಲಯದಿಂದ ಮಹಿಳೆಯರ ನೇತೃತ್ವದಲ್ಲಿ ದೀಪಗಳೊಂದಿಗೆ ಮೆರವಣಿಗೆ ಸಾಗಲಿದೆ. ಈ ಮೆರವಣಿಗೆ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತೆರಳಲಿದೆ.
ಇನೋವಾ ಕಾರಿನಲ್ಲಿ ಸಿಕ್ಕ ದಾಖಲೆಯಿಲ್ಲದ 8 ಕೋಟಿ ಯಾರದ್ದು ಗೊತ್ತಾ!? ಎಸ್ಪಿ ಹೇಳಿದ್ದೇನು?
ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿದ ಬಳಿಕ, ಬಾಲಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ಮಹಾ ದೀಪಾರಾಧನೆಯು ನಡೆಯಲಿದೆ. ಧಾರ್ಮಿಕ ವಿಧಿವಿಧಾನಗಳ ನಂತರ ಸಿಡಿಮದ್ದು ಮತ್ತು ಬಾಣಬಿರುಸುಗಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಯಿಲಾಡುದುರೈಯ ಮಯಿಲೈ ಅಮ್ಮನವರ ಕೀರ್ತಿಯ ಪಂಬೈ ಕಲೈ ಸಂಘದವರು ಭಕ್ತಿಗೀತೆ ಮತ್ತು ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಪಿ. ರಘುಕುಮಾರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಕಾಗೋಡು ತಿಮ್ಮಪ್ಪ ಅವರಿಗೆ ಮಲೆನಾಡು ಲೋಹಿಯಾ ಪ್ರಶಸ್ತಿ
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
