ರಾಜಕೀಯದ ನಡುವೆ ಶಿವಮೊಗ್ಗದಲ್ಲಿ ಶಿವಣ್ಣನ ದೊಡ್ಡ ಮಾತು! ಏನದು?

This Article Written by / Malenadu Today / ಮಾರ್ಚ್ 28, 2024

Shivamogga  Mar 28, 2024  ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಪೂರಕವಾಗಿ ನಾಯಕರು ತಮ್ಮ‌ ಪ್ರಚಾರವನ್ನು ಮುಂದುವರಿಸಿದ್ದಾರೆ. ಇತ್ತ ನಟ  ಶಿವರಾಜ್ ಕುಮಾರ್   ನಿನ್ನೆದಿನ ಹಾರ್ನಹಳ್ಳಿಯಲ್ಲಿ ಪ್ರಚಾರ ಕೈಗೊಂಡಿದ್ದರು.  ಈ ವೇಳೇ ಮಾತನಾಡಿದ ಅವರು,  ಶಿವರಾಜ್‌ ಕುಮಾರ್‌ ಆಗಿ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎನ್ನುವುದು ಅದು ನನ್ನ ಭ್ರಮೆ. ನಾನು ಭ್ರಮೆಯಲ್ಲಿ ಬದುಕುವವನಲ್ಲ. ವಾಸ್ತವದಲ್ಲಿ ಬದುಕುವವನು..

ಗೀತಾರವರ ರಕ್ತದಲ್ಲಿಯೇ ರಾಜಕೀಯವಿದೆ

ಹಾರನಹಳ್ಳಿ ಗ್ರಾಮ ಪೈಲ್ವಾನರಿಗೆ ಪ್ರಖ್ಯಾತಿ  ಇಲ್ಲಿ ಪ್ರತಿಯೋಬ್ಬರು ಪೈಲ್ವಾನುಗಳ ರೀತಿ ಇದ್ದೀರಿ. ಇಲ್ಲಿಂದ ಪ್ರಚಾರ ಮಾಡಿದರೆ ಪಾಸಿಟಿವ್ ವೈಬ್ಸ್ ಇದೆ ಎಂಬುದು ಗೊತ್ತಾಗುತ್ತದೆ.ಶಿವಣ್ಣ ಬಂದಿದ್ರೂ.. ಬಾರದಿದ್ರೂ  ಇಷ್ಟೊಂದು ಜನ ಸೇರಿದ್ದಾರೆ ಎಂದರೆ ಜನರು ಏನೋ ಬದಲಾವಣೆ ಬಯಸಿದ್ದಾರೆ ಎಂಬುದು ಗೊತ್ತಾಗುತ್ತದೆ. ನನಗೆ ರಾಜಕೀಯ ಗೊತ್ತಿಲ್ಲ. ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ನೀವು ಇಷ್ಟೊಂದು ಪ್ರಮಾಣದಲ್ಲಿ ಬಂದಿದ್ದೀರಿ. ನಾನು ನಟನಾಗಿ ಬಂದಿಲ್ಲ. ಗೀತಾ ರ ಗಂಡನಾಗಿ ಬಂದಿದ್ದೇನೆ. ನನಗೆ ಚುನಾವಣೆಗೆ ಸ್ಪರ್ಧಿಸುವಂತೆ ಕೆಲವರು ಹೇಳಿದ್ದರು. ಆದರೆ ನಾನು ನಿರಾಕರಿಸಿದೆ. ನಾವು ಅಲ್ಲಿ ಇಲ್ಲಿ ಸ್ವಲ್ಪ ಸೇವೆ ಮಾಡುತ್ತೇವೆ. ಆದರೆ ಸಾವಿರಾರು ಜನರಿಗೆ ಸೇವೆ ಮಾಡಲು ಆಗುವುದಿಲ್ಲ. ಅದಕ್ಕೆ ಒಂದು ಸಿಸ್ಟಮ್ ಬೇಕಾಗುತ್ತದೆ. ಆ ಸಿಸ್ಟಮ್ ಗಾಗಿ ಗೀತಾ ರವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಗೀತಾರವರ ರಕ್ತದಲ್ಲಿಯೇ ರಾಜಕೀಯವಿದೆ. ಬಂಗಾರಪ್ಪರ ಮಗಳು ಹೇಳಿಕೇಳಿ ಶಿವಮೊಗ್ಗದಲ್ಲಿಯೇ ಹುಟ್ಟಿದವರು. ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿದ್ದು ಸೇವೆ ಮಾಡುವ ಕೆಪಾಸಿಟಿ ಅವರಲ್ಲಿದೆ. 

ಮಾನವೀಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ 

ಗೀತಾ ನನ್ನ ಜೊತೆ 38 ವರ್ಷ ಸಂಸಾರ ಮಾಡಿದ್ದಾರೆ. ರಾಜಕುಮಾರ್ ಸೊಸೆಯಾಗಿ, ಶಿವರಾಜ್ ಕುಮಾರ್ ಹೆಂಡ್ತಿಯಾಗಿ, ನಿರುಪಮ ಮತ್ತು ನಿವೇದಿತಾ ತಾಯಿಯಾಗಿ, ದಿಲೀಪ್ ರವರ ಅತ್ತೆಯಾಗಿ ಅಷ್ಟೊಂದು ಕಾರ್ಯ ನಿರ್ವಹಿಸಿದ್ದಾರೆ. ತಾಯಿಯ ನಂತರ ಶಕ್ತಿಧಾಮವನ್ನು ಗೀತಾ ಮುನ್ನೆಡೆಸುತ್ತಿದ್ದಾರೆ. ಗೀತಾಗೆ ಹೆಣ್ಣು ಮಕ್ಕಳ ಕಷ್ಟ ಏನು ಎಂಬುದು ಗೊತ್ತಿದೆ. ಮಕ್ಕಳು ಯಾವ ರೀತಿಯ ಶಿಸ್ತಿನಿಂದ ಬೆಳೆಸಬೇಕು ಎಂಬ ಅರಿವು ಅವರಿಗಿದೆ. ನಾನು ಅದನ್ನು ಮಾಡ್ತಿನಿ ಇದನ್ನ ಮಾಡ್ತಿನಿ ಅನ್ನೋದು ದೊಡ್ಡ ವಿಷಯವಲ್ಲ. ಮಾನವೀಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯ ಜನರ ಭಾವನೆಗಳಿಗೆ ಹತ್ತಿರವಾಗಬೇಕು. ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಬಹುದು ಎಂಬ ಅರಿವಿರಬೇಕು.ಯಾರಿಗಾದ್ರೂ ಅವಕಾಶ ಕೊಟ್ಟಾಗ ಮಾತ್ರ ಅವರು ಕೆಲಸ ಮಾಡುತ್ತಾರೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.ಅದನ್ನು ಕೊಡುವ ಮೊದಲೇ ಸಾವಿರಾರು ಮಾತುಗಳನ್ನು ಆಡುವುದು ಸುಲಭ. 

ಭಾರತ ನನ್ನದು ಎಂದು ಹೇಳಲು ಸಾಧ್ಯವಿಲ್ಲ

ನಾವು ಚುನಾವಣೆಗೆ ಸ್ಪರ್ಧಿಸಿದ್ದೇವೆ ನೀವು ಚುನಾವಣೆಗೆ ಸ್ಪರ್ಧಿಸಿದ್ದಿರಾ ಸಂತೋಷ. ಇದು ಅಖಾಡ ಇಲ್ಲಿ ಯಾರು ಬೇಕಾದ್ರೂ ಬರಬಹುದು. ಇಲ್ಲಿ ಪರ್ಮಿಷನ್ ಅಗತ್ಯವಿಲ್ಲ. ಭಾರತ ನನ್ನದು ಎಂದು ಹೇಳಲು ಸಾಧ್ಯವಿಲ್ಲ. ಭಾರತ ಎಲ್ಲರಿಗೂ ಸೇರಿದ್ದು. ನನ್ನದು ಎಂದು ಹೇಳಲು ಛಾನ್ಸೇ ಇಲ್ಲ. ಆಗ ಆತ ಒಬ್ಬನೇ ಬದುಕಬೇಕಾಗುತ್ತದೆ. ..ಹಾಗಂತ ಒಬ್ಬನೇ ಬದುಕಲು ಸಾಧ್ಯವೇ…ನಾವು ಇರುವುದು ಜನರೆಂಬ ಸಮಾಜದ ಮಧ್ಯದಲ್ಲಿ. ಮನೆಯಲ್ಲಿ ನಾವು ಮನೆಯಲ್ಲಿ ಸಿಂಹದ ರೀತಿ ರಾಜ ನ ರೀತಿ ಇರಬಹುದು. ಹೊರಗಡೆ ಬಂದಾಗ ನಾವು ಸಾಮಾನ್ಯ ಮನುಷ್ಯರಂತೆ ಓಡಾಡಬೇಕು. ಅವರ ಕಷ್ಟಸುಖಗಳ ಜೊತೆ ಭಾಗಿಯಾಗಬೇಕು. ಆವಾಗ್ಲೆ  ಮನುಷ್ಯನಾಗೋದು.ಆದ್ದರಿಂದ ನಾನು ಸಾಮಾನ್ಯ ಮನುಷ್ಯನಾಗಿ ಬಂದು ಮತ ಕೇಳುತ್ತಿದ್ದೇನೆ. ಗೀತಾರಿಗೆ ಒಂದು ಅವಕಾಶ ಕೊಡಿ. 

ಶಿವರಾಜ್ ಕುಮಾರ್ ಆಗಿ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎನ್ನುವುದು  ನನ್ನ ಭ್ರಮೆ 

ಶಿವರಾಜ್ ಕುಮಾರ್ ಆಗಿ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎನ್ನುವುದು ಅದು ನನ್ನ ಭ್ರಮೆ. ನಾನು ಭ್ರಮೆಯಲ್ಲಿ ಬದುಕುವವನಲ್ಲ. ವಾಸ್ತವದಲ್ಲಿ ಬದುಕುವವನು. ನಾನು ಬಂದರೆ ಗೆಲ್ಲುತ್ತೇನೆ ಎಂಬ ಅಹಂಕಾರ ನನಗಿಲ್ಲ. ನೀವೆಲ್ಲಾ ಸಿನಿಮಾ ನೋಡಿದ್ರೆ ನಾವು ಸೂಪರ್ ಸ್ಟಾರ್ ಆಗೋದು. ಇಲ್ಲ ಅಂದ್ರೆ ಎಲ್ಲಿ ಸೂಪರ್ ಸ್ಟಾರ್..  ನಾನು ಇವತ್ತು ಸ್ಟಾರ್ ಆಗಿರೋದು ನಿಮ್ಮಂತ ಅಭಿಮಾನಿಗಳಿಂದ. ನಾವಾಗಿಯೇ ನನ್ನನ್ನು ಸ್ಟಾರ್ ಮಾಡಿದಿರಿ. ನಾವು ಕಷ್ಟಪಟ್ಟಿವಿ..ಆ ಕಷ್ಟಕ್ಕೆ ನೀವು ಫಲ ಕೊಟ್ರಿ.ಇವತ್ತೂ ಗೀತಾರಿಗೂ ಒಂದು ಅವಕಾಶ ಕೊಡಿ.ನಿಮ್ಮ ಕಷ್ಟಕ್ಕೊಂದು ಫಲ ಕೊಡ್ತಾರೆ. ಬರವಸೆ ಅಷ್ಟೆ. 

ಗೀತಾರನ್ನೇ ತಂಗಿ ಅನ್ಕೊಳ್ಳಿ ಅಕ್ಕ ಅನ್ಕೊಳಿ..ತಾಯಿ ಅಂತಾ ಅನ್ಕೊಳಿ.

ನಿಮ್ಮ ತರ ಅವರು ಹೆಣ್ಣುತಾನೆ,.ಹೆಣ್ಣಿಗೆ ನೀವು ಸಪೋರ್ಟ್ ಮಾಡಿ. ಅಕ್ಕ ತಮ್ಮ ತಾಯಿ ಇಲ್ಲದ ಗಂಡಸರು ಯಾಕೆ ಗೀತಾರನ್ನೇ ತಂಗಿ ಅನ್ಕೊಳ್ಳಿ ಅಕ್ಕ ಅನ್ಕೊಳಿ..ತಾಯಿ ಅಂತಾ ಅನ್ಕೊಳಿ.ಯಾಕೆ ಅನ್ಕೊ ಬಾರದು. ನಿಮ್ಮ ತಾಯಿಗೆ ಒಂದು ಅವಕಾಶ ಕೊಡಬಾರದ ನೀವು. ಒಂದು ಅವಕಾಶ ಕೊಡಿ. ಕೆಲಸ ಮಾಡ್ಲಿಲ್ಲ ಅಂದಾಗೆ ನೀವು ನನಗೆ ಕೇಳಿ. ನಂಬಿಕೆ ಭರವಸೆ ಬೇಕು. ಆ ನಂಬಿಕೆಯನ್ನ ಬೆಳೆಸಿಕೊಳ್ಳಿ. ಅದಕ್ಕೊಸ್ಕರ ಬಂದಿದ್ದೇನೆ. ಇದರಿಂದ ನನಗೇನು ಉಪಯೋಗ ಆಕಬೇಕಾದ್ದಿಲ್ಲ. ಸೇವೆ ಮಾಡಲು ಅವರಿಗೆ ಒಂದು ಅವಕಾಶ ಮಾಡಿಕೊಡಿ. ಅವರ ಹಿಂದೆ ನಾನಿರ್ತೀನಿ. ನನಗೂ 62 ವರ್ಷ ವಯಸ್ಸಾಯಿತು. ಬೇರೆ ಲೈನ್ ನಲ್ಲಿ ಗೀತಾ ರವರಿಗೆ ನಾನು ಸಪೋರ್ಟಿವ್ ಆಗಿರ್ತೀನಿ. ನನ್ ವರ್ಕ್ ಜೊತೆಗೆ ಇದೊಂದು ವರ್ಕ್  ಸೇರಿಕೊಳ್ಳಲಿ. ಹೆಣ್ಣು ಮಕ್ಕಳಿಗೆ ಇದು ಮೋಟಿವೇಷನ್ ಆಗುತ್ತೆ. 

ಮೋಟಿವೇಷನ್ ಇಸ್ ವೆರಿ ಇಂಪಾರ್ಟೆಂಟ್ ನಾಟ್ ವಿನ್ನಿಂಗ್

ನಾನು ವಿನ್ನಿಂಗ್ ಗೊಸ್ಕತ ಬಂದಿಲ್ಲ. ಮನುಷ್ಯ ಯಾವಾಗಲೂ ಗೆಲ್ಲೋದಕ್ಕೆ ಯೋಚಿಸಬಾರದು. ನಮ್ಮಿಂದ ಇನ್ನೊಬ್ಬರು ಹೇಗೆ ಮೋಟಿವೇಷನ್ ಆಗ್ತಾರೆ ಅನ್ನೋದನ್ನ ನೋಡ್ಬೇಕು ಮೋಟಿವೇಷನ್ ಇಸ್ ವೆರಿ ಇಂಪಾರ್ಟೆಂಟ್ ನಾಟ್ ವಿನ್ನಿಂಗ್. ನಾವು ಗೆಲ್ತಿವಿ ಅನ್ನೋದು ಸೆಕೆಂಡರಿ..ನಮ್ಮ ಸ್ಪರ್ದೆ ಇನ್ನೊಬ್ಬರಿಗೆ ಸ್ಪೂರ್ತಿಯಾಗಿರಬೇಕು. ಮೋಟಿವೇಷನ್ ಜೊತೆ ಸ್ಪರ್ದೆಗಿಳಿದಾಗ ವಿನ್ನಿಂಗ್ ತಾನಾಗಿಯೇ ಬರುತ್ತದೆ. ಈ ರೀತಿಯಾಗಿ ಪ್ರತಿಯೊಬ್ಬರು ಯೋಚಿಸಿದಾಗಲೇ ಭಾರತ ಬೆಳೆಯಲು ಸಾಧ್ಯ. ಯೋಚನೆ ಮಾಡಿ ಖುಷಿ ಕೊಡುತ್ತದೆ. 

ನನ್ ಹೆಂಡ್ತಿಗೆ ದಯವಿಟ್ಟು ಒಂದು ಅವಕಾಶ ಕೊಡಿ

ಇಷ್ಟು ಹೇಳ್ತಾ..ನನ್ ಹೆಂಡ್ತಿಗೆ ದಯವಿಟ್ಟು ಒಂದು ಅವಕಾಶ ಕೊಡಿ. ಅವರು ಕೆಲಸ ಮಾಡ್ತಾರೆ.ನಾವ್ ಮಾಡಿಸ್ತೀವಿ. ಈ ಭರವಸೆ ನಾನು ಕೊಡ್ತಾ ಇದ್ದೀನಿ ಎಂದು ಶಿವಣ್ಣ ಹೇಳಿದರು.

ಮುಂದಿನ ಸುದ್ದಿ ಒದಿ

Leave a Comment