FKCCI 16 Business Plan Presentation | ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲಿದೆ ಒಟ್ಟು 10 ಲಕ್ಷದವರೆಗೆ ನಗದು ಬಹುಮಾನ ಗೆಲ್ಲುವ ಅವಕಾಶ !

Shivamogga Feb 13, 2024 |  FKCCI  ಆಯೋಜಿಸುತ್ತಿರುವ 16 ನೇ ‘Business Plan Presentation’  ನಲ್ಲಿ ಪಾಲ್ಗೊಳ್ಳಲು ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಗಳ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿದ್ಯಾರ್ಥಿನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯಿಂದ ಸುತ್ತೊಲೆ ಹೊರಡಿಸಲಾಗಿದ್ದು, ಅದರ ಮೂಲಕ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಪ್ಲಾನ್ ಪ್ರಸಂಟೇಶನ್​ ಕಾರ್ಯಕ್ರಮದ ವಿವರ ಹಾಗೂ ಮಾಹಿತಿಯನ್ನು ನೀಡಿದೆ. 

16 ನೇ ‘Business Plan Presentation ಮೂಲಕ ಕರ್ನಾಟಕದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಲ್ಲಿ ನವೋದ್ಯಮಿಗಳಾಗುವ (Entrepreneurs) ಸ್ಪೂರ್ತಿಯನ್ನುರ ಎಫ್​ಕೆಸಿಸಿಐ  ಬಿತ್ತುತ್ತಿದೆ.

ಈ ವರ್ಷ FKCCI ಮಂಥನ್ ಸ್ಪರ್ಧೆಯ 16ನೇ ಆವೃತ್ತಿಯನ್ನು ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷದವರೆಗೆ ನಗದು ಬಹುಮಾನಗಳನ್ನು ನೀಡುವುದಾಗಿಯೂ ವಿಜೇತರ Business Plan ಗಳನ್ನು ಪ್ರಮುಖ ಜರ್ನಲ್ ಗಳಲ್ಲಿ ಪ್ರಕಟಿಸುವುದಾಗಿಯೂ ಘೋಷಿಸಿದೆ. 

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಕೈಗಾರಿಕಾ ನೇತಾರರು, Incubators ಮತ್ತು Accelerators ಜೊತೆಗೆ F e Incubation facilitation, Funding Opportunities ಇವೇ ಮೊದಲಾದ ಬೆಂಬಲ ಪಡೆದುಕೊಳ್ಳಬಹುದಾಗಿರುತ್ತದೆ. ಈ ಸ್ಪರ್ಧೆಯ ಅಂಗವಾಗಿ ನಡೆಸಲಾಗುವ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶದ ಮೂಲಕ ಹೊಸ Business Idea ಗಳ ಪರಿಚಯ ಮಾಡಿಕೊಳ್ಳಬಹುದಾಗಿರುತ್ತದೆ.

FKCCI ಆಯೋಜಿಸುತ್ತಿರುವ 16ನೇ ‘Business Plan Presentation’ ಸ್ಪರ್ಧೆಯಲ್ಲಿ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕಾಗಿದೆ.

ಸ್ಪರ್ಧೆಯ ವಿವರಗಳು:

1. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಯಾವುದಾದರೂ ಪದವಿ/ಇಂಜಿನಿಯರಿಂಗ್ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ತರಗತಿಗಳಿಗೆ ಅಥವಾ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೊಮಾ ತರಗತಿಗಳಿಗೆ ಪ್ರವೇಶಾತಿ ಪಡೆದಿರಬೇಕು.

2. ಸದರಿ ಸ್ಪರ್ಧೆಗಾಗಿ ಸಲ್ಲಿಸುವ Business Plan ಜೊತೆಗೆ ಕಾಲೇಜು/ಪಾಲಿಟೆಕ್ನಿಕ್/ವಿಶ್ವವಿದ್ಯಾಲಯ ನೀಡಿರುವ ಗುರುತಿನ ಚೀಟಿಯ ಪ್ರತಿ ಅಥವಾ ಈ ಸಂಸ್ಥೆಗಳಿಂದ ವಿದ್ಯಾರ್ಥಿಗಳ ಫೋಟೋವನ್ನು ದೃಢೀಕರಿಸಿರುವ ಪತ್ರವನ್ನು ಲಗತ್ತಿಸಬೇಕಾಗಿರುತ್ತದೆ.

3. ಈ ಸ್ಪರ್ಧೆಗಾಗಿ ಸಲ್ಲಿಸುವ Business Plan ಅನ್ನು ಗರಿಷ್ಠ 4 ವಿದ್ಯಾರ್ಥಿಗಳು ಸೇರಿ ಸಿದ್ಧಪಡಿಸಬಹುದು. ಹೀಗೆ ಸಿದ್ಧಪಡಿಸಿದ Business Planಅನ್ನು ಪ್ರಸ್ತುತಪಡಿಸುವಾಗ 4 ಜನ ವಿದ್ಯಾರ್ಥಿಗಳೂ ಉಪಸ್ಥಿತರಾಗಿರಬೇಕಾಗುತ್ತದೆ.

4. ಒಬ್ಬ ವಿದ್ಯಾರ್ಥಿ/ಒಂದು ತಂಡ ಒಂದಕ್ಕಿಂತ ಹೆಚ್ಚು Business Plan ಗಳನ್ನು ಸ್ಪರ್ಧೆಗಾಗಿ ಸಲ್ಲಿಸಬಹುದಾಗಿದೆ. ಇಂತಹ ಪ್ರತಿ ಸಲ್ಲಿಕೆಯನ್ನೂ ಪ್ರತ್ಯೇಕವಾಗಿ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.

5. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ವಿದ್ಯಾರ್ಥಿ/ಪ್ರತಿ ತಂಡ ನೀಡಬೇಕಾದ ಶುಲ್ಕ ರೂ.999/- (GST ಸೇರಿ) ಆಗಿರುತ್ತದೆ.

6.  www.manthan.fkcci.org ಅಥವಾ  [email protected] ನೀಡಲಾಗಿದ್ದು, ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ವೆಬ್ ಸೈಟಿನಲ್ಲಿ

7. ಸ್ಪರ್ಧೆಯೊಂದಿಗೆ ನಡೆಸಲಾಗುವ knowledge workshops ಮತ್ತು business Plan Presentation ನಲ್ಲಿ ಬಾಗವಹಿಸಲು ಆಯ್ಕೆಯಾಗುವ Outstation ವಿದ್ಯಾರ್ಥಿಗಳು ಪ್ರಯಾಣ ಭತ್ಯೆಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳು ಮೇಲೆ ಸೂಚಿಸಿದ ವೆಬ್‌ಸೈಟಿನಲ್ಲಿ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಲು ಹಾಗೂ ತಮ್ಮ Business Plan ನ synopsis ಸಲ್ಲಿಸಲು ಕೊನೆಯ ದಿನಾಂಕ: 20-02-2024.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು