ಜನನ ಮರಣ ಪ್ರಮಾಣ ಪತ್ರಕ್ಕೂ ಲಂಚ… ಲಂಚ ಕೊಟ್ಟು ವಿಡಿಯೋ ಮಾಡಿಕೊಂಡ ವ್ಯಕ್ತಿ ದಾಖಲೆ ಸಮೇತ ಲೋಕಾಯುಕ್ತ ಪೊಲೀಸರಿಗೆ ದೂರು

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಸಿಬ್ಬಂದಿಗಳಿಗೆ ಧಿಡೀರ್ ಲೋಕಾಯುಕ್ತ ದಾಳಿ ಬೆವರು ಇಳಿಸಿದೆ. ಪಾಲಿಕೆಯ ಜನನ ಮರಣ ನೊಂದಣಾಧಿಕಾರಿ ಕಛೇರಿಯಲ್ಲಿ ಎಪ್.ಡಿ.ಎ ಆಗಿರುವ ನಾಗರಾಜ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಗಿರೀಶ್ ಎಂಬುವರು ತಮ್ಮ ಹೆಂಡತಿ ಸಹೋದರನ ಮಕ್ಕಳ ಹೆಸರಿನ ಇನಿಷಿಯಲ್ ನಲ್ಲಿ ಬದಲಾವಣೆ ಮಾಡಿಸಬೇಕಾಗಿರುತ್ತದೆ. ಹೀಗಾಗಿ ಜನವರಿ ಎರಡರಂದು ಜನನ ಮರಣ ಪ್ರಮಾಣ ನೊಂದಣಾಧಿಕಾರಿ ಕಛೇರಿಗೆ ಆಗಮಿಸಿದ್ದಾರೆ.ಕಛೇರಿಗೆ ಆಗಮಿಸಿ ಜನನ ಪ್ರಮಾಣ ಪತ್ರಕ್ಕಾಗಿ ನಾಗರಾಜ್ ಎಂಬುವರಿಗೆ ಒಂದು ಸಾವಿರ ಹಣವನ್ನು ನೀಡಿರುತ್ತಾರೆ. ಹಣ ಕೊಡುವುದನ್ನು ಗಿರೀಶ್ ವಿಡಿಯೋ ಮಾಡಿಕೊಂಡಿರುತ್ತಾರೆ. ಆ ವಿಡಿಯೋದ ಸಾಕ್ಷಿ ಸಮೇತ ಗಿರೀಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುತ್ತಾರೆ.

 

Laokayukta ride in shimoga

ದೂರಿನ ಮೇರೆಗೆ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ಮತ್ತು ಇನ್ ಸ್ಪೆಕ್ಟರ್ ಸುರೇಶ್ ನೇತ್ರತ್ವದ ತಂಡ ನಾಗರಾಜ್ ಕಛೇರಿಗೆ ಭೇಟಿ ನೀಡಿ ವಿಚಾರಣೆಗೊಳಪಡಿಸಿ ವಶಕ್ಕೆ ಪಡೆದು ದೂರು ದಾಖಲಿಸಿದೆ.

Laokayukta ride in shimoga

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor