ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಕಾರ್ಯಕ್ರಮ ಆರಂಭ! ಸಿಎಂ ಮತ್ತು ಡಿಸಿಎಂ ಆಗಮನ

SHIVAMOGGA |  Jan 12, 2024  |   ಶಿವಮೊಗ್ಗ  ನಗರದ ಫ್ರೀಡಂಪಾರ್ಕ್​ನಲ್ಲಿ ಯುವನಿಧಿ ಯೋಜನೆ ಕಾರ್ಯಕ್ರಮ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಂ ಡಿಕೆ ಶಿವಕುಮಾರ್ ರವರ ಆಗಮನದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸಾವಿರಾರು ಜನರು ವಿದ್ಯಾರ್ಥಿಗಳು ಯುವಕರು ಫ್ರೀಡಂಪಾರ್ಕ್​ನಲ್ಲಿ ಜಮಾಯಿಸಿದ್ದು, ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಇನ್ನೂ ಕಾರ್ಯಕ್ರಮದ ಆರಂಭ ನಾಡಗೀತೆಯೊಂದಿಗೆ ಪ್ರಾರಂಭಗೊಂಡಿತು. ಇದಕ್ಕೂ ಮೊದಲು ವೇದಿಕೆ ಏರಿ ಬಂದ ಸಿಎಂ ಸಿದ್ದರಾಮಯ್ಯ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಚೆನ್ನಬಸಪ್ಪರವರು ಮತ್ತು ಡಿಎಸ್ ಅರುಣ್​ರವರ ಸನ್ಮಾನವನ್ನು ಸ್ವೀಕರಿಸಿದರು. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಬಳಿಕ ಬಂದ ಡಿಸಿಎಂ ಡಿಕೆಶಿವಕುಮಾರ್​ ರವರು ಸಹ ಜನಸ್ತೋಮಕ್ಕೆ ಕೈಮುಗಿದು ಸಿದ್ದರಾಮಯ್ಯರ ಬಳಿಯಲ್ಲಿ ಆಸೀನರಾದರು. ಅವರಿಗೂ ಬಿಜೆಪಿ ಜನಪ್ರತಿನಿಧಿಗಳು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಇನ್ನೂ ಸ್ವಾಗತ ಭಾಷಣವನ್ನು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ನಡೆಸಿಕೊಟ್ಟರು

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಮಧು ಬಂಗಾರಪ್ಪರವರು ಮಾತನಾಡಿ ಫ್ರೀಡಂಪಾರ್ಕ್​ಗೆ ಅಲ್ಲಮಪ್ರಭುರವರ ಹೆಸರನ್ನ ಇಡಬೇಕು ಎಂದುಸಿಎಂ ಬಳಿ ಮನವಿ ಮಾಡಿದರು. ಈ ಬಳಿಕ ತೆಂಗಿನ ಹಿಂಗಾರವನ್ನ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು