ಫ್ರೀಡಂಪಾರ್ಕ್​ನಲ್ಲಿ ಸಿಎಂ ಕಾರ್ಯಕ್ರಮ! ಯುವನಿಧಿ ಯೋಜನೆ ಬಗ್ಗೆ ಪ್ರೆಸ್​ಮೀಟ್! ಸಚಿವರು ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 10, 2024  | ಫ್ರೀಡಂಪಾರ್ಕ್​ನಲ್ಲಿ ಯುವನಿಧಿ ಯೋಜನೆ ಉದ್ಘಾಟನೆ ಸಂಬಂಧ ಇವತ್ತು ಶಿವಮೊಗ್ಗದಲ್ಲಿ ಮತ್ತೊಂದು ಪೂರ್ವ ಸಿದ್ಧತಾ ಸಭೆ ನಡೆಸಿದ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಯುವನಿಧಿ ಯೋಜನೆ 

ಸುದ್ದಿಗೋಷ್ಟಿ ಕರೆದು ಯುವನಿಧಿ ಯೋಜನೆ ಜಾರಿ ಕುರಿತು ಮಾಹಿತಿ ನೀಡಿದ ಸಚಿವರು ಐದನೇ ಗ್ಯಾರಂಟಿ ಯೋಜನೆ ಯುವನಿಧಿ ಇದೇ 12 ರಂದು ಉದ್ಘಾಟನೆ ಯಾಗಲಿದೆ, ನನ್ನ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಜಾರಿಯಾಗ್ತಿದೆ. ಈಗಾಗಲೇ ಎಲ್ಲಾ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು. 

ಮಾತು ಮುಂದುವರಿಸುತ್ತಾ ಮಧು ಬಂಗಾರಪ್ಪರವರು ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಇಷ್ಟಪಡುವುದಿಲ್ಲ. ಐದು ಗ್ಯಾರಂಟಿಗಳಿಂದ ಒಂದು ಗ್ರಾಮ ಪಂಚಾಯತಿಗೆ 75 ಲಕ್ಷ ಅನುದಾನ ಹೋಗ್ತಿದೆ ಎಂದು ವಿವರಿಸಿದರು.  ಅಂದಾಜು ಒಂದು ಕುಟುಂಬಕ್ಕೆ 5 ಸಾವಿರ ರೂಪಾಯಿ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಮೂಲಕ ಹೋಗುತ್ತಿದೆ ಎಂದ ಸಚಿವರು, 

ಇದು ಟೀಕೆ ಮಾಡೋರಿಗೆ ನಮ್ಮ ಉತ್ತರ ಎಂದರು. 

ಅಭಿವೃದ್ದಿ ಕುಂಠಿತ ಆಗುತ್ತಿದೆ ಅನ್ನೋರು ಇದನ್ನು ಗಮನಿಸಲಿ, ಟೀಕೆ- ಟಿಪ್ಪಣಿಗಳು ಯುವನಿಧಿ ಆದ್ಮೇಲೂ ಬರುತ್ತೆ.

ಅದೇ ರೀತಿ ಇನ್ಮುಂದೆ ಅಭಿವೃದ್ಧಿ ಕಾರ್ಯಗಳು ಕೂಡ ಸರಾಗವಾಗಿ ನಡೆಯುತ್ತವೆ. ಜಿಲ್ಲೆಯ ಏಳು ಕ್ಷೇತ್ರದಿಂದ ಅರ್ಜಿ ಹಾಕಿರುವ ಯುವಕರು ಬರ್ತಾರೆ ಎಂದು ತಿಳಿಸಿದರು. 

ಅಕ್ಕಪಕ್ಕದ ಜಿಲ್ಲೆಯಿಂದಲೂ ಕೂಡ ಯುವಜನತೆ ಕಾರ್ಯಕ್ರಮಕ್ಕೆ ಬರ್ತಾರೆ ಎಂದು ತಿಳಿಸಿದ ಸಚಿವರು ಚಿಕ್ಕಮಗಳೂರು, ದಾವಣಗೆರೆ,  ಹಾವೇರಿ, ಕಾರವಾರ, ಚಿತ್ರದುರ್ಗ ದಿಂದ ಬರುತ್ತಾರೆ.  ಯೋಜನೆಗೆ ಮುಂದೆ ನೋಂದಣಿ ಆಗುವವರನ್ನು ಕರೆತರುತ್ತೇವೆ ಎಂದ ಅವರು,  ಸುಮಾರು 1.5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದರು. 

ಯುವನಿಧಿ ಹಣವನ್ನು ಯಾವುದೋ ಕೆಲಸಕ್ಕೆ ಅರ್ಜಿ ಹಾಕಲು ಬಳಸಿಕೊಂಡರೂ ಯೋಜನೆಯ ಉದ್ದೇಶ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಮಧು ಬಂಗಾರಪ್ಪರವರು ಸದ್ಯಕ್ಕೆ 5 ಲಕ್ಷ ಯುವಕರು ಇದರ ಪಲಾನುಭವಿಗಲಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ನೂ ಈ ವೇಳೆ ಮಾತನಾಡಿದ ಸಚಿವರ ಶರಣಪ್ರಕಾಶ್ ಪಾಟೀಲ್​   ರವರು ಈವರೆಗೆ 61 ಸಾವಿರ ಯುವಕರು ನೊಂದಣಿ ಮಾಡಿಕೊಂಡಿದ್ದಾರೆ. ಯುವನಿಧಿ ಕಾರ್ಯಕ್ರಮ ಶಿವಮೊಗ್ಗ ದಲ್ಲಿ ನಡೆಸುತ್ತಿರುವುದು ಖುಷಿಯ ವಿಚಾರ ಎಂದರು. ಅಲ್ಲದೆ  ಯೋಜನೆ ಸ್ವಾಮಿ ವಿವೇಕಾನಂದ ಜನ್ಮ ದಿನ ದಂದು ಆಗುತ್ತಿರುವ ವಿಶೇಷವಾಗಿದೆ. ಯುವಕರಿಗೆ ಸ್ಪೂರ್ತಿ ನೀಡುವ ಹಿನ್ನೆಲೆ ವಿವೇಕಾನಂದರ ಜನ್ಮದಿಂದ ಯುವನಿಧಿ ಯೋಜನೆ ಜಾರಿಯಾಗ್ತಿದೆ ಎಂದು ತಿಳಿಸಿದ್ದು ಯೋಜನೆಗಾಗಿ ಈ ವರ್ಷ 250 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ರು. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor