SHIVAMOGGA | SHIMOGA JAIL| Dec 8, 2023 | ಶಿವಮೊಗ್ಗದ ಹಳೇ ಜೈಲು ಈಗೀಗ ಸಿನಿಮಾಗಳ ಹಾಟ್ ಫೇವರಿಟ್ ಪ್ಲೇಸ್ ಆಗುತ್ತಿದೆ. ಜೈಲಿನ ಶೂಟಿಂಗ್ನ ಅಗತ್ಯವಿದ್ದಾಗಲೆಲ್ಲಾ ಹಳೇಜೈಲನ್ನು ಬಳಸಿಕೊಳ್ಳಲಾಗುತ್ತಿದೆ. ತಮಿಳು ಸಿನಿಮಾ ಸೇರಿದಂತೆ ಈಗಾಗಲೇ ಹಲವು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ.
READ : ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್!
ಈ ಮಧ್ಯೆ ಕನ್ನಡ ಚಿತ್ರ ತಂಡವೊಂದು ಹಳೆಯ ಜೈಲಿನಲ್ಲಿ ಸದ್ದಿಲ್ಲದೇ ಫೈಟ್ ಸೀನ್ವೊಂದನ್ನ ಮುಗಿಸಿಕೊಂಡು ವಾಪಸ್ ಆಗಿದೆ. ಸುಧೀರ್ ಶಾನುಬೋಗ್ ನಿರ್ದೇಶನದ ಧರಣಿ ಸಿನಿಮಾದ ಫೈಟ್ ಸೀನ್ ಒಂದು ಹಳೆಯ ಜೈಲಿನಲ್ಲಿ ಶೂಟ್ ಆಗಿದೆ.
ನಾಯಕನಾಗಿ ಪರಿಚಯವಾಗುತ್ತಿರುವ ಮನೋಜ್ ಕುಮಾರ್, ಶಿವಮೊಗ್ಗ ಜೈಲಿನಲ್ಲಿ ನಡೆದ ಸಾಹಸ ದೃಶ್ಯಗಳಲ್ಲಿ ಅಭಿನಯಿಸಿ ತೆರಳಿದ್ದಾರೆ. ಈ ಸಿನಿಮಾದ ಶೂಟಿಂಗ್ ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚನ್ನಪಟ್ಟಣ ಸೇರಿದಂತೆ ಅನೇಕ ಜಾಗಗಳಲ್ಲಿ ನಡೆಯುತ್ತಿದೆ.