SHIVAMOGGA NEWS / ONLINE / Malenadu today/ Nov 23, 2023 NEWS KANNADA
Shivamogga | Malnenadutoday.com | ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದುವರೆ ತಿಂಗಳು ಕಳೆದರೂ, ಶಿವಮೊಗ್ಗ ಪ್ರತಿಷ್ಟಿತ ಸಹ್ಯಾದ್ರಿ ಕಾಲೇಜಿನಲ್ಲಿ ಇನ್ನೂ ವಿದ್ಯಾರ್ಥಿಗಳಿಗೆ ಪಾಠಗಳು ಆರಂಭವಾಗಿಲ್ಲ. ಕಾರಣ ಏನು ಗೊತ್ತಾ? ಇದುವರೆಗೂ ಅತಿಥಿ ಉಪನ್ಯಾಸಕರ ನೇಮಕವಾಗದೇ ಇರುವುದು . ಈ ಸಂಬಂಧ ಇವತ್ತು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ.
READ: ನವೆಂಬರ್ 25 ರಂದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ?
2020-.2023ರ ಶೈಕ್ಷಣಿಕ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಡಿಗ್ರಿ ಕಾಲೇಜುಗಳ ಬಿ.ಎ/ಬಿ.ಎಸ್ಸಿ/ ಬಿ.ಕಾಂ(ಸ್ನಾತಕ) ತರಗತಿಗಳು ಆಗಸ್ಟ್ 23ಕ್ಕೆ ಮುಗಿದಿದೆ. ಸೆಪ್ಟೆಂಬರ್ 23ರವರೆಗೆ ಪರೀಕ್ಷಾ ಕಾರ್ಯಗಳು ಸೇರಿದಂತೆ ಎಲ್ಲಾ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆದು . ಸೆಪ್ಟೆಂಬರ್ 23ಕ್ಕೆ ಅವರನ್ನು ರಿಲಿವ್ ಮಾಡಲಾಗಿದೆ.
ಈಗ 2022 -23ನೇ ಸಾಲಿನ ಶೈಕ್ಷಣಿಕ ಅವಧಿ ಮುಗಿದು 2023-2024ನೇ ಸಾಲಿಗೆ ವಿದ್ಯಾರ್ಥಿ ಗಳು ಪ್ರವೇಶ ಪಡೆದು ಅವರಿಗೆ ಸೆಪ್ಟೆಂಬರ್ 19 ರಿಂದ ತರಗತಿಗಳು ಆರಂಭವಾಗಿವೆ. ಇವರಿಗೆ ಉಪನ್ಯಾಸ ಮಾಡಬೇಕಾಗಿದ್ದ ಖಾಯಂ ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ಹೋಗಿದ್ದು ಅಕ್ಟೊಂಬರ್ 20ಕ್ಕೆ ಬಂದಿದ್ದಾರೆ. ಅಂದರೆ ಈ ನಡುವಿನ ಒಂದು ತಿಂಗಳು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆದಿಲ್ಲ. ಇದರ ನಡುವೆ ಬಂದ ಹಬ್ಬದ ರಜೆಗಳು ಬೆರೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿವರಿಗೆ ಒಟ್ಟು 50 ದಿನಗಳಷ್ಟು ಪೂರ್ಣವಾಗಿ ತರಗತಿಗಳು ನಡೆದಿಲ್ಲ. ಇದರಿಂದ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
READ :ಶಿವಮೊಗ್ಗ ಟು ಸಿಂಗಾಪುರಕ್ಕೆ ವಿಮಾನ? ಮಾರ್ಚ್ 24 ರ ನಂತರ ಇದೆಯಂತೆ ಬದಲಾವಣೆ! ಏನಿದು ವಿಷಯ!
3 ನೇ ಸೆಮ್ ಮತ್ತು 5ನೇ ಸೆಮ್ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 5ಕ್ಕೆ ತರಗತಿಗಳು ಆರಂಭವಾಗಿವೆ ಆದರೆ ಇಲ್ಲಿವರೆಗೆ ಅವರಿಗೂ ಸಹ ಉಪನ್ಯಾಸ ನಡೆದಿರುವುದಿಲ್ಲ. ನಿಯಾಮವಳಿಯಂತೆ 8 ವಾರಕ್ಕೆ ಕಿರು ಪರೀಕ್ಷೆ ನಡೆಯಬೇಕು. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ನವಂಬರ್ 15 ರಿಂದ ಕಿರು ಪರೀಕ್ಷೆ ಆಯೋಜಿಸುತ್ತಿವೆ. ಆದರೆ ಇಲ್ಲಿ ಏನೂ ಸಹ ನಡೆದಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು
READ : ಸೋಲಾರ್ ಪವರ್ನಿಂದಲೂ ಹುಲ್ಲು ಕಟಾವ್ ಮಾಡಬಹುದು! ಹೊಸನಗರ ಹುಡುಗನ ಹೊಸ ಆವಿಷ್ಕಾರ!
2023-2024 ರ ಶೈಕ್ಷಣಿಕ ಸಾಲಿಗೆ ಆಕ್ಟೊಂಬರ್ 27ಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಪಡೆಯಲಾಗಿದೆ. ಅರ್ಜಿಗಳನ್ನು ಪಡೆದು ಇಷ್ಟು ದಿನಗಳಾದ್ರೂ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲು ಮುಂದಾಗುತ್ತಿಲ್ಲಾ ಕುವೆಂಪು ವಿವಿಯ ಆಡಳಿತ ಮಂಡಳಿ. ಕುಲಪತಿಗಳ ನೇಮಕವಂತು ಆಗಿಲ್ಲಾ ಹಂಗಾಮಿ ಇರುವವರು, ಮತ್ತು ಹಂಗಾಮಿ ರಿಜಿಸ್ಟರ್ ಈ ವಿಷಯಗಳನ್ನು ಗಂಬೀರವಾಗಿ ಪರಿಗಣಿಸದೆ ಇರುವುದು ದುರಂತ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೂಡಲೆ ಮದ್ಯ ಪ್ರವೇಶಿಸಬೇಕು, ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ವಿವಿಗೆ ನಿರ್ದೇಶನ ನೀಡಬೇಕಿದೆ