KARNATAKA NEWS/ ONLINE / Malenadu today/ Nov 2, 2023 SHIVAMOGGA NEWS
SHIVAMOGGA| ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ವಿವೇಕಾನಂದ ಬಡಾವಣೆಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದೆ.
30 ನೇ ತಾರೀಖು ಈ ಘಟನೆ ನಡೆದಿದ್ದು ಹುಟ್ಟಿದಾಗಿನಿಂದ ಪರಿಚಯವಿದ್ದ ಸ್ನೇಹಿತೆಯೇ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉಂಬ್ಳೆಬೈಲ್ ನಿವಾಸಿಯೊಬ್ಬರು ಆಗಾಗ ತುಂಗಾನಗರ ವ್ಯಾಪ್ತಿಯಲ್ಲಿರುವ ಸಂತ್ರಸ್ತರ ಮನೆಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಮೊದಲಿನಿಂದಲೂ ಹೀಗೆ ಬಂದು ಹೋಗುತ್ತಿದ್ದ ಮಹಿಳೆಯ ಮೇಲೆ ಮನೆಯವರಿಗೂ ಯಾವುದೇ ಅನುಮಾನ ಇರಲಿಲ್ಲ.
READ : ಮಲೆನಾಡಿಗರೇ ಎಚ್ಚರ! ಸೀನಿಯರ್ ಸಿಟಿಜನ್ ಮನೆ ಮೇಲೆ ಅರಣ್ಯ ಇಲಾಖೆ ರೇಡ್ | ಅರೆಸ್ಟ್ ತಪ್ಪಿಸಿದ ಶಾಸಕ
ಈ ನಡುವೆ ಕಳೆದ 30 ರಂದು ಮನೆಯ ನಿವಾಸಿ ದೂರುದಾರರು ದುರ್ಗಿಗುಡಿ ಶಾಲೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನ ಕದ್ದು ಪರಾರಿಯಾಗಿದ್ದರು. ಇದನ್ನ ಕಂಡು ತುಂಗಾನಗರ ಪೊಲೀಸ್ ಸ್ಟೇಷನ್ಗೆ ಸಂತ್ರಸ್ತರು ದೂರು ನೀಡಿದ್ದಾರೆ.




