ಕಾಂತಾರ ದರ್ಶನಕ್ಕೆ ಕ್ಷಣಗಣನೆ : ಕಾಂತಾರ ಚಾಪ್ಟರ್ 1 ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ

ಹಂಚಿಕೊಳ್ಳಿ
WhatsApp Facebook X Telegram
Kantara Chapter 1' trailer, released
Kantara Chapter 1' trailer, released

Kanthara chapter 01 trailer :  ಕಾಂತಾರ ದರ್ಶನಕ್ಕೆ ಕ್ಷಣಗಣನೆ :  ಕಾಂತಾರ ಚಾಪ್ಟರ್ 1 ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ

ರಿಶಬ್​ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್​ 01 ಚಿತ್ರ ಅಕ್ಟೋಬರ್​ 02 ರಂದು ವಿಶ್ವದಾಧ್ಯಂತ  ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರತಂಡ ಚಿತ್ರದ ಟ್ರೇಲರ್​ ದಿನಾಂಕವನ್ನು ಘೋಷಿಸಿದೆ. ಕಾಂತಾರ ಚಾಪ್ಟರ್​ 1 ಚಿತ್ರದ ಟ್ರೇಲರ್​ ಸೆಪ್ಟಂಬರ್​ 22 ರಂದು ಸೋಮವಾರ  ಮದ್ಯಾಹ್ನ 12:45 ಕ್ಕೆ ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಗೆ ಇನ್ನು ಕೇವಲ 13 ದಿನಗಳು ಮಾತ್ರ ಉಳಿದಿದ್ದು, ಚಿತ್ರತಂಡ ಇದುವರೆಗೆ ಯಾವುದೇ ರೀತಿಯ ಪ್ರಚಾರವನ್ನು ಆರಂಭಿಸಿರಲಿಲ್ಲ. ಈ ಹಿಂದೆ ಒಂದು ಗ್ಲಿಂಪ್ಸ್ ಮತ್ತು ಚಿತ್ರೀಕರಣದ ಕೆಲವೊಂದು ಕಿರು ತುಣುಕುಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಹಾಗಾಗಿ, ಅಭಿಮಾನಿಗಳು ಟ್ರೇಲರ್‌ಗಾಗಿ ಕಾತುರದಿಂದ ಕಾಯುತ್ತಿದ್ದರು. ಕೆಲವರು ಸೆಪ್ಟೆಂಬರ್ 20ರಂದು ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಊಹಾಪೋಹಗಳನ್ನು ಹಬ್ಬಿಸಿದ್ದರು. ಆದರೆ, ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು, ಹೊಂಬಾಳೆ ಫಿಲಮ್ಸ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಟ್ರೇಲರ್ ದಿನಾಂಕವನ್ನು ಘೋಷಿಸಿದೆ.

2022ರಲ್ಲಿ, ‘ಕಾಂತಾರ’ ಚಿತ್ರದ ಟ್ರೇಲರ್ ಕೂಡ ಸೆಪ್ಟೆಂಬರ್ 5ರಂದು ಬಿಡುಗಡೆಯಾಗಿತ್ತು ಮತ್ತು ಸೆಪ್ಟೆಂಬರ್ 30ರಂದು ಚಿತ್ರ ಬಿಡುಗಡೆಯಾಗಿ ವಿಶ್ವಾದ್ಯಂತ ಭಾರಿ ಯಶಸ್ಸು ಗಳಿಸಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೂ ಅದೇ ರೀತಿಯ ನಿರೀಕ್ಷೆಗಳಿದ್ದು, ಈ ಹೊಸ ಟ್ರೇಲರ್ ಮೂಲಕ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಲಿದೆ. 

Kanthara chapter 01 trailer
Kanthara chapter 01 trailer

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor