ವ್ಯಾಟ್ಸಪ್​ನಲ್ಲಿ ಬಂತೊಂದು ಮೆಸೇಜ್​ : ನಂಬಿದ ವ್ಯಕ್ತಿ ಕಳೆದುಕೊಂಡ ಹಣ ಎಷ್ಟು ಲಕ್ಷ  ಗೊತ್ತಾ….

prathapa thirthahalli
Prathapa thirthahalli - content producer

cyber crime : ಶಿವಮೊಗ್ಗ ಜಿಲ್ಲೆಯ ನವನಗರದ ವ್ಯಕ್ತಿಯೊಬ್ಬರು ವ್ಯಾಟ್ಸಪ್​ನಲ್ಲಿ ಬಂದ ಮೇಸೆಜ್​ ಒಂದನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಹೌದು  ನವನಗರದ ನಿವಾಸಿಯೊಬ್ಬರು ಹೀಗೆ ಮೊಬೈಲ್​ ನೋಡುತ್ತಿರುವಾಗ. ಅಪರಿಚಿತ ಹೂಡಿಕೆ ಕಂಪನಿಯೊಂದರಿಂದ ಮೆಸೇಜ್​ ಬಂದಿದೆ. ಅದನ್ನು ಗಮನಿಸಿದಾಗ ಕಂಪನಿಯವರು ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ದುರುದಾರರಿಗೆ ನಂಬಿಸಿದ್ದಾರೆ. ಇದರಿಂದ ದೂರುದಾರರು ಲಾಭಾಂಶದ ಆಸೆಯಿಂದ ಅದನ್ನು ನಂಬಿ ಕಂಪನಿಯ ಅಪರಿಚಿತರು ನೀಡಿದ ಬ್ಯಾಂಕ್​ ಖಾತೆಗೆ 2 ಲಕ್ಷ ಹಣವನ್ನು ಕಳುಹಿಸಿದ್ದಾರೆ. ನಂತರ ಅಪರಿಚಿತ ಕಂಪನಿ ಲಾಭಾಂಶ ಹಾಗೂ ಹಾಕಿದ ಹಣವನನ್ನೂ ನೀಡಲಿಲ್ಲ ಎಮದು ದುರುದಾರರು ಆರೋಪಿಸಿದ್ದಾರೆ

ಈ ಹಿನ್ನೆಲೆ ವಂಚನೆ ಮಾಡಿದ ಕಂಪನಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳವಂತೆ ಶಿವಮೊಗ್ಗದ ಸಿಇಎನ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

cyber crime

 

TAGGED:
Share This Article