Tree falls on car july 15 : ಚಂದ್ರಗುತ್ತಿಯಲ್ಲಿ ಕಾರಿನ ಮೇಲೆ ಬಿದ್ದ ಮರ: ಇಬ್ಬರಿಗೆ ಗಾಯ

Tree falls on car : ಚಂದ್ರಗುತ್ತಿಯಲ್ಲಿ ಕಾರಿನ ಮೇಲೆ ಬಿದ್ದ ಮರ: ಇಬ್ಬರಿಗೆ ಗಾಯ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಸಂತೆ ಮೈದಾನದಲ್ಲಿ ನಿನ್ನೆ (ಜುಲೈ 14) ಬೃಹತ್ ಮರವೊಂದು ಗಾಳಿಗೆ ಬಿದ್ದು ಓಮಿನಿ ಕಾರ್‌ ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯಲ್ಲಿ ಕಾರಿನ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಿನ್ನೆ ಚಂದ್ರಗುತ್ತಿ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರೀ ಗಾಳಿಯಿಂದಾಗಿ ಅಲ್ಲಿದ್ದ ದೊಡ್ಡ ಮರವೊಂದು ಬುಡಮೇಲಾಗಿದೆ. ಆ ಮರವು ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಓಮಿನಿ ಕಾರ್‌ನ ಮೇಲೆ ಬಿದ್ದಿದ್ದು ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲವಾದರೂ, ಕಾರಿನ ಸಮೀಪದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

Tree falls on car ಓಮಿನಿ ಕಾರ್​ಮೇಲೆ ಬಿದ್ದ ಮರ
Tree falls on car ಓಮಿನಿ ಕಾರ್​ಮೇಲೆ ಬಿದ್ದ ಮರ

Leave a Comment